Farmers: ಹಸಿರು ಮೇವು ಬೆಳೆಯಲು 3 ಸಾವಿರ ರೂ. ಪ್ರೋತಾಹ ಧನ

Team Udayavani, Sep 5, 2023, 5:06 PM IST

Farmers: ಹಸಿರು ಮೇವು ಬೆಳೆಯಲು 3 ಸಾವಿರ ರೂ. ಪ್ರೋತಾಹ ಧನ

ಕೋಲಾರ: ಕೋಚಿಮುಲ್‌(ಕೋಲಾರ- ಚಿಕ್ಕಬ ಳ್ಳಾಪುರ) ಒಕ್ಕೂಟದ ವ್ಯಾಪ್ತಿಯಲ್ಲಿ ಹಸಿರು ಮೇವು ಬೆಳೆಯಲು ರೈತರಿಗೆ ಎಕರೆಗೆ 3 ಸಾವಿರ ರೂ. ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದೆ.

ಒಕ್ಕೂಟ ವ್ಯಾಪ್ತಿ ರಾಸುಗಳಿಗೆ ಅವಶ್ಯವಿರುವ ಹಸಿರು ಮೇವನ್ನು ನೀಗಿಸಲು ಹಾಗೂ ಹಸಿರು ಮೇವು ಅಭಿವೃದ್ಧಿಗೊಳಿಸಲು ನೀರಾವರಿ ಸೌಲಭ್ಯವುಳ್ಳ ಭೂಮಾಲೀಕರು, ಹಾಲು ಉತ್ಪಾದಕರಿಗೆ ಒಕ್ಕೂ ಟದ ವತಿಯಿಂದ ಪ್ರತಿ ಎಕರೆಗೆ 3 ಸಾವಿರ ರೂ. ಪ್ರೋತ್ಸಾಹಧನವನ್ನು ಪಾವತಿಸಲು ಮತ್ತು ಶೇ.50ರಷ್ಟು ರಿಯಾಯಿತಿ ದರದಲ್ಲಿ ವಿತರಿಸಿ ಒಕ್ಕೂಟ, ಸಂಘ ಮತ್ತು ಉತ್ಪಾದಕರ ತ್ರಿಪಕ್ಷೀ ಯ ಕರಾರಿನೊಂದಿಗೆ ಹಸಿರು ಮೇವು ಬೆಳೆಯ ಲು ಯೋಜನೆಯನ್ನು ರೂಪಿಸಲು ನಿರ್ಧರಿಸಲಾಗಿದೆ.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ 11 ತಾಲೂಕುಗಳ ವ್ಯಾಪ್ತಿಯಲ್ಲಿ ಮುಂಗಾರು ಮಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ ಹಸಿರು ಮೇವು ಕೊರೆತೆಯಿಂದ ಮುಂದಿನ ದಿನಗಳಲ್ಲಿ ಹಾಲಿನ ಶೇಖರಣೆ ಕಡಿಮೆಯಾಗು ವುದನ್ನು ನಿರೀಕ್ಷಿಸಿ ಸೆ.4 ನಡೆದ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಯಿತು.

ಈ ಯೋಜನೆಯನ್ನು ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ 250 ಎಕರೆ, ಗರಿಷ್ಠ ಎಷ್ಟು ಬೇಕಾದರೂ ಬೆಳೆಯುವಂತೆ ಅವಕಾಶ ಕಲ್ಪಿಸಿರುವುದರಿಂದ ಅಂದಾಜು ವೆಚ್ಚ 2.5 ಕೋಟಿ ರೂ. ವರೆಗೂ ವೆಚ್ಚವಾಗಲಿದೆ. ಈ ಯೋಜನೆಯನ್ನು ರಾಜ್ಯ ವ್ಯಾಪ್ತಿಯ 14 ಹಾಲು ಒಕ್ಕೂಟಗಳ ಪೈಕಿ ಮೊದಲ ಬಾರಿಗೆ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಜಾರಿಗೆ ತರುತ್ತಿದೆ. ಇದ್ದರಿಂದ ಹಾಲು ಉತ್ಪಾದಕರ ಹಸಿರು ಮೇವಿನ ಕೋರತೆ ನೀಗಿಸುವುದಲ್ಲದೆ ಹಾಲು ಉತ್ಪಾದಕರ ಆರ್ಥಿಕತೆಯನ್ನು ಸಹ ಹೆಚ್ಚಿಸಲು ಸಹಾಯ ಮಾಡುವಂತಾಗಿದೆ.

