![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 7, 2023, 2:30 AM IST
ಕುಂದಾಪುರ: ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ನಿತ್ಯದ ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿ ಭಾರತೀಯ ರೈಲ್ವೇ ಸಚಿವಾಲಯ ಆದೇಶಿಸಿದೆ. ಇದರಿಂದ ಉಡುಪಿ, ಕುಂದಾಪುರ, ಮುರ್ಡೇಶ್ವರ ಭಾಗದವರಿಗೆ ಮೈಸೂರಿನ ಜತೆಗೆ ಬೆಂಗ ಳೂರಿಗೆ ಮತ್ತೂಂದು ರೈಲು ಲಭಿಸಿದಂತಾಗಿದೆ.
ಬೆಂಗಳೂರು – ಮೈಸೂರು ಮಾರ್ಗ ವಾಗಿ ಮಂಗಳೂರಿಗೆ ಬರುತ್ತಿದ್ದ ಎಕ್ಸ್ ಪ್ರಸ್(ನಂ. 16585) ಅನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿ ದರೆ, ಮಂಗಳೂರಿ ನಿಂದ-ಮೈಸೂರು ಮಾರ್ಗ ವಾಗಿ ಬೆಂಗಳೂರಿಗೆ ಸಂಚ ರಿಸುತ್ತಿದ್ದ (ನಂ. 16586) ಎಕ್ಸ್‌ಪ್ರೆಸ್ಸನ್ನು ಮುರ್ಡೇಶ್ವರದಿಂದ ಆರಂಭಿಸಿ ಇಲಾಖೆ ಆದೇಶ ಹೊರಡಿಸಿದೆ.
ಒಂದೂವರೆ ವರ್ಷದ ಪ್ರಯತ್ನ
ಈ ರೈಲನ್ನು ಮುರ್ಡೇಶ್ವರಕ್ಕೆ ವಿಸ್ತರಿ ಸುವಂತೆ ಕೋರಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಹೋರಾಟ ನಡೆಸಿತ್ತು. ಈಗ ಬೆಂಗಳೂ ರಿಗೆ ಹೆಚ್ಚುವರಿ ರೈಲು ಸಿಕ್ಕರೆ, ಮೈಸೂರಿಗೆ ಹೋಗಲು ಉಡುಪಿ, ಉತ್ತರ ಕನ್ನಡ ಜಿಲ್ಲೆಯವರಿಗೆ ಸೌಲಭ್ಯ ಸಿಕ್ಕಂತಾಗಿದೆ.
ನಿಲುಗಡೆಗಳು
ಪಂಚಗಂಗಾ ಎಕ್ಸ್‌ಪ್ರೆಸ್ ಬೆಂಗ ಳೂರಿನಿಂದ ಬೇಗನೆ ಹೊರಡುತ್ತದೆ. ಅದರಲ್ಲಿ ಟಿಕೇಟು ಸಿಗದು ಎಂಬ ದೂರಿಗೆ ಈ ರೈಲು ಪರಿಹಾರ. ಈ ರೈಲು ಬೈಯಪ್ಪನಹಳ್ಳಿಯಿಂದ ಹೊರಟು ರಾತ್ರಿ 9ಕ್ಕೆ ಮೆಜೆಸ್ಟಿಕ್‌ಗೆ ಬರಲಿದ್ದು, ಮೈಸೂರು- ಮಂಗಳೂರು- ಉಡುಪಿ- ಕುಂದಾಪುರ, ಮುಡೇìಶ್ವರ ಸೇರಲಿದೆ. ಮಂಗಳೂರಿ ನಿಂದೀಚೆಗೆ ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರದಲ್ಲಿ ನಿಲುಗಡೆಯಿದೆ. ಮುರ್ಡೇಶ್ವರದಿಂದ ಮಧ್ಯಾಹ್ನ 3.30ಕ್ಕೆ ಹೊರಟು, ಬೆಳಗ್ಗೆ 6ಕ್ಕೆ ಬೆಂಗಳೂರು ಸೇರುತ್ತದೆ. ನಮ್ಮ ಸಮಿತಿ ಮತ್ತು ಕೊಡಗು- ಮೈಸೂರು ಸಂಸದ ಪ್ರತಾಪಸಿಂಹರ ಪ್ರಯತ್ನ ದಿಂದಾಗಿ ಇದು ಸಾಧ್ಯವಾಗಿದೆ ಎಂದು ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಗೌತಮ ಶೆಟ್ಟಿ ತಿಳಿಸಿದ್ದಾರೆ.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.