Surathkal : ಸ್ಕೂಟರ್ ಕದ್ದವ ವಾಪಸ್ ತಂದಿರಿಸಿದ!
Team Udayavani, Sep 3, 2023, 8:36 PM IST
ಸುರತ್ಕಲ್: ಇಲ್ಲಿನ ಮೇಲ್ಸೇತುವೆಯ ಕೆಳಭಾಗದಲ್ಲಿ ನಿಲ್ಲಿಸಲಾಗಿಟ್ಟ ಸ್ಕೂಟರನ್ನು ಕದ್ದೊಯ್ದಿದ್ದ ಕಳ್ಳನು ಅದನ್ನು ಮತ್ತೆ ಅದೇ ಸ್ಥಳದಲ್ಲಿ ತಂದಿರಿಸಿ ಆಶ್ಚರ್ಯ ಉಂಟು ಮಾಡಿದ್ದಾನೆ.
ಬೆಳಗ್ಗೆ ಸ್ಥಳೀಯ ಅಧಿಕಾರಿಯೊಬ್ಬರು ಸ್ಕೂಟರನ್ನು ನಿಲ್ಲಿಸಿ ಯಾವುದೋ ಕೆಲಸಕ್ಕೆ ತೆರಳಿದ್ದು, ಅದನ್ನು ಕಳವು ಮಾಡಲಾಗಿತ್ತು. ಅದರಲ್ಲಿ ಅಮೂಲ್ಯ ದಾಖಲೆ ಪತ್ರಗಳು ಇದ್ದವು. ಈ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಆದರೆ ಮರುದಿನ ಸ್ಕೂಟರ್ ಅದೇ ಸ್ಥಳದಲ್ಲಿ ಪತ್ತೆಯಾಗಿದೆ. ಅದನ್ನು ಕೊಂಡು ಹೋದವನು ಯಾಕೆ ವಾಪಸ್ ತಂದಿಟ್ಟಿದ್ದಾನೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಇಲ್ಲಿ ಹೆಚ್ಚಿನವರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದು, ಸಿಸಿಟಿವಿ ಸಹಿತ ಇತರ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.