Iphoneಗಿಂತಲೂ ದುಬಾರಿ ಈ ಫೋನು! ಇದರ ವೈಶಿಷ್ಟ್ಯಗಳೇನು?
Team Udayavani, Sep 3, 2023, 11:15 AM IST
ಸ್ಯಾಮ್ ಸಂಗ್ ತಯಾರಿಸುವ ಫೋನ್ ಗಳಲ್ಲೇ ಅತ್ಯುನ್ನತ ಶ್ರೇಣಿ ಫೋಲ್ಡ್ ಸರಣಿ ಫೋನ್ ಗಳು. ಈ ಸರಣಿಯ ಫೋನ್ ಗಳು ಅತ್ಯಂತ ಐಷಾರಾಮಿ, ದುಬಾರಿ ಮೊಬೈಲ್ ಫೋನ್ ಗಳೂ ಹೌದು. ಐಫೋನ್ 14 ಪ್ರೊ ಮ್ಯಾಕ್ಸ್ ಗಿಂತಲೂ ಹೆಚ್ಚಿನ ದರ ಹೊಂದಿದೆ! ಇದ್ಯಾವ ಫೋನ್ ಅಂದರೆ, ಇತ್ತೀಚೆಗೆ ಸ್ಯಾಮ್ ಸಂಗ್ ಬಿಡುಗಡೆ ಮಾಡಿರುವ ಗೆಲಾಕ್ಸಿ Z ಫೋಲ್ಡ್ 5.
ಇದರ ದರ:
ಗೆಲಾಕ್ಸಿ ಝಡ್ ಫೋಲ್ಡ್ 5 ಫೋನು 12 ಜಿಬಿ ರ್ಯಾಮ್, 256 ಜಿಬಿ ಸ್ಟೋರೇಜ್ 1.55 ಲಕ್ಷ ರೂ., 12 ಜಿಬಿ+512 ಗೆ 1.65 ಲಕ್ಷ ರೂ., 12+1ಟಿಬಿ ಆವೃತ್ತಿಗೆ 1.85 ಲಕ್ಷ ರೂ. ಇದೆ (ಐಫೋನ್ 14 ಪ್ರೊ ಮ್ಯಾಕ್ಸ್ 1 ಟಿಬಿ ದರ 1.78 ಲಕ್ಷ ರೂ. ಇದೆ)
ಈ ಮೊಬೈಲ್ ಫೋನ್ ನ ವೈಶಿಷ್ಟ್ಯಗಳು ಹೀಗಿವೆ:
ವಿನ್ಯಾಸ:
Galaxy Z Fold 5 ಹೊರಭಾಗದಲ್ಲಿ ಇದರ ಹಿಂದಿನ ಫೋನಾಗಿದ್ದ ಫೋಲ್ಡ್ 4 ಅನ್ನು ಹೋಲುತ್ತದೆ. ಅದರೆ ಇದು ಅದಕ್ಕಿಂತ ಸ್ವಲ್ಪ ಹಗುರವಾಗಿದೆ. 253 ಗ್ರಾಂ ತೂಕವನ್ನು ಹೊಂದಿದೆ. ಮಡಿಸಿದಾಗ, ಫೋಲ್ಡ್ 5 ಕೇವಲ 13.4 ಮಿಮೀ ದಪ್ಪವಿದೆ.
ಒಟ್ಟಾರೆ ಗಾತ್ರ ಮತ್ತು ಆಕಾರವು Galaxy Z Fold 4 ನಂತೆಯೇ ಇದೆ. ಸ್ಯಾಮ್ ಸಂಗ್ ಇದರ ವಿನ್ಯಾಸದಲ್ಲಿ ಇನ್ನಷ್ಟು ಬದಲಾವಣೆ ತರಬಹುದೆಂಬ ನಿರೀಕ್ಷೆಯಿತ್ತು. ಆದರೆ ಫೋಲ್ಡ್ 4 ನಲ್ಲಿ ಹಿಂಜ್ ಸ್ವಲ್ಪ ಅಗಲವಾಗಿತ್ತು. ಹೀಗಾಗಿ ಮಡಚಿದಾಗ ಡಿಸ್‌ಪ್ಲೇ ಅಂತರ ಇರುತ್ತಿತ್ತು. ಆದರೆ ಇದರಲ್ಲಿ ಹಿಂಜ್ ಅನ್ನು ನವೀಕರಿಸಿದ್ದು ಮಡಚಿದಾಗ ಗ್ಯಾಪ್ ಕಾಣುವುದಿಲ್ಲ.
