![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 6, 2023, 2:15 PM IST
ಪಣಜಿ: ಗೋವಾದ ಚೋಡನ್ ಬಾರ್ಜ್ ನ ಮುಂಭಾಗದ ಕಬ್ಬಿಣದ ತಗಡು ಮುರಿದು ಬಿದ್ದಿದ್ದರಿಂದ ಅನೇಕ ಪ್ರಯಾಣಿಕರು ತಮ್ಮ ಕಾರು ಮತ್ತು ಬೈಕ್‍ಗಳೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಬಾರ್ಜ್ ನಲ್ಲಿ ಸಿಲುಕಿಕೊಂಡ ಘಟನೆ ಸೆ.5ರ ಮಂಗಳವಾರ ನಡೆದಿದೆ.
ಈ ಬಾರ್ಜ್ ನಲ್ಲಿ ಎರಡು ದೊಡ್ಡ ವಾಹನಗಳು ಮತ್ತು ಕನಿಷ್ಠ ಏಳರಿಂದ ಎಂಟು ದ್ವಿಚಕ್ರ ವಾಹನಗಳಿದ್ದವು.
ಘಟನೆ ಕುರಿತು ಹಲವು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ಕ್ರೇನ್ ಬರುವವರೆಗೆ ಪ್ರಯಾಣಿಕರು ತಮ್ಮ ಕಾರುಗಳೊಂದಿಗೆ ಅಲ್ಲಿಯೇ ಇರುವಂತಾಯಿತು.
ಬಾರ್ಜ್ ನ ಮುಂಭಾಗದ ತಗಡು ಮುರಿದು ಬಿದ್ದಿದ್ದರಿಂದ ಬಾರ್ಜ್ ನಲ್ಲಿದ್ದ ಪ್ರಯಾಣಿಕರು ದಡಕ್ಕೆ ಬರಲು ಸಾಧ್ಯವಾಗದೆ ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ಸಿಲುಕಿರುವಂತಾಯಿತು.
ಅದಲ್ಲದೆ, ಈ ದೋಣಿಯು ದುರಸ್ತಿಯಾಗುವವರೆಗೆ ದಡಕ್ಕೆ ಬರಲು ಸಾಧ್ಯವಿರಲಿಲ್ಲ. ಈ ಒಂದು ದೋಣಿ ದುರಸ್ತಿಯಾಗುವವರೆಗೂ ನಿರುಪಯುಕ್ತ ಎನಿಸುತ್ತಿದೆ. ಆದ್ದರಿಂದ, ಇತರ ದೋಣಿಗಳ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ದೋಣಿ ಮೂಲಕ ನದಿ ದಾಟಲು ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಘಟನೆ ಕುರಿತು ಮಾತನಾಡಿದ ಸ್ಥಳೀಯ ಅಶ್ವಿನ್ ಚೋಡಂಕರ್, ಶಾಸಕರು ಈ ಬಗ್ಗೆ ಗಮನಹರಿಸಬೇಕಿದೆ. ರಾತ್ರಿ ಒಂಬತ್ತು ಅಥವಾ ಹತ್ತು ಗಂಟೆಯ ನಂತರ ಬಾರ್ಜ್ ನಲ್ಲಿ ಪಾರ್ಟಿಗಳು ನಡೆಯುತ್ತದೆ ಎಂದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.