G-20: ಸರ್ವರ ಒಳಿತಿಗಾಗಿ ಒಗ್ಗೂಡುವಿಕೆ


Team Udayavani, Sep 7, 2023, 11:32 PM IST

g 20 ..

ಜಗತ್ತಿನ ಪ್ರಮುಖ ದೇಶಗಳ ನಡುವೆ ಕೊಂಡಿಯಾಗಿರುವ ಜಗತ್ತಿನ ಜಿಡಿಪಿಯ ಶೇ.85ರಷ್ಟನ್ನು ಹೊಂದಿರುವ ಜಿ20 ದೇಶಗಳ ಸಮಾಗಮಕ್ಕೆ ದಿಲ್ಲಿ ಸಾಕ್ಷಿಯಾಗಲಿದೆ. ಶನಿವಾರ ಮತ್ತು ರವಿವಾರ ರಾಷ್ಟ್ರ ರಾಜಧಾನಿ, ದೇಶ-ವಿದೇಶಗಳ ಪ್ರತಿನಿಧಿಗಳಿಗೆ ಧ್ವನಿಯಾಗಲಿದೆ. ಹಾಗಾದರೆ ಏನಿದು ಜಿ20? ಇದಕ್ಕೆ ಏಕಿಷ್ಟು ಮಹತ್ವ? ಇಲ್ಲಿದೆ ಮಾಹಿತಿ…

ಏನಿದು ಜಿ20?

20 ಸದಸ್ಯ ದೇಶಗಳನ್ನು ಒಳಗೊಂಡಿರುವ ಇದೊಂದು ಪ್ರಮುಖ ಆರ್ಥಿಕ ಸಹಕಾರಿ ಸಂಘಟನೆ. ಜಗತ್ತಿನ ಪ್ರಮುಖ ಆರ್ಥಿಕ ಸಮಸ್ಯೆಗಳು, ಅಭಿವೃದ್ಧಿ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿ, ನಿರ್ಧಾರಕ್ಕೆ ಬರುತ್ತದೆ.

ಜಿ20 ದೇಶಗಳು ಯಾವುವು?

ವಿಶೇಷವೆಂದರೆ, ಇದರಲ್ಲಿ 19 ದೇಶಗಳು ಮತ್ತು ಒಂದು ಒಕ್ಕೂಟವಿದೆ. ಅಂದರೆ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್‌, ಕೆನಡಾ, ಚೀನ, ಫ್ರಾನ್ಸ್‌, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್‌, ದಕ್ಷಿಣ ಕೊರಿಯ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್‌, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ. ಸ್ಪೇನ್‌ ಜಿ20ಯ ಶಾಶ್ವತ ಅತಿಥಿ.

ಅಧ್ಯಕ್ಷತೆ  ಒಲಿಯುವುದು ಹೇಗೆ?

ಜಿ20 ದೇಶಗಳನ್ನು ಐದು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಅಧ್ಯಕ್ಷತೆಯು ಪ್ರತೀ ಗುಂಪಿನ ನಡುವೆ ಆವರ್ತನಾ ಲೆಕ್ಕಾಚಾರದಲ್ಲಿ ಬದಲಾಗುತ್ತದೆ. ಭಾರತ ರಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಟರ್ಕಿ ದೇಶಗಳ ಜತೆಗಿದ್ದು, ಇದು ಗ್ರೂಪ್‌ 2ರಲ್ಲಿದೆ. ಪ್ರತೀ ವರ್ಷವೂ ಒಂದೊಂದು ಗ್ರೂಪ್‌ಗೆ ಅಧಿಕಾರ ಹೋಗಲಿದ್ದು, ಆ ಗುಂಪಿನ ದೇಶಗಳು ಪರಸ್ಪರ ಮಾತುಕತೆ ಮೂಲಕ ಅಧ್ಯಕ್ಷತೆ ವಹಿಸಿಕೊಳ್ಳುವ ಬಗ್ಗೆ ನಿರ್ಧರಿಸುತ್ತವೆ. ಮುಂದಿನ ಅಧ್ಯಕ್ಷತೆ ಗ್ರೂಪ್‌ 3ಕ್ಕೆ ಹೋಗಲಿದ್ದು, ಇದರಲ್ಲಿ ಬ್ರೆಜಿಲ್‌, ಅರ್ಜೆಂಟೀನಾ ಮತ್ತು ಮೆಕ್ಸಿಕೋ ದೇಶಗಳಿವೆ. ಒಮ್ಮೆ ಅಧ್ಯಕ್ಷತೆ ಒಲಿದ ಮೇಲೆ, ಇಡೀ ವರ್ಷ ಜಿ20 ದೇಶಗಳ ವಿವಿಧ ಪ್ರತಿನಿಧಿಗಳ ಸಮ್ಮೇಳನಗಳು ನಡೆಯುತ್ತವೆ.