ಕ್ಯಾಮೆರಾ ಲೆನ್ಸ್ ಗಳು ಮೇಲಕ್ಕೆ ಉಬ್ಬಿವೆ. ಫೋನಿನ ಹಿಂಭಾಗದ ಪ್ಯಾನೆಲ್ ನಯವಾದ ಫಿನಿಷ್ ಹೊಂದಿದೆ. ಫ್ರೇಂಗಳು ಲೋಹದ್ದಾಗಿದ್ದು, ಬಹಳ ಕಠಿಣವಾಗಿವೆ. ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಕವರ್ ಹೊಂದಿದೆ.
ನೀರು ನಿರೋಧಕ: ಈ ಫೋನು IPX8 ರೇಟಿಂಗ್ ಹೊಂದಿದೆ. ಸಾಮಾನ್ಯವಾಗಿ ಧೂಳು ಮತ್ತು ನೀರು ನಿರೋಧಕವನ್ನು ಎರಡು ಅಂಕೆಗಳಲ್ಲಿ ಕಾಣುತ್ತೇವೆ. (ಉದಾ: ಐಪಿ 68) ಇದರಲ್ಲಿ ಮೊದಲನೆಯ ಸಂಖ್ಯೆ ಧೂಳು ನಿರೋಧಕ ಪ್ರಮಾಣವನ್ನೂ, ಎರಡನೇ ಸಂಖ್ಯೆ ನೀರು ನಿರೋಧಕ ಪ್ರಮಾಣವನ್ನೂ ಸಂಕೇತಿಸುತ್ತದೆ. ಈ ಫೋನಿನಲ್ಲಿ ಸ್ಯಾಮ್ಸಂಗ್ ಐಪಿಎಕ್ಸ್ 8 ಎಂದು ಮಾತ್ರ ನಮೂದಿಸಿದೆ. ಐಪಿ 8 ನೀರು ನಿರೋಧಕ ಪ್ರಮಾಣವನ್ನು ತೋರಿಸುತ್ತದೆ. ಅಂದರೆ ಸುಮಾರು ಅರ್ಧ ಘಂಟೆಯವರೆಗೆ 3 ಮೀಟರ್ ನೀರಿನ ಅಡಿಯಲ್ಲಿ ಈ ಫೋನನ್ನು ಮುಳುಗಿಸಿದರೂ, ನೀರು ಫೋನಿನೊಳಗೆ ಸೇರುವುದಿಲ್ಲ. ಧೂಳು ನಿರೋಧಕ ಪ್ರಮಾಣ ಸಂಖ್ಯೆಯನ್ನು ಸ್ಯಾಮ್ ಸಂಗ್ ನಮೂದಿಸಿಲ್ಲ.
ಪರದೆ:
ಇತರ ಫೋಲ್ಡಬಲ್ ಫೋನ್ ಗಳಂತೆ, ಫೋಲ್ಡ್ 5 ಸಹ ಎರಡು ಪರದೆಗಳೊಂದಿಗೆ ಬರುತ್ತದೆ. ಹೊರಭಾಗದಲ್ಲಿ 6.2-ಇಂಚಿನ ಕವರ್ ಸ್ಕ್ರೀನ್ ಇದೆ, 2316 x 904 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಒಳಗಿನ ಮುಖ್ಯ ಪರದೆ 7.6 ಇಂಚು ಹೊಂದಿದ್ದು, 2176 x 1812 ಪಿಕ್ಸೆಲ್‌ಗಳ ರೆಸಲ್ಯೂಶನ್ ಒಳಗೊಂಡಿದೆ.
ಮಡಚಿದ ಫೋನನ್ನು ತೆರೆದಾಗ ಬರುವ 7.6-ಇಂಚಿನ ಡಿಸ್ಪ್ಲೇಯಿಂದ ವೀಡಿಯೊಗಳು ಮತ್ತು ಫೋಟೋಗಳು ದೊಡ್ಡದಾಗಿ ಕಾಣುತ್ತವೆ. ಹೆಚ್ಚೂ ಕಡಿಮೆ ಒಂದು ಟ್ಯಾಬ್ ನಲ್ಲಿ ವಿಡಿಯೋ/ಚಿತ್ರ ನೋಡಿದಂತೆ ಭಾಸವಾಗುತ್ತದೆ. ಮಾಮೂಲು 6.5 ಇಂಚಿನ ಫೋನನ್ನು ಬಳಸಿದವರಿಗೆ ಇದರ ಪರದೆ, ವಿಶಿಷ್ಟವಾಗಿ ಕಾಣಬರುತ್ತದೆ.
