ಒಂದು ಬಿಸ್ಕೆಟ್‌ ಕಥೆ;ಕಂಪನಿ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು..1ಲಕ್ಷ ಪರಿಹಾರ ಸಿಕ್ತು!

ಸ್ಪಷ್ಟ ಮಾಹಿತಿ ನೀಡಿರುವುದರಿಂದ ಕಂಪನಿಯ ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ

Team Udayavani, Sep 6, 2023, 4:43 PM IST

ಒಂದು ಬಿಸ್ಕೆಟ್‌ ಕಥೆ;ಕಂಪನಿ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು..1ಲಕ್ಷ ಪರಿಹಾರ ಸಿಕ್ತು!

ತಿರುವಳ್ಳೂರ್‌ (ಚೆನ್ನೈ): ಜನಪ್ರಿಯ ಐಟಿಸಿ ಲಿಮಿಟೆಡ್‌ ನ ಸನ್‌ ಫೀಸ್ಟ್‌ ಮಾರಿ ಲೈಟ್‌ ಬಿಸ್ಕೆಟ್‌ ಕಂಪನಿ ವಿರುದ್ಧ ಗಾಹಕರೊಬ್ಬರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ ಕಾನೂನು ಸಮರದಲ್ಲಿ ಜಯಗಳಿಸಿರುವ ಪ್ರಕರಣ ಚೆನ್ನೈನಲ್ಲಿ ನಡೆದಿದೆ.

ಏನಿದು ಪ್ರಕರಣ?

ಚೆನ್ನೈನ ವ್ಯಕ್ತಿಯೊಬ್ಬರು ಸನ್‌ ಫೀಸ್ಟ್‌ ಮಾರಿ ಲೈಟ್‌ ಬಿಸ್ಕೆಟ್‌ ಪ್ಯಾಕೆಟ್‌ ವೊಂದನ್ನು ಖರೀದಿಸಿದ್ದರು. ಆದರೆ ಬಿಸ್ಕೆಟ್‌ ಪ್ಯಾಕ್‌ ಮೇಲೆ ನಮೂದಿಸಿದ್ದಕ್ಕಿಂತ ಒಂದು ಬಿಸ್ಕೆಟ್‌ ಕಡಿಮೆ ಇದ್ದಿದ್ದು, ಇದರ ವಿರುದ್ಧ ಅವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

16 ಬಿಸ್ಕೆಟ್‌ ಬದಲು 15 ಬಿಸ್ಕೆಟ್‌ ಪ್ಯಾಕೇಟ್‌ ನಲ್ಲಿತ್ತು:

