Daily Horoscope: ಅವಿವಾಹಿತರಿಗೆ ಶೀಘ್ರ ವಿವಾಹ ಸಂಭವ, ಉದ್ಯೋಗಾಸಕ್ತರಿಗೆ ಶುಭ ಸೂಚನೆ


Team Udayavani, Sep 3, 2023, 7:25 AM IST

1-horoscope

ಮೇಷ: ಗಟ್ಟಿ ನಿರ್ಧಾರದಿಂದ ಒಂದೇ ಗುರಿಯ ಮೇಲೆ ಪ್ರಯತ್ನವನ್ನು ಕೇಂದ್ರೀಕರಿಸಿ. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿ ಅನಿವಾರ್ಯವಾಗಿ ಒದಗಲಿದೆ. ಮನೆಯಲ್ಲಿ ಮಂಗಲ ಕಾರ್ಯದ ಯೋಜನೆ. ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿ.

ವೃಷಭ: ನಿಮ್ಮ ಕಾರ್ಯೋತ್ಸಾಹದ ವೇಗಕ್ಕೆ ತಡೆಯೊಡ್ಡುವ ಪ್ರಯತ್ನವನ್ನು ನಿರ್ಲಕ್ಷಿಸಿರಿ. ಹೊರಗಿನ ಒತ್ತಡಗಳಿಗೆ ಮಣಿಯದೆ ಮುನ್ನುಗ್ಗಿದರೆ ಜಯ ಖಚಿತ. ಹಿರಿಯರಆರೋಗ್ಯ ಸ್ಥಿರ. ಗೃಹಿಣಿಯರ ಸ್ವಂತ ಆದಾಯ ಗಳಿಕೆ ಪ್ರಯತ್ನಕ್ಕೆ ವಿಜಯ.

ಮಿಥುನ: ನಿಮ್ಮ ಕಾಲೆಳೆಯುವ ಪ್ರಯತ್ನಗಳು ಆಗಾಗ ನಡೆಯುತ್ತಿದ್ದರೂ ಅವುಗಳನ್ನು ಕೊಡವಿ ಮುಂದಡಿಯಿಡುವ ಚೈತನ್ಯ ನಿಮ್ಮಲ್ಲಿರುವುದರಿಂದ ವಿಜಯ ನಿಮ್ಮದಾಗಲಿದೆ. ಗೃಹೋಪಕರಣ ವ್ಯಾಪಾರಿಗಳಿಗೆ ಲಾಭ.

ಕರ್ಕಾಟಕ: ಚಿಂತೆಗಳ ಸರಪಣಿಯಿಂದ ನಿಮ್ಮ ಮನಸ್ಸನ್ನು ನೀವೇ ಕಟ್ಟಿಹಾಕಿಕೊಳ್ಳದಿರಿ. ಜಪ, ಧ್ಯಾನಗಳಿಂದ ಯಶಸ್ಸು ಗಳಿಕೆ ಸುಲಭವಾಗುವುದು. ಗೆಳೆಯರಿಂದ ಶುಭ ವಾರ್ತೆ. ಉದ್ಯೋಗ ಅರಸುತ್ತಿರುವವರಿಗೆ ನೌಕರಿ ಸಿಗುವ ಯೋಗ.

ಸಿಂಹ: ನಿಮ್ಮ ಸಾಹಸ ಪ್ರವೃತ್ತಿಯೊಂದಿಗೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಜೋಡಣೆಯಿಂದ ಯಶಸ್ಸಿನ ಜತೆಯಲ್ಲಿ ಜನಾದರವೂ ಪ್ರಾಪ್ತಿ. ಕಿರಿಯ ಸಹಾಯಕರನ್ನು ಪ್ರೋತ್ಸಾಹಿಸುವುದರಿಂದ ಲಾಭದ ಬೆಳವಣಿಗೆ ಸುಲಭ.

ಕನ್ಯಾ: ಅಧಿಕ ಅಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿರಿ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರೋತ್ಸಾಹದಿಂದ ಸಮಾಧಾನ. ದೀರ್ಘ‌ಕಾಲೀನ ಹೂಡಿಕೆಗಳಿಂದ ಲಾಭ ಗಳಿಕೆ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಭವ. ಉದ್ಯೋಗಾಸಕ್ತರಿಗೆ ಶುಭ ಸೂಚನೆ.

