G20 ಗೂ ಮುನ್ನ ಇಂಡೋನೇಷ್ಯಾಕ್ಕೆ ಪ್ರಧಾನಿ ಮೋದಿ
ಸೆ. 6, 7ರಂದು ಜಕಾರ್ತಾದಲ್ಲಿ ಸಭೆ, 8ರಂದು ಭಾರತದಲ್ಲಿ ಮೋದಿ-ಬೈಡೆನ್ ಮಾತುಕತೆ
Team Udayavani, Sep 3, 2023, 6:12 AM IST
ಹೊಸದಿಲ್ಲಿ: ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆಗೆ ದೊಡ್ಡ ಮಟ್ಟದಲ್ಲಿ ಸಿದ್ಧತೆ ನಡೆದಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ಸೆ. 6 ಮತ್ತು 7ರಂದು ಆಸಿಯಾನ್ ಸಭೆಗೆಂದು ಇಂಡೋನೇಷ್ಯಾಕ್ಕೆ ತೆರಳಲಿದ್ದಾರೆ.
ಜಕಾರ್ತಾದಲ್ಲಿ ನಡೆಯಲಿರುವ ಆಸಿಯಾನ್ ಭಾರತ, ಪೂರ್ವ ಏಷ್ಯಾ ಶೃಂಗಗಳಲ್ಲಿ ಪಾಲ್ಗೊಳ್ಳ ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿಶೇಷವೆಂದರೆ ಸೆ. 9-10ರಂದು ಜಿ20 ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಸೆ. 7ರಂದೇ ಅಮೆರಿಕ ಅಧ್ಯಕ್ಷ ಬೈಡೆನ್ ಕೂಡ ಭಾರತಕ್ಕೆ ಆಗಮಿಸುತ್ತಿದ್ದು, ಸೆ. 8ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಅಮೆರಿಕದ ಶ್ವೇತ ಭವನ ಬೈಡೆನ್ ಅವರ ಭೇಟಿಯನ್ನು ಖಾತರಿ ಪಡಿಸಿದೆ. ದ್ವಿಪಕ್ಷೀಯ ಸಭೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿದೆ. ಇದಲ್ಲದೇ ಹವಾ ಮಾನ ಬದಲಾವಣೆ, ರಷ್ಯಾ- ಉಕ್ರೇನ್ ಸಂಘರ್ಷಗಳಿಂದ ಜಾಗತಿಕ ರಾಷ್ಟ್ರ ಗಳ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮ ಸೇರಿದಂತೆ ಅನೇಕ ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ಶ್ವೇತಭವನ ಪ್ರಕಟನೆೆಯಲ್ಲಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ
Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು
Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್ಬಸ್ ಸ್ಥಾವರ ಉದ್ಘಾಟನೆ
German company; ಖಾಸಗಿತನ ರಕ್ಷಣೆಗಾಗಿ ಡಿಜಿಟಲ್ ಕಾಂಡೋಮ್
Dravidian model ಹೆಸರಲ್ಲಿ ಲೂಟಿ; ಮೊದಲ ಬೃಹತ್ ರ್ಯಾಲಿಯಲ್ಲಿ ಅಬ್ಬರಿಸಿದ ವಿಜಯ್
MUST WATCH
ಹೊಸ ಸೇರ್ಪಡೆ
Potholes: ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು
Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ
Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್
Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!
Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.