ಸನ್‌ ಫೀಸ್ಟ್‌ ಮಾರಿ ಲೈಟ್‌ ಬಿಸ್ಕೆಟ್‌ ಪ್ಯಾಕ್‌  ನ ಜಾಹೀರಾತಿನಲ್ಲಿ ಬಿಸ್ಕೆಟ್‌ ಪ್ಯಾಕ್‌ ನೊಳಗೆ 16 ಬಿಸ್ಕೆಟ್‌ ಇದ್ದಿರುವುದಾಗಿ ನಮೂದಿಸಿತ್ತು. ಆದರೆ ದೂರುದಾರ ಚೆನ್ನೈನ ಪಿ.ದಿಲ್ಲಿಬಾಬು ಎಂಬವರು ಪ್ಯಾಕ್‌ ಒಡೆದಾಗ ಅದರಲ್ಲಿ ಕೇವಲ 15 ಬಿಸ್ಕೆಟ್‌ ಇದ್ದಿರುವುದನ್ನು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ದಿಲ್ಲಿಬಾಬು ಅವರು ಸನ್‌ ಫೀಸ್ಟ್‌ ಮಾರಿ ಲೈಟ್‌ ಸಂಸ್ಥೆ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಆದರೆ ಗ್ರಾಹಕ ನ್ಯಾಯಾಲಯದಲ್ಲಿ ಕಂಪನಿ ಪರ ವಕೀಲರು, ತಮ್ಮ ಕಂಪನಿಯ ಉತ್ಪನ್ನವನ್ನು ತೂಕದ ಆಧಾರದ ಮೇಲೆ ಮಾತ್ರ ಮಾರಾಟ ಮಾಡಲಾಗುತ್ತದೆಯೇ ಹೊರತು, ಬಿಸ್ಕೆಟ್ ಗಳ ಸಂಖ್ಯೆಯನ್ನು ಆಧರಿಸಿ ಅಲ್ಲ ಎಂದು ವಾದ ಮಂಡಿಸಿದ್ದರು. ಆದರೆ ಬಿಸ್ಕೆಟ್‌ ಪ್ಯಾಕ್‌ ಮೇಲೆ ಉತ್ಪನ್ನವನ್ನು ಖರೀದಿಸುವ ಗ್ರಾಹಕರು ಬಿಸ್ಕೆಟ್‌ ಸಂಖ್ಯೆಯನ್ನು ಆಧರಿಸಿ ಉತ್ಪನ್ನ ಖರೀದಿಸಬಹುದು ಎಂಬ ಸ್ಪಷ್ಟ ಮಾಹಿತಿ ನೀಡಿರುವುದರಿಂದ ಕಂಪನಿಯ ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗ್ರಾಹಕ ನ್ಯಾಯಾಲಯ ತಿಳಿಸಿತ್ತು.

ಗ್ರಾಹಕರು ಯಾವುದೇ ಉತ್ಪನ್ನವನ್ನು ಖರೀದಿಸುವ ವೇಳೆ ಪ್ಯಾಕ್‌ ಮೇಲೆ ನಮೂದಿಸಿರುವುದನ್ನು ಮಾತ್ರ ಗಮನಿಸುತ್ತಾರೆ. ಏಕೆಂದರೆ ಪ್ಯಾಕಿಂಗ್‌ ನಲ್ಲಿ ಲಭ್ಯವಿರುವ ಮಾಹಿತಿ ಗ್ರಾಹಕರ ಖರೀದಿ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಲೇಬಲ್‌ ನಲ್ಲಿರುವ ಲಭ್ಯವಿರುವ ಉತ್ಪನ್ನದ ಮಾಹಿತಿಯು ಗ್ರಾಹಕರ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದಿರುವ ಗ್ರಾಹಕ ನ್ಯಾಯಾಲಯವು ಸನ್‌ ಫೀಸ್ಟ್‌ ಕಂಪನಿಯು ಗ್ರಾಹಕರಿಗೆ ಒಂದು ಲಕ್ಷ ರೂಪಾಯಿ ಪಾವತಿಸುವಂತೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.

100 ಕೋಟಿ ದಂಡ ವಿಧಿಸಲು ಮನವಿ:

ಸನ್‌ ಫೀಸ್ಟ್‌ ಕಂಪನಿ ಹಾಗೂ ಅಂಗಡಿಗೆ 100 ಕೋಟಿ ರೂಪಾಯಿ ದಂಡ  ಹಾಗೂ ಗ್ರಾಹಕರ ದಿಕ್ಕುತಪ್ಪಿಸುವ ನಿಟ್ಟಿನಲ್ಲಿ ಬಿಸ್ಕೆಟ್‌ ಮಾರಾಟ ಮಾಡಿರುವುದಕ್ಕಾಗಿ 10 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೋರಿ ದಿಲ್ಲಿಬಾಬು ಅವರು ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.

ಟಾಪ್ ನ್ಯೂಸ್

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

Kasganj: ವಿವಾಹಿತನಿಗೆ ಪೊಲೀಸ್‌ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

Uttara Pradesh: ಬುಲ್ಡೋಜರ್‌ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ

Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ

ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

1-digi

‘DigiLocker’; ಕ್ಲೇಮ್‌ ಮಾಡದ ಹೂಡಿಕೆಗೆ ಪರಿಹಾರ?

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

7

Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.