ಈ ಯೋಜನೆಯನ್ನು ಉಭಯ ಜಿಲ್ಲೆಗಳ ಹಾಲು ಉತ್ಪಾದಕರು ಸದುಪಯೋಗಪಡಿ ಸಿಕೊಂಡು ಹಾಲಿನ ಶೇಖರಣೆಯನ್ನು ಹೆಚ್ಚಿಸಲು ಕೋಚಿ ಮುಲ್‌ ಆಡಳಿತ ಮಂಡಳಿ ಕೋರಿದೆ. ಸೋಮವಾರ ನಡೆದ ಸಭೆಯಲ್ಲಿ ಒಕ್ಕೂಟದ ಆಡಳಿತ ಮಂಡಲಿ ಸದಸ್ಯರಾದ ಕೆ.ಎನ್‌. ನಾಗರಾಜ್‌, ಮಂಜುನಾಥರೆಡ್ಡಿ, ಜೆ.ಕಾಂತರಾಜ್‌, ವೈ.ಬಿ. ಅಶ್ವತ್ಥನಾರಾಯಣ, ಆರ್‌.ಶ್ರೀನಿವಾಸ್‌, ಎನ್‌.ಸಿ. ವೆಂಕಟೇಶ್‌, ಎನ್‌.ಹನುಮೇಶ್‌, ಆದಿನಾರಾಯಣ ರೆಡ್ಡಿ, ಸುನಂದಮ್ಮ, ಕಾಂತಮ್ಮ, ಸಹಕಾರ ಸಂಘ ಗಳ ಉಪನಿಬಂಧಕರಾದ ಮಂಜುಳಾ, ಪಶು ಇಲಾಖೆ ಉಪನಿರ್ದೇಶಕ ಡಾ: ಜಿ.ಟಿ. ರಾಮಯ್ಯ, ಕೆ ಎಂಎಫ್‌ ಪ್ರ ತಿ ನಿಧಿ ಡಾ.ಪಿ.ಬಿ.ಸುರೇಶ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ಗೋಪಾಲಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಲೀಟರ್‌ಗೆ 34.40 ರೂ. ಪಾವತಿ: ರಾಜ್ಯದಲ್ಲೇ ಅತಿ ಹೆಚ್ಚು ದರ: ಒಕ್ಕೂಟದ ಆಡಳಿತ ಮಂಡಲಿಯು ಹಾಲು ಉತ್ಪಾದಕರ ಸಮಾಜಿಕ ಮತ್ತು ಆರ್ಥಿಕ ಏಳಿಗೆಗಾಗಿ ಕಾಲಕಾಲಕ್ಕೆ ಅವಶ್ಯವಿರುವ ಉಪಕರಣಗಳು, ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ನೀಡುವು ದಲ್ಲದೆ, ನೆರೆಯ ಹಾಲು ಒಕ್ಕೂಟಗಳಾದ ಬೆಂಗ ಳೂರು, ಮಂಡ್ಯ ಮತ್ತು ಹಾಸನ ನೀಡುತ್ತಿರುವ ಹಾಲು ಖರೀದಿ ದರಕ್ಕಿಂತ ಹೆಚ್ಚಿನ ದರ 34.40 ರೂ. ರಂತೆ ಹಾಲು ಉತ್ಪಾದಕರಿಗೆ ಪಾವತಿಸಲಾಗುತ್ತಿದೆ.

ಟಾಪ್ ನ್ಯೂಸ್

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.