Haveri: 402 ಪ್ರಕರಣಗಳಿಗೆ ಪರಿಹಾರವೇ ಇಲ್ಲ!
Team Udayavani, Sep 5, 2023, 2:25 PM IST
ಹಾವೇರಿ: ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟವಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರ ನಡುವೆ
ಕಾಡುಪ್ರಾಣಿಗಳಿಂದಲೂ ಬೆಳೆ ಹಾನಿಯಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾಡುಪ್ರಾಣಿಗಳಿಂದ ಉಂಟಾದ ಬೆಳೆನಷ್ಟವಾಗಿರುವ 402 ಪ್ರಕರಣಗಳಿಗೆ ಪರಿಹಾರ ಸಿಗದೆ ರೈತರು ಪರಿತಪಿಸುತ್ತಿದ್ದಾರೆ.
ಕೃಷಿ ಪ್ರಧಾನ ಜಿಲ್ಲೆಯಲ್ಲಿ ಮಾನವ-ವನ್ಯಜೀವ ಸಂಘರ್ಷ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಲ್ಲದೇ ಪ್ರತಿವರ್ಷ ನೈಸರ್ಗಿಕ ವಿಕೋಪ ರೈತರನ್ನು ಕಂಗಾಲಾಗಿಸುತ್ತಿದೆ. ಒಮ್ಮೆ ಅತಿ ಮಳೆಯಿಂದ ಬೆಳೆ ಹಾಳಾದರೆ, ಈಗ ಮಳೆಯಿಲ್ಲದೇ ಬೆಳೆ ಬಾಡಿ
ರೈತರು ಬಿತ್ತನೆಗೆ ಮಾಡಿದ ಖರ್ಚು ಕೂಡ ಕೈಗೆ ಸಿಗುವ ಸಾಧ್ಯತೆ ಕಡಿಮೆಯಾಗುತ್ತಿದೆ.
ಇದರೊಂದಿಗೆ ಕಾಡುಪ್ರಾಣಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ರೈತರನ್ನು ಕಂಗಾಲಾಗಿಸಿದೆ. ಅದರಲ್ಲೂ ಕೃಷ್ಣಮೃಗ, ಕಾಡುಹಂದಿ ದಾಳಿಯಿಂದ ಪ್ರತಿ ವರ್ಷವೂ ಬೆಳೆ ಹಾಳಾಗುತ್ತಿದೆ. 2017-18ನೇ ಸಾಲಿನಿಂದ 2022-23ನೇ ಸಾಲಿನವರೆಗೆ, ಅಂದರೆ ಆರು ವರ್ಷಗಳಲ್ಲಿ 3,770 ಬೆಳೆಹಾನಿ ಪ್ರಕರಣಗಳು, 129 ಸಾಕುಪ್ರಾಣಿ ಹತ್ಯೆ ಹಾಗೂ 23 ಮಾನವ ಗಾಯ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ದಾಖಲಾಗಿವೆ.
2022-23ನೇ ಸಾಲಿನಲ್ಲಿ ರೈತರ ಹೊಲಗಳಿಗೆ ಕಾಡುಪ್ರಾಣಿಗಳು ಲಗ್ಗೆಯಿಟ್ಟ ಪರಿಣಾಮ ಬರೋಬ್ಬರಿ 969 ಬೆಳೆಹಾನಿ ಪ್ರಕರಣಗಳು ದಾಖಲಾಗಿವೆ. ವನ್ಯಜೀವಿಗಳ ದಾಳಿಗೆ 33 ಸಾಕುಪ್ರಾಣಿಗಳು ಬಲಿಯಾಗಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಕಳೆದ ಆರು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದ ಪ್ರಕರಣಗಳು ಗರಿಷ್ಠ ಎನಿಸಿವೆ. 18 ಲಕÒ ರೂ. ಬಾಕಿ: 2022-23ನೇ ಸಾಲಿನಲ್ಲಿ 969 ಬೆಳೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ವಿವಿಧ ರೈತರಿಗೆ 36.26 ಲಕ್ಷ ರೂ. ಪಾವತಿಸಬೇಕಿತ್ತು. ಅದರಲ್ಲಿ 2023ರ ಮಾರ್ಚ್ ವೇಳೆಗೆ 542 ಪ್ರಕರಣಗಳಿಗೆ 21.26 ಲಕ್ಷ ವನ್ನು ರೈತರಿಗೆ ಪಾವತಿ ಮಾಡಲಾಗಿದೆ.
