Aditya-L1: ಭೂಮಿ ಮತ್ತು ಚಂದ್ರನ ಜೊತೆ ಸೆಲ್ಫಿ ಫೋಟೋ ರವಾನಿಸಿದ ಆದಿತ್ಯ ಎಲ್ 1
ಫೋಟೊಗಳನ್ನು ಇಸ್ರೋ (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಶನ್) ಟ್ವೀಟರ್ ನಲ್ಲಿ ಶೇರ್ ಮಾಡಿದೆ.
Team Udayavani, Sep 7, 2023, 3:28 PM IST
ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್ 1 ವ್ಯೂಮನೌಕೆಯು ಲ್ಯಾಗ್ರೇಂಜ್ ಪಾಯಿಂಟ್ (ಎಲ್ 1) ನತ್ತ ತೆರಳುತ್ತಿರುವ ಸಂದರ್ಭದಲ್ಲಿ ಗುರುವಾರ (ಸೆಪ್ಟೆಂಬರ್ 07) ಭೂಮಿ ಮತ್ತು ಚಂದ್ರನ ಜತೆ ಸೆಲ್ಫಿ ಫೋಟೋವನ್ನು ಕ್ಲಿಕ್ಕಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Janmashtamiಗೆ 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ: ಮಂಗಳೂರು ಮೂಲದ ವೈದ್ಯರ ಟ್ವೀಟ್ ವೈರಲ್
ಆದಿತ್ಯ ಎಲ್ 1 ಕ್ಲಿಕ್ಕಿಸಿರುವ ಸೆಲ್ಫಿ ಫೋಟೊಗಳನ್ನು ಇಸ್ರೋ (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಶನ್) ಟ್ವೀಟರ್ ನಲ್ಲಿ ಶೇರ್ ಮಾಡಿದೆ.
ಆದಿತ್ಯ ಎಲ್ 1 ನಿಗದಿತ ಕಕ್ಷೆಗೆ ಸೇರಿದ ನಂತರ ಪ್ರತಿದಿನ ಅಂದಾಜು 1,440 ಫೋಟೋಗಳನ್ನು ಗ್ರೌಂಡ್ ಸ್ಟೇಷನ್ ಗೆ ಕಳುಹಿಸಲಿದ್ದು, ಇದರಿಂದ ಸೌರಯಾನದ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಸಾಧ್ಯವಾಗಲಿದೆ ಎಂದು ವರದಿ ತಿಳಿಸಿದೆ.
Aditya-L1 Mission:
👀Onlooker!Aditya-L1,
destined for the Sun-Earth L1 point,
takes a selfie and
images of the Earth and the Moon.#AdityaL1 pic.twitter.com/54KxrfYSwy— ISRO (@isro) September 7, 2023
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸೆಪ್ಟೆಂಬರ್ 2ರಂದು ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಉಡ್ಡಯನ ಮಾಡಲಾಗಿತ್ತು. ನಂತರ ಆದಿತ್ಯ ಎಲ್ 1 ವ್ಯೂಮ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯವನ್ನು ಎರಡನೇ ಬಾರಿ ಯಶಸ್ವಿಯಾಗಿ ನಡೆಸಲಾಗಿತ್ತು. ಇನ್ನು ಮುಂದಿನ ಕಕ್ಷೆ ಎತ್ತರಿಸುವ ಕಾರ್ಯ ಸೆಪ್ಟೆಂಬರ್ 10ರ ನಸುಕಿನ 2.30ಕ್ಕೆ ನಡೆಯಲಿದೆ.
ಏನಿದು Lagrangian Point:
ಲ್ಯಾಗ್ರೇಂಜ್ ಪಾಯಿಂಟ್ ಭೂಮಿಯಿಂದ 1.5 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿದೆ. ಈ ಪಾಯಿಂಟ್ ಸೂರ್ಯ ಮತ್ತು ಭೂಮಿ ನಡುವಿನ ಬಿಂದುವಾಗಿದೆ. ಭಾರತದ ಬಾಹ್ಯಾಕಾಶ ನೌಕೆ ಆದಿತ್ಯ ಎಲ್ 1 ಲ್ಯಾಗ್ರೇಂಜ್ ಪಾಯಿಂಟ್ ಗಮ್ಯ ಸ್ಥಾನ ತಲುಪಬೇಕಾಗಿದೆ. ಈ ಪಾಯಿಂಟ್ ತಲುಪಲು ಆದಿತ್ಯ ಎಲ್ 1 ಸುಮಾರು 15,00,000 ಲಕ್ಷ ಕಿಲೋ ಮೀಟರ್ ದೂರ ಕ್ರಮಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.