ಜಿ20 ಉಗಮಕ್ಕೆ ಕಾರಣಗಳು

ಜಾಗತಿಕ ಹಣಕಾಸು ಸಮಸ್ಯೆಯೇ ಜಿ20 ಉಗಮಕ್ಕೆ ಕಾರಣವಾಯಿತು. ಅಂದರೆ, 1994ರಲ್ಲಿ ಮೆಕ್ಸಿಕೋದಲ್ಲಿ, 1997ರಲ್ಲಿ ಏಷ್ಯಾದಲ್ಲಿ ಆದ ಆರ್ಥಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು 1999ರ ಏಪ್ರಿಲ್‌ನಲ್ಲಿ ಕೆನಡಾದ ಪ್ರಧಾನಿ ಪೌಲ್‌ ಮಾರ್ಟಿನ್‌ ಮತ್ತು ಅಮೆರಿಕದ ಹಣಕಾಸು ಸಚಿವ ಲಾರೆನ್ಸ್‌ ಸಮ್ಮರೀಸ್‌ ಈ ಜಿ20ಯನ್ನು ಹುಟ್ಟುಹಾಕಿದರು. 1999ರ ಡಿಸೆಂಬರ್‌ನಲ್ಲಿ ಮೊದಲ ಜಿ20 ಶೃಂಗಸಭೆ ನಡೆಯಿತು. ಇದರಲ್ಲಿ ಹಣಕಾಸು ಸಚಿವರು ಮತ್ತು  ಕೇಂದ್ರ ಬ್ಯಾಂಕ್‌ಗಳ ಗವರ್ನರ್‌ಗಳು ಭಾಗಿಯಾಗಿದ್ದರು. 2001ರಲ್ಲಿಯೂ ಜಿ20 ಸಚಿವರ ಸಭೆ ನಡೆದಿತ್ತು. 2008ರ ನ.14 ಮತ್ತು 15ರಂದು ಮೊದಲ ಬಾರಿಗೆ ಜಾಗತಿಕ ನಾಯಕರ ಸಮಾಗಮವಾಯಿತು. 2009ರ ಸೆ.24-25ರಂದು ನಡೆದ ಸಮ್ಮೇಳನದಲ್ಲಿ ಜಗತ್ತಿನ ಆರ್ಥಿಕ ಸಹಕಾರಕ್ಕೆ ಇದೇ ಪ್ರಮುಖ ಒಕ್ಕೂಟ ಎಂದು ಘೋಷಣೆ ಮಾಡಲಾಯಿತು. 2022ರ ಡಿ.1ರಿಂದ ಭಾರತ ಜಿ20 ದೇಶಗಳ ಅಧ್ಯಕ್ಷತೆ ವಹಿಸಿದೆ.

ಜಿ20 ಕೆಲಸ ಮಾಡುವುದು ಹೇಗೆ?

