Mysuru Dasara: ದಸರಾ ಆನೆಗಳಿಗೆ ಭೂರಿ ಭೋಜನದ ಮೆನು
Team Udayavani, Sep 6, 2023, 5:20 PM IST
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಉತ್ಸವ ಮುಕ್ತಾಯದವರೆಗೆ ಪೌಷ್ಟಿಕ ಆಹಾರ ನೀಡುವ ಭೂರಿ ಭೋಜ ನದ ಮೆನು ಸಿದ್ಧಗೊಂಡಿದೆ.
ಈ ಬಾರಿಯೂ ದಸರಾ ಉತ್ಸವಕ್ಕೆ 14 ಆನೆಗಳನ್ನು ಕರೆತರಲಾಗುತ್ತಿದ್ದು, ಮೊದಲ ತಂಡ ದಲ್ಲಿ 8(ಅರ್ಜುನ ಗೈರು) ಆನೆಗಳನ್ನು ಬರಮಾಡಿಕೊಳ್ಳಲಾಗಿದೆ. ಆನೆಗಳಿಗೆ ಯಾವುದೇ ಕೊರತೆಯಾಗದಂತೆ ಅರಣ್ಯ ಇಲಾಖೆ ನಿತ್ಯ ಪುಷ್ಕಳ ಆಹಾರ ನೀಡಲು ಸಿದ್ಧತೆ ಮಾಡಿದೆ. ಸೆ.7 ಅಥವಾ 08ರಿಂದ ಎಲ್ಲಾ ಆನೆಗಳಿಗೂ ವಿವಿಧ ಹಂತದ ತಾಲೀಮು ಆರಂಭವಾಗಲಿದೆ. ಈ ಎಲ್ಲಾ ಆನೆಗಳಿಗೂ ಹೆಚ್ಚಿನ ದೈಹಿಕ ಸಾಮರ್ಥ್ಯ ಅವಶ್ಯಕತೆ ಇರುವು ದ ರಿಂದ ಸೆ.7ರಿಂದಲೇ ಗಜಪಡೆಗೆ ವಿಶೇಷ ಪೌಷ್ಟಿಕ ಆಹಾರ ನೀಡುವುದು ಆರಂಭವಾಗಲಿದೆ.
ಆನೆಗಳ ಸಾಮರ್ಥ್ಯ ವೃದ್ಧಿಗೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 8 ಆನೆ(ಅರ್ಜುನ ಗೈರು) ಆಗಮಿಸಿದ್ದು, ಭೀಮ, ಅರ್ಜುನ, ಧನಂಜಯ, ಗೋಪಿ, ಕಂಜನ್, ವಿಜಯಾ, ವರಲಕ್ಷ್ಮೀ ಆನೆಗಳ ಅರಮನೆಗೆ ಆಗಮಿಸಿವೆ. 2ನೇ ತಂಡದಲ್ಲಿ ಪ್ರಶಾಂತ, ಸುಗ್ರೀವ, ಹಿರಣ್ಯಾ, ಲಕ್ಷ್ಮೀ, ರೋಹಿತ್ 5 ಆನೆ ಬರಲಿವೆ.
ಇಂದು ತೂಕ ಪರೀಕ್ಷೆ: ಆನೆಗಳ ಆರೋಗ್ಯದ ಬಗ್ಗೆ ವಿಶೇಷ ನಿಗಾ ಇಡುವ ಉದ್ದೇಶದಿಂದ ಸೆ. 6 ರಂದು ಗಜಪಡೆಯ ಎಲ್ಲ ಆನೆಗಳ ತೂಕ ಪರೀಕ್ಷೆ ನಡೆಯಲಿದೆ. ಒಂದು ವೇಳೆ ಕಳೆದ ವರ್ಷಕ್ಕಿಂತ ಸಾಕಷ್ಟು ಪ್ರಮಾಣದಲ್ಲಿ ತೂಕ ಇಳಿಕೆಯಾಗಿದ್ದಲ್ಲಿ ಅವುಗಳಿಗೆ ವಿಶೇಷ ಆರೈಕೆ ದೊರೆಯಲಿದೆ.
