Kalaburagi: ಮಳೆಯಿಂದ ಬಾಡುತ್ತಿದ್ದ ಬೆಳೆಗಳಿಗೆ ಜೀವಕಳೆ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಆಸರೆ ಕಲ್ಪಿಸಿದೆ.

Team Udayavani, Sep 5, 2023, 3:40 PM IST

Kalaburagi: ಮಳೆಯಿಂದ ಬಾಡುತ್ತಿದ್ದ ಬೆಳೆಗಳಿಗೆ ಜೀವಕಳೆ

ಜೇವರ್ಗಿ: ಕಳೆದ ಜೂನ್‌ನಲ್ಲಿಯೆ ಬಹುತೇಕ ರೈತರು ಪ್ರಮುಖ ವಾಣಿಜ್ಯ ಬೆಳೆಗಳಾದ ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಬಿತ್ತನೆ ಮಾಡಿದ್ದರು. ಆಗ ಸಮರ್ಪಕ ಮಳೆಯಾಗಿರಲಿಲ್ಲ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಾಡಿ ಹೋಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ತುಂಬಿದಂತಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ಜೂನ್‌ನಲ್ಲಿ ವಾಡಿಕೆಯಂತೆ ಮಳೆಯಾಗದೇ ಇರುವುದರಿಂದ ಬಂದ ಅಲ್ಪ ಸ್ವಲ್ಪ ಮಳೆಯಲ್ಲಿಯೆ ಅಲ್ಪಾವಧಿ ಬೆಳೆಗಳಾದ ಹೆಸರು, ಎಳ್ಳು, ಉದ್ದು ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದರು. ನಂತರ ಬಾರದ ಮಳೆಯಿಂದ ಅಲ್ಪಾವಧಿ  ಬೆಳೆಗಳು
ನೆಲಕಚ್ಚಿದ್ದವು. ಪ್ರಸಕ್ತ ಬಿತ್ತನೆ ಮಾಡಿದ ಪ್ರಮುಖ ವಾಣಿಜ್ಯ ಬೆಳೆಗಳಾದ ಹತ್ತಿ, ತೊಗರಿ ಬೆಳೆಗಳಿಗೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಆಸರೆ ಕಲ್ಪಿಸಿದೆ.

ರಾಷ್ಟ್ರೀಯ ಹೆದ್ದಾರಿ ಬಸವೇಶ್ವರ ಚೌಕ್‌ ಹತ್ತಿರ ಇತ್ತಿಚೆಗೆ ನಿರ್ಮಿಸಿದ ರಸ್ತೆಗೆ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಿಸಿದರಿಂದ ಜನರು ಯಾವ ಕಡೆ ಹೋಗಬೇಕು ಎನ್ನುವಂತಾಗಿದೆ. ಇತ್ತ ಪಟ್ಟಣದ ವಿದ್ಯಾನಗರ, ಕಾಖಾ ಕಾಲೋನಿ, ಲಕ್ಕಪ್ಪ ಲೇಔಟ್‌, ಬಸವೇಶ್ವರ ಕಾಲೋನಿ, ಓಂನಗರ ಬಡಾವಣೆಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ.

ಇತ್ತ ವಿಜಯಪುರ ರಸ್ತೆಯಲ್ಲಿರುವ ಜೋಪಡಪಟ್ಟಿ ಬಡಾವಣೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಪುರಸಭೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅ ಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ. ಜನವರಿ ತಿಂಗಳಿಂದ ಜುಲೈ 19ರ ವರೆಗೆ 258.80ಎಂಎಂ ಸರಾಸರಿ ಮಳೆಯಾಗಬೇಕಿತ್ತು. ಸೆ. 2ರಂದು ಜೇವರ್ಗಿ 28.4ಎಂ.ಎಂ, ಆಂದೋಲಾ 46.8ಎಂ.ಎಂ, ನೆಲೋಗಿ 32.4ಎಂ.ಎಂ, ಜೇರಟಗಿ 25.8ಎಂ.ಎಂ, ಯಡ್ರಾಮಿ 31.2ಎಂ.ಎಂ, ಇಜೇರಿ 54.2ಎಂ.ಎಂ ಮಳೆಯಾಗಿದೆ.

ಸೆ.3ಜೇವರ್ಗಿ 37.8ಎಂ.ಎಂ, ಆಂದೋಲಾ 54.2 ಎಂಎಂ, ನೆಲೋಗಿ 24.6ಎಂ.ಎಂ, ಜೇರಟಗಿ 15.8ಎಂ. ಎಂ, ಯಡ್ರಾಮಿ 38.2ಎಂ.ಎಂ, ಇಜೇರಿ 11ಎಂ.ಎಂ ಮಳೆಯಾಗಿದೆ.

ಕಳೆದ ಸಾಲಿನಲ್ಲಿ ಅತಿವೃಷ್ಟಿ ಹಾಗೂ ನೆಟೆರೋಗದಿಂದ ತೊಗರಿ ಬೆಳೆ ಹಾನಿಗೊಳಗಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದರು.
ರಾಜ್ಯ ಸರ್ಕಾರದಿಂದ ನೆಟೆ ರೋಗದ ಪರಿಹಾರ ಬಂದಿದ್ದರೂ ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ. ಎರಡನೇ ಹಾಗೂ ಮೂರನೇ ಹಂತದ ಪರಿಹಾರ ರೈತರ ಖಾತೆಗೆ ಜಮಾ ಆಗದೇ ಇರುವುದರಿಂದ ಆರ್ಥಿಕವಾಗಿ ತೊಂದರೆಯಾಗಿದೆ. ಆದ್ದರಿಂದ ಕೂಡಲೆ ರೈತರಿಗೆ ಪರಿಹಾರ ಜಮಾ ಮಾಡಬೇಕು.
ಪ್ರಕಾಶ ಬಿರೆದಾರ, ರೈತ, ಹರನೂರ

*ಪುನೀತ ಡಿ. ಕುಲಕರ್ಣಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.