Daily Horoscope: ಜಪ, ಧ್ಯಾನಗಳಿಂದ ಯಶಸ್ಸು ಗಳಿಕೆ ಸುಲಭ, ಉದ್ಯೋಗಸ್ಥರಿಗೆ ಶುಭ ಯೋಗ
ಒತ್ತಡಗಳಿಗೆ ಮಣಿಯದೆ ಮುನ್ನುಗ್ಗಿದರೆ ಜಯ ಖಚಿತ
Team Udayavani, Sep 5, 2023, 7:29 AM IST
ಮೇಷ: ಗಟ್ಟಿ ನಿರ್ಧಾರದಿಂದ ಒಂದೇ ಗುರಿಯ ಮೇಲೆ ಪ್ರಯತ್ನವನ್ನು ಕೇಂದ್ರೀಕರಿಸಿ. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿ ಅನಿವಾರ್ಯವಾಗಿ ಒದಗಲಿದೆ. ಮನೆಯಲ್ಲಿ ಮಂಗಲ ಕಾರ್ಯದ ಯೋಜನೆ. ಹಿರಿಯರ ಆರೋಗ್ಯ ಸ್ಥಿರ.
ವೃಷಭ: ನಿಮ್ಮ ಕಾರ್ಯೋತ್ಸಾಹದ ವೇಗಕ್ಕೆ ತಡೆಯೊಡ್ಡುವ ಪ್ರಯತ್ನವನ್ನು ನಿರ್ಲಕ್ಷಿಸಿರಿ. ಹೊರಗಿನ ಒತ್ತಡಗಳಿಗೆ ಮಣಿಯದೆ ಮುನ್ನುಗ್ಗಿದರೆ ಜಯ ಖಚಿತ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರ ಸ್ವಂತ ಆದಾಯ ಗಳಿಕೆ ಪ್ರಯತ್ನಕ್ಕೆ ವಿಜಯ.
ಮಿಥುನ: ನಿಮ್ಮ ಕಾಲೆಳೆಯುವ ಪ್ರಯತ್ನಗಳು ಆಗಾಗ ನಡೆಯುತ್ತಿದ್ದರೂ ಅವುಗಳನ್ನು ಕೊಡವಿ ಮುಂದಡಿಯಿಡುವ ಚೈತನ್ಯ ನಿಮ್ಮಲ್ಲಿರುವುದರಿಂದ ವಿಜಯ ನಿಮ್ಮದಾಗಲಿದೆ. ಗೃಹೋಪಕರಣ ವ್ಯಾಪಾರಿಗಳಿಗೆ ಲಾಭ.
ಕರ್ಕಾಟಕ: ಚಿಂತೆಗಳ ಸರಪಣಿಯಿಂದ ನಿಮ್ಮ ಮನಸ್ಸನ್ನು ನೀವೇ ಕಟ್ಟಿಹಾಕಿಕೊಳ್ಳದಿರಿ. ಜಪ, ಧ್ಯಾನಗಳಿಂದ ಯಶಸ್ಸು ಗಳಿಕೆ ಸುಲಭವಾಗುವುದು. ಉತ್ತರದ ಗೆಳೆಯರಿಂದ ಶುಭ ವಾರ್ತೆ. ಉದ್ಯೋಗ ಅರಸುತ್ತಿರುವವರಿಗೆ ನೌಕರಿ ಸಿಗುವ ಯೋಗ.
ಸಿಂಹ: ನಿಮ್ಮ ಸಾಹಸ ಪ್ರವೃತ್ತಿಯೊಂದಿಗೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಜೋಡಣೆಯಿಂದ ಯಶಸ್ಸಿನ ಜೊತೆಯಲ್ಲಿ ಜನಾದರವೂ ಪ್ರಾಪ್ತಿ. ಕಿರಿಯ ಸಹಾಯಕರನ್ನು ಪ್ರೋತ್ಸಾ ಹಿಸುವುದರಿಂದ ಲಾಭದ ಬೆಳವಣಿಗೆ ಸುಲಭ.
ಕನ್ಯಾ: ಅಧಿಕ ಅಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿರಿ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರೋತ್ಸಾಹ ದಿಂದ ಸಮಾಧಾನ. ದೀರ್ಘಕಾಲೀನ ಹೂಡಿಕೆಗಳಿಂದ ಲಾಭ ಗಳಿಕೆ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಭವ. ಉದ್ಯೋಗಾಸಕ್ತರಿಗೆ ಶುಭ ಸೂಚನೆ.
