Kunigal; ಶಾಲೆ ಬಸ್ ಹರಿದು ವಿದ್ಯಾರ್ಥಿ ಭೀಕರ ದುರ್ಮರಣ: ಭಾರಿ ಪ್ರತಿಭಟನೆ

ಆಡಳಿತ ಮಂಡಳಿ ಬೇಜವಾಬ್ದಾರಿ ಖಂಡಿಸಿ ಭಾರಿ ಪ್ರತಿಭಟನೆ; ಪೊಲೀಸರ ಹರಸಾಹಸ

Team Udayavani, Sep 4, 2023, 9:55 PM IST

1-SDSAS

ಕುಣಿಗಲ್ :  ಶಾಲಾ ಬಸ್ ತಲೆಯ ಮೇಲೆ ಬಸ್ ಹರಿದ ಪರಿಣಾಮ, ವಿದ್ಯಾರ್ಥಿ ಸ್ಥಳದಲ್ಲೇ ಭೀಕರವಾಗಿ ದುರ್ಮರಣಕ್ಕೀಡಾದ ಘಟನೆ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.  ಘಟನೆ ಬಳಿಕ ಆಕ್ರೋಶಗೊಂಡ ವಿದ್ಯಾರ್ಥಿ ಪೋಷಕರು, ಸಂಬಂಧಿಕರು, ಗ್ರಾಮಸ್ಥರು ಬಿಜಿಎಸ್ ಶಾಲಾ ಮುಂಭಾಗ ಮೃತನ ಶವವಿಟ್ಟು, ರಸ್ತೆ ತಡೆದು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ತಾಲೂಕಿನ ಎಡಿಯೂರು ಹೋಬಳಿ ಕಟ್ಟಿಗೆಹಳ್ಳಿ ಗ್ರಾಮದ, ಬಿಜಿಎಸ್ ಶಾಲೆಯ ವಿದ್ಯಾರ್ಥಿ, 9 ವರ್ಷದ ಕೆ.ಆರ್.ಮೋಹಿತ್ (ಬಾಲಾಜಿ) ಮೃತ ದುರ್ದೈವಿ.

ಘಟನೆ ವಿವರ

ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ಮೋಹಿತ್ ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.  ತನ್ನ ಗ್ರಾಮದಿಂದ ಶಾಲೆಯ ಬಸ್‌ನಲ್ಲೇ ಶಾಲೆಗೆ ಬಂದು ಹೋಗುತ್ತಿದ್ದ. ಎಂದಿನಂತೆ ಸೋಮವಾರ ಸಹಾ ಮೋಹಿತ್ ತನ್ನ ಶಾಲೆಯ ವಾಹನದಲ್ಲೇ ತನ್ನ ಗ್ರಾಮಕ್ಕೆ ಹೋಗಲು ಸಂಜೆ 4 ಗಂಟೆಗೆ ಶಾಲಾ ಬಸ್ ಹತ್ತಿ ಕುಳಿತಿದ್ದ. ಚಾಲಕ ಬಸ್ ಅನ್ನು ಪಟ್ಟಣದ ಮದ್ದೂರು ರಸ್ತೆ, ಕೊತ್ತಿಪುರ ಮಾರ್ಗವಾಗಿ ಹೇರೂರಿಗೆ ತೆರಳಿ ಅಲ್ಲಿ ವಿದ್ಯಾರ್ಥಿಗಳನ್ನು ಇಳಿಸಿ ಮುಂದೆ ಕಟ್ಟಿಗೆಹಳ್ಳಿಗೆ ಹೋಗುತ್ತಿರಬೇಕಾದರೆ, ಬಸ್‌ನ ಮುಂಭಾಗದ ಬಾಗಿಲು ಇದಕ್ಕಿದಂತೆ ತೆಗೆದುಕೊಂಡಿತ್ತು ಎನ್ನಲಾಗಿದೆ.  ಬಸ್‌ನ ಬಾಗಿಲ ಬಳಿ ಇದ್ದ ಮೋಹಿತ್ ಬಸ್‌ನಿಂದ ಕೆಳಗೆ ಬಿದ್ದಿದ್ದಾನೆ. ಬಸ್‌ನ ಹಿಂಬದಿಯ ಚಕ್ರ ಮೋಹಿತನ ತಲೆಯ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.  ಕುಣಿಗಲ್ ಪೊಲೀಸರು ಬಸ್ ಚಾಲಕ ಸದಾನಂದ ಎಂಬಾತನನ್ನು ಬಂಧಿಸಿದ್ದಾರೆ.