ಜಿ20ಗೆ ಶಾಶ್ವತ ಅಧ್ಯಕ್ಷರಿಲ್ಲ. ಈ 20 ರಾಷ್ಟ್ರಗಳಲ್ಲಿ ಅಧ್ಯಕ್ಷತೆ ಆವರ್ತನ ರೀತಿಯಲ್ಲಿ ಬದಲಾಗುತ್ತಿರುತ್ತದೆ. ಕಳೆದ ವರ್ಷ ಇಂಡೋನೇಶ್ಯಾ ಅಧ್ಯಕ್ಷತೆ ವಹಿಸಿಕೊಂಡಿದ್ದರೆ, ಈ ವರ್ಷ ಭಾರತ ವಹಿಸಿಕೊಂಡಿದೆ. ಮುಂದಿನ ವರ್ಷ ಬ್ರೆಜಿಲ್‌ ಅಧ್ಯಕ್ಷತೆ ವಹಿಸಿಕೊಳ್ಳಲಿದೆ.  ಸಾಮಾನ್ಯವಾಗಿ ಯಾವ ದೇಶ ಅಧ್ಯಕ್ಷತೆ ವಹಿಸಿಕೊಳ್ಳುತ್ತದೆಯೋ, ಅದೇ ಈ ಜಿ20 ಶೃಂಗದ ಅಜೆಂಡಾವನ್ನೂ ರೂಪಿಸುತ್ತದೆ. ವಿಶೇಷವೆಂದರೆ, ಜಿ20 ಆತಿಥ್ಯ ವಹಿಸಿಕೊಳ್ಳುವ ದೇಶಕ್ಕೆ ಮತ್ತೆರಡು ದೇಶಗಳು ಬೆಂಬಲ ನೀಡುತ್ತವೆ. ಅವು ಹಿಂದಿನ ವರ್ಷ ಆತಿಥ್ಯ ವಹಿಸಿಕೊಂಡ ದೇಶ, ಮತ್ತೂಂದು ಮುಂದಿನ ವರ್ಷದ ದೇಶ. ಇದಕ್ಕೆ ಟ್ರೋಯೋಕಾ ಎಂದು ಕರೆಯಲಾಗುತ್ತದೆ. ಸದ್ಯ ಈ ಟ್ರೋಯೋಕಾದಲ್ಲಿ ಇಂಡೋನೇಷ್ಯಾ, ಭಾರತ ಮತ್ತು ಬ್ರೆಜಿಲ್‌ ಸದಸ್ಯ ರಾಷ್ಟ್ರಗಳಾಗಿವೆ. ಅಲ್ಲದೆ ಅಜೆಂಡಾವನ್ನು ಮೂರು ರೀತಿಯಲ್ಲಿ ರೂಪಿಸಲಾಗುತ್ತದೆ. ಒಂದು ಶಾರ್ಪ್‌ ಟ್ರಾಕ್‌, ಫೈನಾನ್ಸ್‌ ಟ್ರಾಕ್‌ ಮತ್ತು ಎಂಗೇಜ್‌ಮೆಂಟ್‌ ಗ್ರೂಪ್‌.

ಹಿಂದಿನ ಸಮ್ಮೇಳನಗಳು ಮತ್ತು ನಿರ್ಣಯಗಳು

2008-2009: ವಾಷಿಂಗ್ಟನ್‌ ಡಿ.ಸಿ, ಲಂಡನ್‌, ಪೀಟ್ಸ್‌ಬರ್ಗ್‌

ಮೊದಲ ಸಮ್ಮೇಳನ ನಡೆದದ್ದು ವಾಷಿಂಗ್ಟನ್‌ನಲ್ಲಿ. ಅಲ್ಲಿನ ಜಗತ್ತಿನ ಅರ್ಥ ವ್ಯವಸ್ಥೆ ಸುಧಾರಣೆ ಬಗ್ಗೆ ಚರ್ಚೆ ನಡೆಸಲಾಯಿತು. ತೆರಿಗೆ ವಂಚನೆಯನ್ನು ತಪ್ಪಿಸುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಲ್ಲಿ ತಡೆಯದ ಮತ್ತು ಸಹಕರಿಸದ ರಾಷ್ಟ್ರಗಳನ್ನು ಕಪ್ಪುಪಟ್ಟಿಗೆ ಸೇರಿಸಲು ನಿರ್ಧಾರವಾಗಿತ್ತು. ವಿತ್ತೀಯ ಸ್ಥಿರತಾ ಮಂಡಳಿ (ಎಫ್ಎಸ್‌ಬಿ) ಸ್ಥಾಪನೆಗೆ ತೀರ್ಮಾನ, ಕಠಿನ ಬ್ಯಾಂಕಿಂಗ್‌ ನಿಯ ಮಗಳ ಜಾರಿಗೆ ತೀರ್ಮಾನ. ಬಂಡವಾಳ ಹೂಡಿಕೆಗೆ ತಡೆಯಾಗುವ ಕಠಿನ ನಿಯಮಗಳ ಜಾರಿ ಮಾಡದಂತೆ ತಡೆ.