Meta, Netflix ನಂತಹ ಅಪ್ಲಿಕೇಶನ್ ಗಳು 7.6-ಇಂಚಿನ ಮುಖ್ಯ ಪರದೆಗೆ ಉತ್ತಮವಾಗಿ ಹೊಂದುವಂತೆ ಮಾಡಲಾಗಿದೆ. ಫೋಲ್ಡ್ 5 ಎರಡೂ ಪರದೆಗಳಿಗೆ AMOLED ಪ್ಯಾನೆಲ್ಗಳನ್ನು ಹೊಂದಿದೆ. ಅವು ಸಾಕಷ್ಟು ಪ್ರಕಾಶಮಾನವಾಗಿವೆ,
ಒಳಗಿನ ಪರದೆಯ ಮೇಲೆ ನೋಡಿದ ವಿಷಯಗಳನ್ನು ಮಡಚಿದ ನಂತರ ಬರುವ ಮೇಲಿನ ಪರದೆಯಲ್ಲೂ ನೋಡಬಹುದು. ವಿಡಿಯೋ ವೀಕ್ಷಣೆ, ಬರೆಯುವಿಕೆ, ಸಾಮಾಜಿಕ ಜಾಲತಾಣಗಳ ವೀಕ್ಷಣೆಗೆ, ದೊಡ್ಡ ಪರದೆ ಬಳಸಿ, ಕರೆ ಮಾಡಲು ಚಿಕ್ಕ ಪರದೆಯನ್ನು ಬಳಸಬಹುದು.
ಕಾರ್ಯಕ್ಷಮತೆ ಮತ್ತು ಸಾಫ್ಟ್‌ವೇರ್:
Galaxy Z Fold 5 Qualcomm Snapdragon 8 Gen 2 ಪ್ರೊಸೆಸರ್ ಹೊಂದಿದೆ. ಸಾಮಾನ್ಯವಾಗಿ ಈಗ ಬರುವ ಅಂಡ್ರಾಯ್ಡ್ ಫೋನ್ ಗಳ ಅತ್ಯುನ್ನತ ಮಾಡೆಲ್ ಗಳಲ್ಲಿ ಇದೇ ಪ್ರೊಸೆಸರ್ ಅಳವಡಿಸಲಾಗುತ್ತದೆ. ಈ ಫೋನ್ 12GB RAM ಹೊಂದಿದೆ. ಸ್ಯಾಮ್ ಸಂಗ್ ನ One UI 5.1.1 ಜೊತೆಗೆ Android 13 ಕಾರ್ಯಾಚರಣೆ ವ್ಯವಸ್ಥೆ ಹೊಂದಿದೆ.
ಸ್ಯಾಮ್ ಸಂಗ್ನ ಅತ್ಯುನ್ನತ ದರ್ಜೆಯ ಫೋನ್ ಗಳಂತೆಯೇ ಇದರಲ್ಲಿಯೂ ಕಾರ್ಯಾಚರಣೆಯಲ್ಲಿ ಯಾವುದೇ ಅಡೆತಡೆಯಾಗಲೀ, ಕಂಡು ಬರವುದಿಲ್ಲ. ಬಹಳ ವೇಗವಾಗಿ ಕಾರ್ಯಾಚರಿಸುತ್ತದೆ.