ನಂತರ 2023-24ನೇ ಸಾಲಿನಲ್ಲಿ ಬಿಡುಗಡೆಯಾದ 15 ಲಕ್ಷವನ್ನು 25 ಬೆಳೆಹಾನಿ ಪ್ರಕರಣಗಳ ಸಂತ್ರಸ್ತ ರೈತರಿಗೆ ವಿತರಿಸಲಾಗಿದೆ. ಇನ್ನೂ 402 ಬೆಳೆಹಾನಿ ಪ್ರಕರಣಗಳಿಗೆ 13.49 ಲಕ್ಷ ರೂ. ಪಾವತಿಸುವುದು ಬಾಕಿ ಇದೆ. ಕಳೆದ ವರ್ಷವೇ ಬೆಳೆ ಹಾನಿಯಾಗಿ ಈ ಸಂಬಂಧ ಅರ್ಜಿ ಸಲ್ಲಿಸಿದ್ದರೂ ಪರಿಹಾರ ತಕ್ಷಣವೇ ಸಿಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
2022-23ನೇ ಸಾಲಿನಲ್ಲಿ 33 ಸಾಕುಪ್ರಾಣಿ ಹತ್ಯೆ ಪ್ರಕರಣಗಳ ಪೈಕಿ 12 ಪ್ರಕರಣಗಳಿಗೆ 45,683 ಮೊತ್ತ ಪಾವತಿಸಲಾಗಿದೆ. ಇನ್ನೂ 21 ಪ್ರಕರಣಗಳಿಗೆ 4.89 ಲಕ್ಷ ರೂ. ಪರಿಹಾರ ನೀಡುವುದು ಬಾಕಿ ಇದೆ. 12 ಮಾನವ ಗಾಯ ಪ್ರಕರಣಗಳಲ್ಲಿ 5 ಪ್ರಕರಣಗಳಿಗೆ 31,974
ರೂ. ಪರಿಹಾರ ನೀಡಲಾಗಿದೆ. ಇನ್ನೂ 7 ಪ್ರಕರಣಗಳಿಗೆ 13,709 ರೂ. ಪರಿಹಾರ ನೀಡುವುದು ಬಾಕಿ ಇದೆ.
ಪರಿಹಾರ ವಿತರಣೆ: ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳಿಗೆ ಸಂಬಂಧಿಸಿದಂತೆ 2016-17ನೇ ಸಾಲಿನಲ್ಲಿ 54 ಲಕÒ, 2017-18ನೇ ಸಾಲಿನಲ್ಲಿ 16 ಲಕ್ಷ, 2018-19ನೇ ಸಾಲಿನಲ್ಲಿ 10 ಲಕÒ, 2019-20ನೇ ಸಾಲಿನಲ್ಲಿ 15 ಲಕÒ, 2020-21ನೇ ಸಾಲಿನಲ್ಲಿ 15 ಲಕ್ಷ ರೂ. ಪರಿಹಾರವನ್ನು ಅರಣ್ಯ ಇಲಾಖೆ ಸಂತ್ರಸ್ತ ರೈತರಿಗೆ ಪಾವತಿಸಿದೆ. ಹಿರೇಕೆರೂರು, ಹಾನಗಲ್ಲ, ದುಂಡಶಿ ಅರಣ್ಯ
ವಲಯದಲ್ಲಿ ಚಿರತೆಗಳ ಕಾಟ, ಹಾವೇರಿ ಮತ್ತು ಬ್ಯಾಡಗಿ ವಲಯಗಳಲ್ಲಿ ಕೃಷ್ಣಮೃಗಗಳಿಂದ ಬೆಳೆ ಹಾನಿ ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ.
ಮಳೆಗಾಲದಲ್ಲಿ ರೈತರ ಜಮೀನುಗಳಲ್ಲಿ ಬೆಳೆ ಮೊಳಕೆಯೊಡೆದು ಭೂಮಿಯಿಂದ ಮೇಲೆ ಬರುತ್ತಿದ್ದಂತೆ ಕೃಷ್ಣಮೃಗ, ಜಿಂಕೆಗಳು ಜಮೀನುಗಳಿಗೆ ನುಗ್ಗಿ ಬೆಳೆಯ ಚಿಗುರನ್ನು ತಿನ್ನುತ್ತಿವೆ. ಕಾಡುಹಂದಿಗಳು ಬೆಳೆ ನಾಶ ಮಾಡುತ್ತಿವೆ. ಮೊದಲೇ ಸಂಕಷ್ಟದಲ್ಲಿರುವ
ನಮಗೆ ಕಾಡುಪ್ರಾಣಿಗಳಿಂದಾಗುವ ಬೆಳೆ ಹಾನಿಗೆ ತಕÒಣ ಪರಿಹಾರ ಸಿಗುವಂತೆ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.
ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಅನುದಾನವನ್ನು ರೈತರಿಗೆ ನೀಡಿದ್ದೇವೆ. ಬಾಕಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಬೆಳೆ ಹಾನಿಯಾದರೆ ರೈತರು ಇಲಾಖೆ ಗಮನಕ್ಕೆ ತರಬೇಕು.
ಬಾಲಕೃಷ್ಣ ಎಸ್, ಡಿಸಿಎಫ್ ಹಾವೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.