![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Sep 6, 2023, 9:41 AM IST
ಸೇಲಂ: ನಿಂತಿದ್ದ ಲಾರಿಗೆ ವೇಗವಾಗಿ ಬಂದ ವ್ಯಾನೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಮಿಳುನಾಡಿನ ಸೇಲಂನಲ್ಲಿ ಬುಧವಾರ ನಸುಕಿನ ಜಾವಾ ಸಂಭವಿಸಿದೆ.
ಮೃತರನ್ನು ಸೆಲ್ವರಾಜ್, ಮಂಜುಳಾ, ಅರುಮುಗಂ, ಪಳನಿಸಾಮಿ, ಪಪ್ಪತಿ ಮತ್ತು ಒಂದು ವರ್ಷದ ಮಗು ಎಂದು ಗುರುತಿಸಲಾಗಿದೆ.
ಈಂಗೂರ್‌ನಿಂದ ಎಂಟು ಸದಸ್ಯರು ವ್ಯಾನ್‌ನಲ್ಲಿ ಪೆರುಂತುರೈ ಕಡೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಈ ವೇಳೆ ಹೆದ್ದಾರಿ ಬದಿ ,ನಿಂತಿದ್ದ ಲಾರಿಗೆ ವೇಗವಾಗಿ ಬಂದ ವ್ಯಾನ್ ಹಿಂದಿನಿಂದ ಡಿಕ್ಕಿ ಹೊಡೆದಿದೆ ಅಪಘಾತದ ಭೀಕರ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪಘಾತದ ಬಗ್ಗೆ ತನಿಖೆ ನಡೆಸಿದ ಪೊಲೀಸರು ವ್ಯಾನ್ ಚಾಲಕನ ಅತೀಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
Tragic road accident on Tamil Nadu highway kills 6 people. CCTV video emerges. #TamilNadu pic.twitter.com/grWJeeofoY
— Vani Mehrotra (@vani_mehrotra) September 6, 2023
You seem to have an Ad Blocker on.
To continue reading, please turn it off or whitelist Udayavani.