ತುಲಾ: ಜಯಾಪಜಯಗಳ ಲೆಕ್ಕಾಚಾರವಿಲ್ಲದೆ ಕಾರ್ಯ ಪ್ರವೃತ್ತರಾಗುವುದರಿಂದ ಮುನ್ನಡೆ. ಪರಿಸರದ ಪ್ರೋತ್ಸಾಹ ಪ್ರಗತಿಗೆ ಪೂರಕ. ದೀರ್ಘ‌ಕಾಲದಿಂದ ನಿರೀಕ್ಷಿಸುತ್ತಿದ್ದ ಧನ ಕೈಸೇರಿ ಸಮಾಧಾನ.ಗೃಹಿಣಿಯರಿಗೆ ಸ್ವಯಂ ಆದಾಯ ವೃದ್ಧಿ.

ವೃಶ್ಚಿಕ: ಧನ ಸಂಚಯ ಮಾಡುವುದರಲ್ಲಿ ವಿಶೇಷ ಆಸಕ್ತಿ. ಕಾರ್ಯರಂಗದಲ್ಲಿ ದಾಪುಗಾಲಿನಿಂದ ಮುನ್ನುಗ್ಗುವ ಆತುರಕ್ಕೆ ಕಡಿವಾಣ ಹಾಕಿಕೊಳ್ಳಿ. ವೈದ್ಯರ ಭೇಟಿ ಸಂಭವ.ಮನೆ ನವೀಕರಣ ಹಾಗೂ ವಿಸ್ತರಣೆಗೆ ಕಾರ್ಯಯೋಜನೆ.

ಧನು: ನಿರೀಕ್ಷಿತ ಮೊತ್ತದ ಧನ ಕೈಸೇರಿ ಸಮಾಧಾನ. ಪರಿಸರದ ಅಭಿವೃದ್ಧಿ ಕಾರ್ಯಗಳಲ್ಲಿ ಆಸಕ್ತಿ. ಹಿರಿಯರ ಆರೋಗ್ಯ ಸ್ಥಿರ. ಮಕ್ಕಳಿಗೆ ಹರ್ಷದ ವಾತಾವರಣ. ಸ್ವಯಂ ಉದ್ಯೋಗಾಸ್ಥರಿಗೆ ಸದವಕಾಶ ಪ್ರಾಪ್ತಿ.

ಮಕರ: ಉದ್ಯೋಗಸ್ಥರಿಗೆ ಶುಭ ಯೋಗ. ಅಲ್ಪಕಾಲದ ಹಣಕಾಸು ಯೋಜನೆಗಳ ಲಾಭ ಪಡೆಯಲು ಸಿದ್ಧರಾಗಿ.ಮಾತು ಕೃತಿಗಳಲ್ಲಿ ತಾಳ್ಮೆಯಿಂದ ವಿಶೇಷ ಲಾಭ. ಯಂತ್ರೋಪಕರಣ ಉದ್ಯಮಿಗಳಿಗೆ ನಿರೀಕ್ಷೆ ಮೀರಿ ಲಾಭ.

ಕುಂಭ: ಮನೆಯಲ್ಲಿ ಎಲ್ಲರ. ಆರೋಗ್ಯ ಸ್ಥಿರ. ಸಂಸಾರ ಸುಖ ಉತ್ತಮ.ದೇವತಾರಾಧನೆ, ದಾನಧರ್ಮಾದಿಗಳಲ್ಲಿ ವಿಶೇಷ ಆಸಕ್ತಿ. ದೂರದಲ್ಲಿರುವ ಮಕ್ಕಳಿಂದ ಶುಭ ಸಮಾಚಾರ. ಉದ್ಯೋಗಸ್ಥರಿಗೂ, ವ್ಯವಹಾರಸ್ಥರಿಗೂ ಅಭಿವೃದ್ಧಿ.

ಮೀನ: ಗುರು ದೇವತಾರಾಧನೆ ಮತ್ತು ಸಮಾಜಸೇವಾ ಚಟುವಟಿಕೆಗಳಲ್ಲಿ ಮಗ್ನರಾಗುವಿರಿ.ಹಳೆಯ ಗೆಳೆಯರೊಬ್ಬರಿಂದ ಹೊಸ ವ್ಯವಹಾರ ಪ್ರಸ್ತಾವ ಮಂಡನೆ. ಹೊಸ ಹೂಡಿಕೆ ಸದ್ಯ ಬೇಡ. ಔಷಧ ವ್ಯಾಪಾರಿಗಳಿಗೆ ಶುಭ ಯೋಗ. ಕಟ್ಟೆ ನಿರ್ಮಾಪಕರಿಗೆ ಅಲ್ಪ ಲಾಭ.ದಂಪತಿಗಳ ನಡುವೆ ಅನುರಾಗ, ಹೊಂದಾಣಿಕೆ ವೃದ್ಧಿ. ಮಕ್ಕಳ ಪುರೋಭಿವೃದ್ಧಿ ಚಿಂತನೆ.

ಟಾಪ್ ನ್ಯೂಸ್

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

1-horoscope

Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.