ಇದು ಮಡಚಬಹುದಾದ ಫೋನ್ ಆಗಿರುವುದರಿಂದ ಇದು ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಫೋಲ್ಡ್ 5 ನಲ್ಲಿ ಒಂದೊಂದು ಪರದೆಯಲ್ಲಿ ಬೇರೆ ಬೇರೆ ಕೆಲಸಗಳನ್ನುಮಾಡಬಹುದು. ಇದರರ್ಥ ಪ್ರತಿ ಪರದೆಯಲ್ಲಿ ವಿಭಿನ್ನ ಅಪ್ಲಿಕೇಶನ್ ಗಳನ್ನು ಬಳಸಬಹುದು. ಉದಾಹರಣೆಗೆ, ನೆಟ್ ಫ್ಲಿಕ್ಸ್ ಮತ್ತು ಯೂಟ್ಯೂಬ್ ನಂತಹ ಮನರಂಜನಾ ಅಪ್ಲಿಕೇಶನ್ ಗಳು ಒಳಗಿನ ಪರದೆಯಲ್ಲಿದ್ದರೆ, WhatsApp ಅನ್ನು ಚಿಕ್ಕ ಕವರ್ ಸ್ಕ್ರೀನ್ ನಲ್ಲಿ ನೋಡಬಹುದು. ಇನ್ನೊಂದು ಅಂಶವೆಂದರೆ ಕವರ್ ಸ್ಕ್ರೀನ್ ಮತ್ತು ಮುಖ್ಯ ಪರದೆಯ ನಡುವಿನ ಅಪ್ಲಿಕೇಶನ್ ಪರಿವರ್ತನೆ. ಚಿಕ್ಕದಾದ ಕವರ್ ಸ್ಕ್ರೀನ್ ನಲ್ಲಿ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ, ದೊಡ್ಡ ಪರದೆ ತೆರೆದಾಗ ಅದೇ ಅಪ್ಲಿಕೇಷನ್ ದೊಡ್ಡ ಪರದೆಯಲ್ಲೂ ತೆರೆದುಕೊಳ್ಳುತ್ತದೆ.
ಬ್ಯಾಟರಿ:
ಇದರಲ್ಲಿ 4400mAh ಬ್ಯಾಟರಿ ಇದೆ. ಇದು 25W ವೇಗದ ಚಾರ್ಜಿಂಗ್ ಮತ್ತು 15W ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಪ್ರತಿಸ್ಪರ್ಧಿ ಕಂಪೆನಿಗಳು ಅತ್ಯುನ್ನತ ವರ್ಗದ ಫೋನ್ ಗಳಲ್ಲಿ 80ವ್ಯಾಟ್ಸ್, 150 ವ್ಯಾಟ್ಸ್ ತ್ವರಿತ ವೇಗದ ಚಾರ್ಜಿಂಗ್ ಸೌಲಭ್ಯ ನೀಡುತ್ತಿವೆ. ಆದರೆ ಸ್ಯಾಮ್ ಸಂಗ್ ಇನ್ನೂ 25 ವ್ಯಾಟ್ಸ್ ವೇಗದ ಚಾರ್ಜಿಂಗ್ ಸೌಲಭ್ಯ ನೀಡುತ್ತಿರುವುದು ಏಕೋ ಗೊತ್ತಿಲ್ಲ. ಇಷ್ಟು ದೊಡ್ಡ ಮೊತ್ತದ ಫೋನಿನಲ್ಲಿ ಹೆಚ್ಚೆಂದರೆ 30-40 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುವ ಸೌಲಭ್ಯ ಇರಬೇಕಿತ್ತು. ಇದು ಶೂನ್ಯದಿಂದ ಶೇ. 100ರಷ್ಟು ಚಾರ್ಜ್ ಆಗಲು 1 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ. ಮುಂದಿನ ಫೋನ್ ಗಳಲ್ಲಾದರೂ ಬ್ಯಾಟರಿ ವಿಷಯದಲ್ಲಿ ಸ್ಯಾಮ್ ಸಂಗ್ ಅಪ್ ಡೇಟ್ ಆಗಬೇಕಿದೆ.
ಆದರೆ ಚಾರ್ಜಿಂಗ್ ನಿಧಾನವಾದರೂ ಸ್ಯಾಮ್ ಸಂಗ್ ಫೋನ್ ಗಳಲ್ಲಿ ಬ್ಯಾಟರಿ ನಿಧಾನವಾಗಿ ಖಾಲಿಯಾಗುತ್ತದೆ. ಅಂತೆಯೇ ಈ ಫೋನಿನಲ್ಲಿ ದಿನನಿತ್ಯದ ಸಾಧಾರಣ ಬಳಕೆಗೆ ಒಂದು ದಿನ ಬ್ಯಾಟರಿ ಬರುತ್ತದೆ.
ಕ್ಯಾಮೆರಾ:
ಇದರಲ್ಲಿ ಒಟ್ಟು 5 ಕ್ಯಾಮೆರಾಗಳಿವೆ, ಹಿಂಭಾಗದಲ್ಲಿ ಮೂರು ಮತ್ತು ಮುಂಭಾಗದಲ್ಲಿ ಎರಡು. ಹಿಂಭಾಗದಲ್ಲಿ, ಕ್ಯಾಮೆರಾ ಸೆಟಪ್ ಮೂರು ಲೆನ್ಸ್ ಗಳನ್ನು ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಒಳಗೊಂಡಿರುವ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 3x ಜೂಮ್ ಆಪ್ಟಿಕಲ್ ಜೂಮ್ ಮತ್ತು OIS ಜೊತೆಗೆ 10-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ.
