![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 3, 2023, 12:09 AM IST
ಮಣಿಪಾಲ: ಮಣಿಪಾಲದ ಕೆಎಂಸಿಯಲ್ಲಿ ಮೆಡ್ ಓರಿಯಂಟ್‌ನ ಉದ್ಘಾಟನೆ ಶುಕ್ರವಾರ ವನಮಹೋತ್ಸವದ ಮೂಲಕ ನಡೆಯಿತು.
ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಅವರು ಉದ್ಘಾಟಿಸಿ, ವೈದ್ಯಕೀಯ ಕೌಶಲಗಳು, ಸಮಯಪಾಲನೆ, ಬದ್ಧತೆ ಮತ್ತು ರೋಗಿಗಳು ಬಗ್ಗೆ ಸಮರ್ಪಣ ಭಾವ, ಅಧ್ಯಯನ ಮತ್ತು ಸಹೋದ್ಯೋಗಿಗಳಿಗೆ ಪ್ರಾಮುಖ್ಯವ ನೀಡುವ ಬಗ್ಗೆ ತಿಳಿಸಿದರು.
ನೀಟ್‌ನಲ್ಲಿ ಅಗ್ರ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ಕೆಎಂಸಿ ಮಣಿಪಾಲದ ಸಂಸ್ಥಾಪಕ ಡಾ| ಟಿಎಂಎ ಪೈ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಡಾ| ಗಿರಿಧರ್ ಕಿಣಿ ಅವರು 2023-24 ನೇ ಸಾಲಿನ ವಿದ್ಯಾರ್ಥಿ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಅಸೋಸಿಯೇಟ್ ಡೀನ್ ಡಾ| ಅನಿಲ್ ಭಟ್ ಉಪಸ್ಥಿತರಿದ್ದರು. ನೀಟ್‌ನಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಡಾ| ರೆಹಾನ್ ಹಾಸನ ಮತ್ತು ಡಾ| ಮೆಹರ್ ಬ್ಯಾಟರಿವಾಲಾ ಅವರನ್ನು ಅಭಿನಂದಿಸಲಾಯಿತು.
ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ ಸ್ವಾಗತಿಸಿದರು. ಅಸೋಸಿಯೇಟ್ ಡೀನ್ ಡಾ| ಕೃಷ್ಣಾನಂದ ಪ್ರಭು ವಂದಿಸಿದರು. ಡಾ| ಸುಷ್ಮಾ ಪ್ರಭಾತ್ ಮತ್ತು ಡಾ| ಅನ್ನಾ ಡಿ’ಸೋಜಾ ನಿರೂಪಿಸಿದರು. ಹೊಸದಾಗಿ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳು ಮಣಿಪಾಲದ ಎಂಡ್‌ಪಾಯಿಂಟ್‌ನಲ್ಲಿ ಸಸಿಗಳನ್ನು ನೆಡುವ ಮೂಲಕ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಕ್ಷೇತ್ರದ ಪ್ರಯಾಣ ಆರಂಭಿಸಿದರು.
You seem to have an Ad Blocker on.
To continue reading, please turn it off or whitelist Udayavani.