UP: 180 ದಿನವಾದರೂ ಪತ್ತೆಯಿಲ್ಲ ಅತೀಖ್ ಪತ್ನಿ
-ಪಾತಕಿಯ ಹತ್ಯೆ ನಂತರ ತಲೆಮರೆಸಿಕೊಂಡಿರುವ ಪರ್ವೀನ್ಗಾಗಿ ಮಾರುವೇಷದಲ್ಲಿ ಪೊಲೀಸರ ಶೋಧ
Team Udayavani, Sep 2, 2023, 9:48 PM IST
ಲಕ್ನೋ: ತಲೆಮರೆಸಿಕೊಂಡಿರುವ ಮೃತ ಮಾಫಿಯಾ ಡಾನ್ ಅತೀಖ್ ಅಹ್ಮದ್ ಪತ್ನಿ ಶೈಸ್ತಾ ಪರ್ವೀನ್ಗಾಗಿ ಉತ್ತರ ಪ್ರದೇಶ ಪೊಲೀಸರು ಶೋಧ ಮುಂದುವರಿಸಿದ್ದಾರೆ. 180 ದಿನಗಳು ಕಳೆದರೂ ಪರ್ವೀನ್ ಅಡಗಿರುವ ಸ್ಥಳದ ಕುರಿತು ಪೊಲೀಸರಿಗೆ ಸುಳಿವು ದೊರೆತಿಲ್ಲ. ಹೀಗಾಗಿ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಆಟೋ ಚಾಲಕರು, ಹಾಲು ಮಾರಾಟಗಾರರು ಸೇರಿದಂತೆ ವಿವಿಧ ವೇಷಗಳಲ್ಲಿ ಅಂಡರ್ಕವರ್ ಏಜೆಂಟ್ಗಳಾಗಿ ಪರ್ವೀನ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶ ಪೊಲೀಸರು ಪರ್ವೀನ್ ತಲೆಗೆ 50,000 ರೂ. ಬಹುಮಾನ ಘೋಷಿಸಿದ್ದಾರೆ. ಆಕೆಯ ಬಂಧನಕ್ಕಾಗಿ ಎಲೆಕ್ಟ್ರಾನಿಕ್ ಕಣ್ಗಾವಲಿನ ಮೊರೆ ಹೋಗಿದ್ದಾರೆ.ಪರ್ವೀನ್ ಅಲ್ಲದೇ ಜೈನಾಬ್ ಫಾತಿಮಾ ಮತ್ತು ಆಯಿಷಾ ನೂರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಜೈನಾಬ್ ಫಾತಿಮಾ ಅತೀಖ್ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಪತ್ನಿಯಾಗಿದ್ದಾರೆ. ಆಯಿಷಾ ನೂರಿಯು ಅತೀಖ್ ಮತ್ತು ಅಶ್ರಫ್ ಸಹೋದರಿಯಾಗಿದ್ದಾಳೆ. ಈ ಆರೋಪಿಗಳಿಗಾಗಿ ಪ್ರಯಾಗ್ರಾಜ್ ಗ್ರಾಮಾಂತರ ಪ್ರದೇಶ ಹಾಗೂ ಕೌಶಂಬಿಯಲ್ಲಿ ಅತೀಖ್ ಸಂಬಂಧಿಕರು ಹಾಗೂ ಆಪ್ತರಿರುವ ಮನೆಗಳ ಬಳಿಯಲ್ಲಿ ಮಾರುವೇಷದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.