ಮುಂಭಾಗದಲ್ಲಿ ಎರಡು ಕ್ಯಾಮೆರಾಗಳಿವೆ. ಅವುಗಳಲ್ಲಿ ಒಂದು ಕವರ್ ಪರದೆಯಲ್ಲಿದೆ. ಇದು 10-ಮೆಗಾಪಿಕ್ಸೆಲ್ ಕ್ಯಾಮೆರಾ. ನಂತರ ಲ್ಯಾಪ್ ಟಾಪ್ ಗಳಲ್ಲಿರುವಂತೆ ಮುಖ್ಯ ಪರದೆಯಲ್ಲಿ ಇನ್ನೂ ಒಂದು 4-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಈ ಕ್ಯಾಮೆರಾವನ್ನು ವೀಡಿಯೊ ಕರೆಗಳಿಗೆ ಬಳಸಬಹುದು. ಸೆಲ್ಫಿಗೆ ಸೂಕ್ತವಲ್ಲ. ಬದಲಿಗೆ, ಸೆಲ್ಫಿಗಾಗಿ 10MP ಕ್ಯಾಮೆರಾವನ್ನು ಬಳಸಬಹುದು. ಇದಲ್ಲದೇ ಒಂದು ಟ್ರಿಕ್ ಮೂಲಕ ಮುಖ್ಯ ಕ್ಯಾಮರಾವನ್ನೇ ಸೆಲ್ಫಿ ಕ್ಯಾಮರವಾಗಿ ಬಳಸುವ ಒಂದು ಮುಖ್ಯ ಅನುಕೂಲ ಫೋಲ್ಡ್ ಫೋನ್ ಗಳಲ್ಲಿದೆ.
ಸ್ಯಾಮ್ಸಂಗ್ ಅತ್ಯುನ್ನತ ದರ್ಜೆಯ ಫೋನ್ಗಳ ಕ್ಯಾಮರಾದ ಫೋಟೋಗಳ ಗುಣಮಟ್ಟ ಅತ್ಯುತ್ತಮ ದರ್ಜೆಯಲ್ಲಿರುತ್ತದೆ. ಹಾಗೆಯೇ ಫೋಲ್ಡ್ 5 ಕ್ಯಾಮರಾ ಕೂಡ ದಕ್ಷವಾಗಿದೆ. ಚಿತ್ರಗಳು ಒಂದು ಉತ್ತಮ ಕ್ಯಾಮರಾದಿಂದ ತೆಗೆದಷ್ಟೇ ಉತ್ತಮ ಫಲಿತಾಂಶ ನೀಡುತ್ತವೆ. ಮಂದ ಬೆಳಕಿನಲ್ಲೂ ಉತ್ತಮ ಚಿತ್ರಗಳು ಮೂಡಿಬರುತ್ತವೆ. ಅತ್ಯುತ್ತಮ ದರ್ಜೆಯ ವಿಡಿಯೋಗಳನ್ನು ಶೂಟ್ ಮಾಡಬಹುದಾಗಿದೆ.
ಇದು ಅತ್ಯಂತ ದುಬಾರಿ ಫೋನ್. ಒಂದು ಟ್ಯಾಬ್ ನಷ್ಟು ಅಗಲವಾದ ಪರದೆ ಇರಬೇಕು. ಆದರೆ ಅದು ಫೋನ್ ನಂತೆ ಒಂದು ಹಿಡಿಯಲ್ಲಿ ಹಿಡಿಯುಂತಿರಬೇಕು ಎಂದು ಬಯಸುವ ಶ್ರೀಮಂತ ವರ್ಗದವರಿಗೆ, ಬಿಸಿನೆಸ್ ವರ್ಗದವರಿಗೆ, ದುಬಾರಿ ಬೆಲೆಯ ಫೋನ್ ಗಳ ಕ್ರೇಜ್ ಇರುವವರಿಗೆ ಇದು ಹೊಂದಿಕೆಯಾಗಬಲ್ಲ ಫೋನ್.
-ಕೆ. ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.