Sandalwood; ‘ಟೇಲ್ಸ್ ಆಫ್ ಮಹಾನಗರ’ ಟ್ರೇಲರ್ ಬಿಡುಗಡೆ


Team Udayavani, Sep 7, 2023, 6:46 PM IST

tales of mahanagara kannada movie

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ “ಗೆಜ್ಜೆನಾದ’ ವಿಜಯ್‌ ಕುಮಾರ್‌ ಪುತ್ರ ಅಥರ್ವ್‌ ಈಗ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗು ತ್ತಿದ್ದಾರೆ. ಅಥರ್ವ್‌ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾಕ್ಕೆ “ಟೇಲ್ಸ್ ಆಫ್ ಮಹಾನಗರ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

ಇನ್ನು ಸಿನಿಮಾದ ಬಿಡುಗಡೆಯ ಡೇಟ್‌ ಕೂಡ ಅನೌನ್ಸ್‌ ಮಾಡಿರುವ ಚಿತ್ರತಂಡ, ಇದೇ ಸೆಪ್ಟೆಂಬರ್‌ 15 ರಂದು “ಟೇಲ್ಸ್ ಆಫ್ ಮಹಾನಗರ’ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. “ಟೇಲ್ಸ್ ಆಫ್ ಮಹಾನಗರ’ದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.

ಮೊದಲಿಗೆ ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ವಿಜಯ ಕುಮಾರ್‌, “ನನ್ನ ಮಗ ಅಥರ್ವ್‌ ಹಾಗೂ ನಿರ್ದೇಶಕ ಕಿರಣ್‌ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡು ನಿರ್ಮಾಪಕರ ಹುಡುಕಾಟ ದಲ್ಲಿದ್ದರು. ಆನಂತರ ಕಥೆ ಇಷ್ಟವಾಗಿ ನಾನೇ ನಿರ್ಮಾಣಕ್ಕೆ ಮುಂದಾದೆ. ಕಿಚ್ಚ ಸುದೀಪ್‌ ಈ ಸಿನಿಮಾದ ಟೀಸರ್‌ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದ್ದಾರೆ. ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆಯಿದ್ದು, ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ನಂಬಿಕೆಯಿದೆ’ ಎಂದರು.

“ಈ ಹಿಂದೆ ಕಿರುತೆರೆಯಲ್ಲಿ “ಪುನರ್‌ ವಿವಾಹ’ ಹಾಗೂ “ಪತ್ತೆಧಾರಿ ಪ್ರತಿಭಾ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ. ನಾಯಕನಾಗಿ ಇದು ನನಗೆ ಮೊದಲ ಸಿನಿಮಾ. ಮೊದಲಾರ್ಧ ಬೇರೆ ಬೇರೆಯಾಗಿ ಸಾಗುವ ಮೂರು ಕಥೆಗಳು, ದ್ವಿತೀಯಾರ್ಧದಲ್ಲಿ ಒಂದೇ ಆಗುತ್ತದೆ. ನಿದ್ದೆ ಮೇಲಿನ ಪ್ರಯೋಗ, ರಂಗಭೂಮಿ ಕಲಾವಿದನ ಬದುಕು ಮತ್ತು ಟ್ಯಾಕ್ಸಿ ಚಾಲಕನ ಜೀವನ ಹೀಗೆ ಮೂರು ಎಳೆಯಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಈ ಸಿನಿಮಾದಲ್ಲಿ ನಾನು ಟ್ಯಾಕ್ಸಿ ಡ್ರೈವರ್‌ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದೇನೆ’ ಎಂಬುದು ನಾಯಕ ನಟ ಅಥರ್ವ್‌ ನೀಡುವ ವಿವರಣೆ.

“ಆರಂಭದಲ್ಲಿ ಒಂದು ಒಳ್ಳೆಯ ಕಥೆಯನ್ನು ಇಟ್ಟುಕೊಂಡು ಸಾಕಷ್ಟು ನಿರ್ಮಾಪಕರನ್ನು ಹುಡುಕಿದೆವು. ಅಂತಿಮವಾಗಿ ನಮ್ಮ ಕಥೆ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಸಸ್ಪೆನ್ಸ್‌-ಥ್ರಿಲ್ಲರ್‌ ಎಂಟರ್‌ ಟೈನ್ಮೆಂಟ್‌ ಇರುವ “ಟೇಲ್ಸ್‌ ಆಫ್ ಮಹಾನಗರ’ ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗಲಿದೆ’ ಎಂಬುದು ನಿರ್ದೇಶಕ ಕಿರಣ್‌ ವೆನಿಯಲ್‌ ಮಾತು.

ನಾಯಕಿ ರೆಮೋಲಾ, ನಟರಾದ ಆರ್‌. ಜೆ ಅನೂಪ, ನಾಗರಾಜ್‌, ಸಂಕಲನಕಾರ ಪ್ರದೀಪ್‌ ಗೋಪಾಲ್‌ ಸಿನಿಮಾದ ಬಗ್ಗೆ ಮಾತನಾಡಿದರು.

ಟಾಪ್ ನ್ಯೂಸ್

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…

anish tejeshwar aram arvind swamy movie

Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್‌ ಅರವಿಂದ ಸ್ವಾಮಿ ಹಾಡು ಹಬ್ಬ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.