Moon, ಸೂರ್ಯ ಆಯ್ತು; ಈಗ ನಕ್ಷತ್ರಪುಂಜದತ್ತ ಇಸ್ರೋ ಕಣ್ಣು!

ಎಕ್ಸ್‌ಪೋಸ್ಯಾಟ್‌ ಯೋಜನೆ ಕುರಿತು ಬಹಿರಂಗಪಡಿಸಿದ ಇಸ್ರೋ

Team Udayavani, Sep 5, 2023, 6:45 AM IST

ISROMoon, ಸೂರ್ಯ ಆಯ್ತು; ಈಗ ನಕ್ಷತ್ರಪುಂಜದತ್ತ ಇಸ್ರೋ ಕಣ್ಣು!

ನವದೆಹಲಿ: ಚಂದ್ರ ಮತ್ತು ಸೂರ್ಯನ ಬಳಿಕ ಈಗ ಇಸ್ರೋದ ಗಮನ ನಕ್ಷತ್ರಪುಂಜದತ್ತ ನೆಟ್ಟಿದೆ. ಬ್ರಹ್ಮಾಂಡದಲ್ಲಿನ ಕೆಲವು ನಿಗೂಢ ರಹಸ್ಯಗಳನ್ನು ಭೇದಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ತನ್ನ ಮುಂದಿನ ಯೋಜನೆಯ ಕುರಿತ ಮಾಹಿತಿ ಬಹಿರಂಗಪಡಿಸಿದೆ.

ಚಂದ್ರಯಾನ-3 ಮತ್ತು ಆದಿತ್ಯ ಎಲ್‌1 ಯಶಸ್ಸಿನ ಬೆನ್ನಲ್ಲೇ ಪ್ರಕಾಶಮಾನವಾದ ಖಗೋಳ ಎಕ್ಸ್‌ ಕಿರಣಗಳ ಮೂಲಗಳ ಹಿಂದಿನ ರಹಸ್ಯವನ್ನು ಅರಿಯುವ “ಎಕ್ಸ್‌ಪೋಸ್ಯಾಟ್‌'(ಎಕ್ಸ್‌-ರೇ ಪೋಲಾರಿಮೀಟರ್‌ ಸ್ಯಾಟಲೈಟ್‌) ಪ್ರಾಜೆಕ್ಟ್ ಬಗ್ಗೆ ಇಸ್ರೋ ಘೋಷಿಸಿದೆ.

ನಮ್ಮ ತಾರಾಪುಂಜವು ಎಕ್ಸ್‌ ಕಿರಣಗಳಿಂದ ತುಂಬಿ ಹೋಗಿದೆ. ಈ ಪೈಕಿ ಬಹುತೇಕ ಕಿರಣಗಳು ನಮಗೆ ಕಾಣಿಸುವುದಿಲ್ಲ. ಇವುಗಳ ಮೂಲ ಯಾವುದು ಎಂಬುದೂ ತಿಳಿದಿಲ್ಲ. ಈ ಪ್ರಾಚೀನ ರಹಸ್ಯವು ಹಲವಾರು ವಿಜ್ಞಾನಿಗಳನ್ನು ಗೊಂದಲಕ್ಕೀಡುಮಾಡಿದ್ದೂ ಇದೆ. ಈಗ ಎಕ್ಸ್‌ಪೋಸ್ಯಾಟ್‌ ಯೋಜನೆ ಮೂಲಕ ಈ ಎಕ್ಸ್‌ ಕಿರಣಗಳು ಮತ್ತು ಬೆಳಕುಗಳ ಕುರಿತು ಅಧ್ಯಯನ ನಡೆಸುವ ಲೆಕ್ಕಾಚಾರ ಇಸ್ರೋದ್ದು.