2010 ಮತ್ತು 2011: ಟೊರಾಂಟೊ, ಸಿಯೋಲ್‌, ಕೇನ್ಸ್‌

ಶ್ರೀಮಂತ ರಾಷ್ಟ್ರಗಳು ಕೊರತೆ ಬಜೆಟ್‌ ಪ್ರಮಾಣವನ್ನು ನಿಯಂತ್ರಿಸಲು ಪಣ. ವಿದೇಶಗಳಿಂದ ಸಾಲ ಪಡೆದುಕೊಳ್ಳುವುದು, ಬೇಸಲ್‌ ಮೂರನೇ ಹಂತದ ನಿಯಮ ಜಾರಿಗೆ ಒಪ್ಪಿಗೆ, ಐಎಂಎಫ್ನ ಪಾಲು ಪ್ರಮಾಣ ಪರಿಷ್ಕರಣೆ, ಅಭಿವೃದ್ಧಿ ನೀತಿಗಳ ಪರಾಮರ್ಶೆ,

2012, 2013 ಮತ್ತು 2014: ಲಾಸ್‌ ಕಾಬೋಸ್‌, ಸೈಂಟ್‌ ಪೀಟರ್ಸ್‌ಬರ್ಗ್‌, ಬ್ರಿಸ್ಬೇನ್‌

ತೆರಿಗೆ ವಂಚನೆ ಮಾಡುವವರನ್ನು ಮಟ್ಟ ಹಾಕುವ ವಿಚಾರದಲ್ಲಿ ಪ್ರಗತಿ, ರಾಷ್ಟ್ರಗಳ ನಡುವೆ ಸ್ವಯಂ ಚಾಲಿತವಾಗಿ ತೆರಿಗೆ ಮಾಹಿತಿ ರವಾನೆಗೆ ಒಪ್ಪಿಗೆ.

2015 ಮತ್ತು 2016: ಅಂಟಾಲ್ಯ ಮತ್ತು ಹ್ಯಾಗ್ಜೌ

ಜಾಗತಿಕ ಹವಾಮಾನ ವಿಚಾರಕ್ಕೆ ಸಂಬಂಧಿಸಿದಂತೆ ಒಪ್ಪಿಗೆ, ಸಹ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳ ನಡುವೆ ಸಂಬಂಧ ಕಲ್ಪಿಸಲು ಒಪ್ಪಿಗೆ.

2017: ಹ್ಯಾಮ್‌ಬರ್ಗ್‌

ಭಯೋತ್ಪಾದನೆ, ಇಂಧನ ಭದ್ರತೆ, ಶುದ್ಧ ಇಂಧನವನ್ನು ಪಡೆದುಕೊಳ್ಳುವ ಬಗ್ಗೆ ಪರಾಮರ್ಶೆ

2018: ಬ್ಯೂನಸ್‌ ಐರಿಸ್‌

ಹಿಂದಿನ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯ ಗಳನ್ನು ಈಡೇರಿಸಿ, ಕಂಡುಕೊಳ್ಳಲಾಗಿರುವ ಸಾಧನೆಗಳ ಕ್ರೋಡೀಕರಣ.

2019: ಒಸಾಕಾ

ಇಂಟರ್‌ನೆಟ್‌ ಅನ್ನು ಭಯೋತ್ಪಾದನೆ ಉದ್ದೇಶಕ್ಕಾಗಿ ಬಳಕೆ ಮಾಡುವುದರ ಮೇಲೆ ತಡೆ

2020: ಸೌದಿ ಅರೇಬಿಯಾ

ಮೊದಲ ಬಾರಿಗೆ ವರ್ಚುವಲ್‌ ಆಗಿ ನಡೆದ ಸಮ್ಮೇಳನ. ಕೊರೊನಾ ಹಿನ್ನೆಲೆಯಲ್ಲಿ ಜಗತ್ತಿನ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ 5 ಟ್ರಿಲಿಯನ್‌ ಡಾಲರ್‌ ಮೊತ್ತ ಹೂಡಿಕೆ ಮಾಡಲು ತೀರ್ಮಾನ. ಸಾಲದಿಂದ ತೊಂದರೆಗೆ ಒಳಗಾಗಿರುವ ರಾಷ್ಟ್ರಗಳಿಗೆ ನೆರವು.

2021: ಇಟಲಿ

ಬಹುರಾಷ್ಟ್ರೀಯ ಕಂಪೆನಿಗಳು ಕಾರ್ಯನಿರ್ವಹಿಸುವ ರಾಷ್ಟ್ರಗಳಲ್ಲಿ ಶೇ.15 ಕನಿಷ್ಠ ತೆರಿಗೆ ನೀಡಬೇಕು ಎಂಬ ಬಗ್ಗೆ ಒಪ್ಪಂದ.

2022: ಬಾಲಿ, ಇಂಡೋನೇಷ್ಯಾ

ಕೊರೊನಾ ಅನಂತರದಲ್ಲಿ ಜಗತ್ತಿನ ವ್ಯವಸ್ಥೆ ಚೇತರಿಕೆಯತ್ತ ಗಮನ.

ಟಾಪ್ ನ್ಯೂಸ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.