Maratha: ಮೀಸಲು ಬಿಕ್ಕಟ್ಟು; ಸಿಎಂ ಶಿಂಧೆಗೆ ಇಕ್ಕಟ್ಟು
ಮರಾಠ ಮೀಸಲು ಸಮಸ್ಯೆ ಪರಿಹಾರಕ್ಕೆ ಕಸರತ್ತು
Team Udayavani, Sep 6, 2023, 12:27 AM IST
ಮುಂಬಯಿ: ಮರಾಠ ಮೀಸಲು ಕುರಿತಂತೆ ಮಹಾ ರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವು ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಮೈತ್ರಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತಿಭಟನಕಾರರ ಮೇಲಿನ ಲಾಠಿ ಚಾರ್ಜ್‌ಗೆ ಡಿಸಿಎಂ, ಗೃಹಸಚಿವ ದೇವೇಂದ್ರ ಫಡ್ನವೀಸ್‌ರನ್ನು ವಿಪಕ್ಷಗಳು ಗುರಿಯಾ ಗಿಸಿದರೆ, ಇತ್ತ ಶಿಂಧೆ ತಮ್ಮ ಸರಕಾರದ ಮೇಲಿನ ಆರೋಪಗಳನ್ನು ಬದಿಗಿರಿಸಿ, ಪ್ರತಿಭಟನಕಾರರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸಮಸ್ಯೆ ಶಮನಗೊಳಿಸಲು ಹೆಣ ಗಾ ಡುತ್ತಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಮೈತ್ರಿಕೂಟಕ್ಕೆ ಸೇರಿದ ಅಜಿತ್ ಪವಾರ್ ಅವರ ವಿರದ್ಧವೂ ಪ್ರತಿಭಟನೆ ಹೆಸರಿನಲ್ಲೇ ವಿಪಕ್ಷಗಳು ರಾಜಕೀಯ ದಾಳ ಉರುಳಿಸಲು ಮುಂದಾಗಿವೆ.
ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ಗೆ ವಿಪಕ್ಷಗಳು ಸರಕಾರವೇ ನೇರ ಹೊಣೆ ಎಂದು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಗೃಹ ಸಚಿವರಾದ ಫಡ್ನವೀಸ್ ಪೊಲೀಸರ ಪರವಾಗಿ ತಾವೇ ಕ್ಷಮೆಯಾಚಿಸಿದರು. ಆದರೂ ವಿವಾದ ಬಗೆಹರಿಯಲು ಬಿಡದ ಎನ್‌ಸಿಪಿ ಹಾಗೂ ಉದ್ಧವ್ ಬಣದ ನಾಯಕರು ಫಡ್ನವೀಸ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ನಡೆಸಲು ಸಚಿವಾಲಯದಿಂದ ಅದೇಶ ಬಂದಿರಲೇಬೇಕು ಅಥವಾ ಉನ್ನತಾಧಿಕಾರಿಗಳ ಆದೇಶವಿಲ್ಲದೇ ಕ್ರಮ ತೆಗದುಕೊಂಡಿದ್ದಾರೆಂದರೆ ಅಲ್ಲಿಗೆ ಗೃಹ ಸಚಿವರಿಗೆ ಆಡಳಿತದ ಮೇಲೆ ಹಿಡಿತವಿಲ್ಲವೆಂದೇ ಅರ್ಥ ಈ ಹಿನ್ನೆಲೆಯಲ್ಲಿ ತಪ್ಪನ್ನು ಒಪ್ಪಿಕೊಂಡು ಫಡ್ನವೀಸ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇತ್ತ ಅಜಿತ್ ಪವಾರ್ ಅವರ ಸ್ವಗ್ರಾಮ ಬಾರಾಮತಿಯಲ್ಲಿ ಪ್ರತಿಭಟನೆಕಾರರ ಜಮಾಯಿಸಿ, ಸರಕಾರದಿಂದ ಅಜಿತ್ ಹೊರಬರ ಬೇಕೆಂದು ಆಗ್ರಹಿಸಿದ್ದಾರೆ. ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದು ತಪ್ಪು ಎಂದು ಸರಕಾರದತ್ತ ಕಲ್ಲು ಎಸೆದಿದ್ದಾರೆ. ಇದೆಲ್ಲದರಿಂದ ಸರಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಆದಾಗ್ಯೂ, ಬಿಕ್ಕಟ್ಟು ಶಮನ ಗೊಳಿಸಲು ಸಿಎಂ ಶಿಂಧೆ ಮತ್ತೆ ಪ್ರತಿಭಟನಕಾರರ ಬೇಡಿಕೆಯತ್ತ ವಾಲಿದ್ದು, ಮರಾಠ ಮೀಸಲಾತಿ ಸಮಸ್ಯೆ ಶೀಘ್ರ ಪರಿಹರಿಸ ಲಾಗುವುದು, ಈ ಸಂಬಂಧಿಸಿ ಸಮಿತಿಗೆ ಮುಂದಿನ 1 ತಿಂಗಳ ಒಳಗೆ ಶಿಫಾರಸು ನೀಡಲು ಆದೇಶಿಸಲಾಗಿದೆ. ಸರಕಾರ ಕೂಡ ಮರಾಠರ ಮೀಸಲಾತಿ ಬೇಡಿಕೆಯ ಪರವಿದೆ ಎಂದು ಹೇಳಿಕೆ ನೀಡುವ ಮೂಲಕ ಸರಕಾರ ಉಳಿಸಿಕೊಳ್ಳಲು ಮುಂದಡಿ ಇಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.