ಪ್ರಮುಖ ಪೇಲೋಡ್‌ಗಳು
ಭೂಮಿಯ ಕೆಳ ಕಕ್ಷೆಯನ್ನು ತಲುಪಲಿರುವ ಈ ಬಾಹ್ಯಾಕಾಶನೌಕೆಯಲ್ಲಿ ಎರಡು ಪ್ರಮುಖ ವೈಜ್ಞಾನಿಕ ಸಲಕರಣೆಗಳು ಇರುತ್ತವೆ. ಈ ಪೈಕಿ ಒಂದು ಪಾಲಿಕ್ಸ್‌(ಪೋಲಾರಿಮೀಟರ್‌ ಇನ್‌ಸ್ಟ್ರೆಮೆಂಟ್‌ ಇನ್‌ ಎಕ್ಸ್‌-ರೇಸ್‌). ಧ್ರುವೀಕರಣದ ಮಟ್ಟ, ಕೋನ ಸೇರಿದಂತೆ ಧ್ರುವೀಯ ಮಾನದಂಡವನ್ನು ಅಳೆಯಲು ಸಾಧ್ಯವಾಗುವಂತೆ ಪಾಲಿಕ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಮಧ್ಯಮ ಪ್ರಮಾಣದ(8-30 ಕಿಲೋ ಎಲೆಕ್ಟ್ರಾನ್‌ ವೋಲ್ಟ್) ಎಕ್ಸ್‌-ರೇ ಶಕ್ತಿಯತ್ತ ಗಮನ ಕೇಂದ್ರೀಕರಿಸಿರುತ್ತದೆ. ಎರಡನೆಯದ್ದು, ಎಕ್ಸ್‌ಸ್ಪೆಕ್ಟ್(ಎಕ್ಸ್‌-ರೇ ಸ್ಪೆಕ್ಟ್ರೋಸ್ಕೋಪಿ ಆ್ಯಂಡ್‌ ಟೈಮಿಂಗ್‌) ಸಾಧನ. ಇದು 0.8ರಿಂದ 15 ಕಿಲೋ ಎಲೆಕ್ಟ್ರಾನ್‌ ವೋಲ್ಟ್ ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್‌ ದತ್ತಾಂಶಗಳನ್ನು ಒದಗಿಸುತ್ತದೆ.

ವಿಶೇಷ ಏಕೆ?
ಕಪ್ಪು ರಂಧ್ರಗಳು, ನ್ಯೂಟ್ರಾನ್‌ ನಕ್ಷತ್ರಗಳು, ಸಕ್ರಿಯ ತಾರಾಪುಂಜಗಳ ನಾಭಿ, ಪಲ್ಸರ್‌ ವಿಂಡ್‌ ನೆಬ್ಯುಲೆ ಸೇರಿದಂತೆ ವಿವಿಧ ಆಕಾಶಕಾಯಗಳ ಕುರಿತು ನಮಗರಿವಿಲ್ಲದ ಕೆಲವು ಮಾಹಿತಿಗಳನ್ನು ಅರಿಯುವುದು ಇಸ್ರೋ ಉದ್ದೇಶವಾಗಿದೆ. ಸ್ಪೆಕ್ಟ್ರೋಸ್ಕೋಪಿಕ್‌ ಮತ್ತು ಟೈಮಿಂಗ್‌ ದತ್ತಾಂಶಗಳ ಮೂಲಕ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯಗಳು ಈ ಆಕಾಶಕಾಯಗಳ ಹೊರಸೂಸುವಿಕೆಯ ಕುರಿತು ಸಾಕಷ್ಟು ಒಳನೋಟಗಳನ್ನು ನೀಡಿದ್ದರೂ, ಈ ಹೊರಸೂಸುವಿಕೆಯ ನಿಖರ ಸ್ವರೂಪವು ಇನ್ನೂ ನಿಗೂಢವಾಗಿಯೇ ಉಳಿದಿದೆ. ಅದನ್ನು ಕಂಡುಹಿಡಿಯುವುದೇ ಇಸ್ರೋ ಗುರಿಯಾಗಿದೆ.

ಟಾಪ್ ನ್ಯೂಸ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.