ಶವ ಇಟ್ಟು ಪ್ರತಿಭಟನೆ 

ಮೃತ ವಿದ್ಯಾರ್ಥಿಯನ್ನು ಅಂಬುಲೆನ್ಸ್ ನಲ್ಲಿ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶಾವಾಗಾರಕ್ಕೆ ತರಲಾಯಿತು. ಶವವನ್ನು ಶವಗಾರಕ್ಕೆ ಸಾಗಿಸಲು ಬಿಡದ ವಿದ್ಯಾರ್ಥಿಯ ಸಂಬಂಧಿಕರು ಹಾಗೂ ನೂರಾರು ಗ್ರಾಮಸ್ಥರು ಮಗುವಿನ ಸಾವಿಗೆ ಶಾಲಾ ಆಡಳಿತ ಮಂಡಲಿ ನೇರ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶವವನ್ನು ಶಾಲಾ ಮುಂಭಾಗದಲ್ಲಿ ಇಟ್ಟು ಉಗ್ರ ಪ್ರತಿಭಟನೆ ನಡೆಸಿದರು, ಬಳಿಕ ಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಬಿ.ಎಂ ರಸ್ತೆಯಲ್ಲಿ ಶವವನ್ನು ಇಟ್ಟು ಹಲವು ಸಮಯ ಪ್ರತಿಭಟನೆ ನಡೆಸಿದರು, ನಮಗೆ ನ್ಯಾಯ ಬೇಕೂ ಎಂದರು, ಶಾಲಾ ಆಡಳಿತ ಮಂಡಲಿಯ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸಂಚಾರ ದಲ್ಲಿ ವ್ಯತ್ಯಯ ಉಂಟಾಯಿತು, ಪರಿಸ್ಥತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ರಾಮಕೃಷ್ಣ ದಂಪತಿಗೆ ಮೋಹಿತ್ ಹಾಗೂ ಒಂದು ಹೆಣ್ಣು ಮಗುವಿದ್ದು, ಇವರಲ್ಲಿ ಮೋಹಿತ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದ  ತಂದೆ, ತಾಯಿ ಹಾಗೂ ಗ್ರಾಮಸ್ಥರು ಶಾಲೆ ಬಳಿಗೆ ದೌಡಾಯಿಸಿ ಶವವನ್ನು ನೋಡಿ ಗೋಳಾಡಿದರು.

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಡಾ.ಹೆಚ್.ಡಿ.ರಂಗನಾಥ್, ಮಾಜಿ ಸಚಿವ ಡಿ.ನಾಗರಾಜಯ್ಯ, ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಮೃತನ ಪೋಷಕರನ್ನು ಬೇಟಿಯಾಗಿ ಸಮಾಧಾನ ಪಡಿಸಿದರು, ಬಳಿಕ ಪೊಲೀಸ ರಿಂದ ಘಟನೆ ಸಂಬಂಧ ಮಾಹಿತಿ ಪಡೆದರು.

ಪಟ್ಟು ಬಿಡದ ಪ್ರತಿಭಟನಾಕಾರರು
ಘಟನೆ ನಡೆದು ನಾಲ್ಕು ಗಂಟೆಗಳು ಕಳೆದರೂ ಶಾಲಾ ಆಡಳಿತ ಮಂಡಳಿ ಯಾರೊಬ್ಬರು ಸ್ಥಳಕ್ಕೆ ಬರದ ಕಾರಣ ಕುಪಿತಗೊಂಡ ಪ್ರತಿಭಟನಾಕಾರರು ಶಾಲಾ ಅವರಣಕ್ಕೆ ನುಗ್ಗಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಬಿಜಿಎಸ್ ಶಾಲಾ ಕಾಲೇಜು ಆಡಳಿತಾಧಿಕಾರಿ, ಅದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಪ್ರತಿಭಟನೆಯನ್ನು ಶಾಲಾ ಮುಂಭಾಗದಲ್ಲಿ ಮುಂದುವರೆಸಿದ್ದಾರೆ.

ಟಾಪ್ ನ್ಯೂಸ್

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.