![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 5, 2023, 12:18 AM IST
ಹೊಸದಿಲ್ಲಿ: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಕನಿಷ್ಠ ಕಂಚಿನ ಪದಕವೊಂದನ್ನು ಖಾತ್ರಿಗೊಳಿಸಿದೆ. ಸೋಮವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 3-0 ಅಂತರದಿಂದ ಸಿಂಗಾಪುರವನ್ನು ಮಣಿಸಿತು.
ಏಷ್ಯನ್ ಚಾಂಪಿಯನ್‌ಶಿಪ್ ಟಿಟಿಯಲ್ಲಿ ಸೆಮಿಫೈನಲ್‌ನಲ್ಲಿ ಪರಾಭವಗೊಂಡ ತಂಡಕ್ಕೂ ಕಂಚಿನ ಪದಕ ನೀಡಲಾಗುವುದು.
ಮೊದಲ ಸಿಂಗಲ್ಸ್‌ನಲ್ಲಿ ಭಾರತದ 41 ವರ್ಷಗಳ ಹಿರಿಯ ಆಟಗಾರ ಅಚಂತ ಶರತ್ ಕಮಲ್ ಭಾರೀ ಹೋರಾಟ ನಡೆಸಿ ಇಝಾಕ್ ಕ್ವೆಕ್ ಅವರನ್ನು 11-1, 10-12, 11-8, 11-3, 14-12 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.
ದ್ವಿತೀಯ ಸಿಂಗಲ್ಸ್‌ನಲ್ಲಿ ಜಿ. ಸಥಿಯನ್ 11-6, 11-8, 12-10ರಿಂದ ವ್ಯೂ ಎನ್ ಕೋನ್ ಪಾಂಗ್ ವಿರುದ್ಧ ಜಯ ಸಾಧಿಸಿದರು. ಅನಂತರದ ಮುಖಾಮುಖಿಯಲ್ಲಿ ಜೆ ಯು ಕ್ಲಾರೆನ್ಸ್ ಚ್ಯೂ ವಿರುದ್ಧ ಹರ್ಮೀತ್ ದೇಸಾಯಿ 11-9, 11-4, 11-6ರಿಂದ ಗೆದ್ದು ಬಂದರು.
ಭಾರತವಿನ್ನು ಇರಾನ್ ಅಥವಾ ಚೈನೀಸ್ ತೈಪೆ ವಿರುದ್ಧ ಸೆಮಿಫೈನಲ್ ಆಡಲಿದೆ. ಕಳೆದ ದೋಹಾ ಕೂಟದಲ್ಲಿ ಭಾರತ ಕಂಚಿನ ಪದಕ ಜಯಿಸಿತ್ತು.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.