ಶೆಡ್ ನಿರ್ಮಾಣ ಕಾರ್ಯ ಪೂರ್ಣ: ಗಜಪಡೆ, ಮಾವುತರು ಹಾಗೂ ಕಾವಾಡಿಗಳ ಕುಟುಂಬ ವಾಸ್ತವ್ಯ ಹೂಡಲು ಅರಮನೆ ಆವರಣದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಅ.15ರಿಂದ ಅ.24ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ಅಲ್ಲಿಯವರೆಗೆ ಗಜಪಡೆ, ಮಾವು ತರು ಮತ್ತು ಕಾವಾಡಿಗಳು ಅರಮನೆ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಿಸಿ ರುವ ಶೆಡ್ ಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈಗಾ ಗಲೇ ಅರಮನೆ ಆವರಣದಲ್ಲಿ ಮಾವುತರು, ಕಾವಾಡಿ, ಆನೆಗಳ ವಾಸ್ತವ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟೆಂಟ್ ನಿರ್ಮಾಣ, ಶೌಚ ಗೃಹ, ತಾತ್ಕಾಲಿಕ ಶಾಲೆ ನಿರ್ಮಿಸಲಾಗಿದೆ.
ಸೆ.7-8 ರಿಂದ ದಸರಾ ಆನೆಗಳಿಗೆ ತಾಲೀಮು ಆರಂಭ: ಸೆ. 7 ಅಥವಾ 8 ರಿಂದ ತಾಲೀಮು ಆರಂಭವಾಗಲಿದ್ದು, ಆರಂಭದಲ್ಲಿ ಯಾವುದೇ ಭಾರ ಹಾಕದೆ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಿವೆ. 5 ದಿನ ಕಳೆದ ನಂತರ ಭಾರ ಹೊರುವ ತಾಲೀಮು ಪ್ರಾರಂಭವಾಗಲಿದೆ. ಈ ಅವಧಿಯಲ್ಲಿ ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ಧನಂಜಯ, ಗೋಪಿ ಆನೆಗಳಿಗೆ ಭಾರ ಹೊರಿಸಲಾಗುತ್ತದೆ. ಹೊಸ ಆನೆ ಕಂಜನ್ ಕೂಡ ತಾಲೀಮಿನಲ್ಲಿ ಭಾಗಿಯಾಗಲಿದೆ. ಅಭಿಮನ್ಯು ಜತೆಗೆ ಇತರೆ ಆನೆ ಸಿದ್ಧಗೊಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ 7ಆನೆಗಳಿಗೆ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ದೊರೆಯಲಿದೆ. ಗಂಡಾನೆಗಳೊಂದಿಗೆ ಹೆಣ್ಣಾನೆಗಳಾದ ವರಲಕ್ಷ್ಮೀ, ವಿಜಯ ಕೂಡ ತಾಲೀಮು ನಡೆಸಲಿವೆ.
ಆನೆಗಳ ಆಹಾರ ಕ್ರಮ ಹೇಗಿದೆ?
ಆನೆಗಳಿಗೆ ಹೊಟ್ಟೆ ತುಂಬುವಷ್ಟು ಹುಲ್ಲು, ಸೊಪ್ಪು ನೀಡಲಾಗುವುದು.
ಬೆಳಗ್ಗೆ 6.30 ಮತ್ತು ರಾತ್ರಿ 7ಕ್ಕೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ
ಸಂಜೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಬೆಲ್ಲ, ಭತ್ತದ ಒಣಹುಲ್ಲಿನ ಜತೆ ಹಿಂಡಿ, ಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಗುತ್ತದೆ.
ಆನೆಗಳು ತಾಲೀಮು ಮುಗಿಸಿ ಬಂದ ನಂತರ ಸ್ನಾನ ಮಾಡಿಸಿ ಶುಚಿಗೊಳಿಸುವ ಕಾರ್ಯ ನಿತ್ಯ ನಡೆಯುತ್ತದೆ.
ಒಂದೂವರೆ ತಿಂಗಳ ಅವಧಿಯಲ್ಲಿ ಆನೆಗಳ ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ.
-ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.