ತುಲಾ: ಜಯಾಪಜಯಗಳ ಲೆಕ್ಕಾಚಾರವಿಲ್ಲದೆ ಕಾರ್ಯಪ್ರವೃತ್ತರಾಗುವುದರಿಂದ ಮುನ್ನಡೆ. ಪರಿಸರದ ಪ್ರೋತ್ಸಾಹ ಪ್ರಗತಿಗೆ ಪೂರಕ. ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದ ಧನ ಕೈಸೇರಿ ಸಮಾಧಾನ. ಗೃಹಿಣಿಯರಿಗೆ ಸ್ವಯಂ ಆದಾಯ ವೃದ್ಧಿ.
ವೃಶ್ಚಿಕ: ಧನ ಸಂಚಯ ಮಾಡುವುದರಲ್ಲಿ ವಿಶೇಷ ಆಸಕ್ತಿ. ಕಾರ್ಯರಂಗದಲ್ಲಿ ದಾಪುಗಾಲಿ ನಿಂದ ಮುನ್ನುಗ್ಗುವ ಆತುರಕ್ಕೆ ಕಡಿವಾಣ ಹಾಕಿಕೊಳ್ಳಿ. ವೈದ್ಯರ ಭೇಟಿ ಸಂಭವ. ಮನೆ ನವೀಕರಣ ಹಾಗೂ ವಿಸ್ತರಣೆಗೆ ಕಾರ್ಯಯೋಜನೆ.
ಧನು: ಹುಡುಕುತ್ತಿದ್ದ ಅವಕಾಶ ತಾನಾಗಿ ಒದಗಿ ಬಂದು ಸಂತೃಪ್ತಿ. ದೇವತಾರಾಧನೆಯತ್ತ ವಿಶೇಷ ಒಲವು. ಮಕ್ಕಳ ಆರೋಗ್ಯ ಸಮಸ್ಯೆ ನಿವಾರಣೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಾಯ. ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಲಭ್ಯ.
ಮಕರ: ಉದ್ಯೋಗಸ್ಥರಿಗೆ ಶುಭ ಯೋಗ. ಅಲ್ಪಕಾಲದ ಹಣಕಾಸು ಯೋಜನೆಗಳ ಲಾಭ ಪಡೆಯಲು ಸಿದ್ಧರಾಗಿ. ಮಾತು ಕೃತಿಗಳಲ್ಲಿ ತಾಳ್ಮೆಯಿಂದ ವಿಶೇಷ ಲಾಭ. ಯಂತ್ರೋಪಕರಣ ಉದ್ಯಮಿಗಳಿಗೆ ನಿರೀಕ್ಷೆ ಮೀರಿ ಲಾಭ. ಅನರೀಕ್ಷಿತ ಧನಾಗಮ.
ಕುಂಭ: ಮನೆಯಲ್ಲಿ ಎಲ್ಲರ ಆರೋಗ್ಯ ಸ್ಥಿರ. ಸಂಸಾರ ಸುಖ ಉತ್ತಮ. ದೇವತಾರಾಧನೆ, ದಾನ ಧರ್ಮಾದಿಗಳಲ್ಲಿ ವಿಶೇಷ ಆಸಕ್ತಿ. ದೂರ ದಲ್ಲಿರುವ ಮಕ್ಕಳಿಂದ ಶುಭ ಸಮಾಚಾರ. ಉದ್ಯೋಗಸ್ಥ ರಿಗೂ ವ್ಯವಹಾರಸ್ಥರಿಗೂ ಅಭಿವೃದ್ಧಿ ಹೊಂದುವ ಯೋಗ. ಕಿರಿಯರ ಆರೋಗ್ಯದ ಮೇಲೆ ಕಣ್ಣಿಡಿರಿ.
ಮೀನ: ಗುರು ದೇವತಾರಾಧನೆ ಮತ್ತು ಸಮಾಜಸೇವಾ ಚಟುವಟಿಕೆಗಳಲ್ಲಿ ಮಗ್ನರಾಗುವಿರಿ. ಹಳೆಯ ಗೆಳೆಯರೊಬ್ಬರಿಂದ ಹೊಸ ವ್ಯವಹಾರ ಪ್ರಸ್ತಾವ ಮಂಡನೆ. ಹೊಸ ಹೂಡಿಕೆ ಸದ್ಯ ಬೇಡ. ಔಷಧ ವ್ಯಾಪಾರಿಗಳಿಗೆ ಶುಭ ಯೋಗ. ದಂಪತಿಗಳ ನಡುವೆ ಅನುರಾಗ, ಹೊಂದಾಣಿಕೆ ವೃದ್ಧಿ. ಮಕ್ಕಳ ಪುರೋಭಿವೃದ್ಧಿ ಚಿಂತನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.