Politics: ಮಾಜಿ ಶಾಸಕರಿಗೆ ಕಾಂಗ್ರೆಸ್‌ ಗಾಳ?


Team Udayavani, Sep 8, 2023, 11:02 PM IST

CONGRESS FLAG IMP

ಬೆಂಗಳೂರು: ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಹಾಗೂ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಟಾರ್‌ ಬಿಜೆಪಿ ತೊರೆಯುವ ಸಾಧ್ಯತೆ ದಟ್ಟವಾಗಿದ್ದು, ಅಲ್ಲದೆ ಬಿಜೆಪಿಯ ಒಂದು ಡಜನ್‌ಗೂ ಹೆಚ್ಚು ಮಾಜಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್‌ ಮುಂದಾಗಿದೆ.

ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌ ಈ ತಂತ್ರಗಾರಿಕೆ ಆರಂಭಿಸಿದೆ. ಆದರೆ ಹಾಲಿ ಶಾಸಕರನ್ನು ಕರೆತರಲು ಪಕ್ಷದ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ಸಚಿವರಿಂದಲೂ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ.

ಸೋಮಶೇಖರ್‌ ಹಾಗೂ ಹೆಬ್ಟಾರ್‌ ಅವರನ್ನು ಬೇರೆ ಬೇರೆ ಕಾರಣಗಳಿಂದ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ನ ಉನ್ನತ ವಲಯದ ಒಪ್ಪಿಗೆ ಇದೆ. ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್‌ ಶಾಸಕರಿಗೆ ಹೆಬ್ಟಾರ್‌ ಅನ್ನು ಮರಳಿ ಕಾಂಗ್ರೆಸ್‌ಗೆ ಕರೆ ತಂದು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಲೆಕ್ಕಾಚಾರಗಳು ಇವೆ. ಅದೇ ಸೂತ್ರ ಸೋಮಶೇಖರ್‌ಗೂ ಅನ್ವಯಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಮಾಜಿ ಶಾಸಕರು ಹಾಗೂ ಸ್ಥಳೀಯವಾಗಿ ಪ್ರಭಾವ ಹೊಂದಿರುವ ಮುಖಂಡರನ್ನು ಪಕ್ಷಕ್ಕೆ ಕರೆತಂದು ಲೋಕಸಭಾ ಚುನಾವಣೆಯಲ್ಲಿ ಸರಾಸರಿ ಮತ ಗಳಿಕೆ ಹೆಚ್ಚಿಸಿಕೊಳ್ಳಬೇಕೆಂಬ ತಂತ್ರವನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೆಣೆದಿದ್ದಾರೆ. ಬೈಂದೂರಿನ ಮಾಜಿ ಶಾಸಕ ಸುಕುಮಾರ್‌ ಶೆಟ್ಟಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದು, ಸುಮಾರು ಒಂದು ಡಜನ್‌ ನಾಯಕರನ್ನು ಡಿಕೆಶಿ ಈಗಾಗಲೇ ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.

ಆಪರೇಷನ್‌ ಹಸ್ತ ಕಾಂಗ್ರೆಸ್‌ಗೆ ಮುಳುವಾಗುತ್ತದೆ. ಆಪರೇಷನ್‌ ಹಸ್ತಕ್ಕೆ ಸಿಲುಕಿದವರ ಪರಿಸ್ಥಿತಿ ಲೋಕಸಭೆ ಚುನಾವಣೆ ಬಳಿಕ ನಾಯಿ ಪಾಡಾಗಲಿದೆ. ಈಗಲೇ ಅಲ್ಲಿ 136 ಜನ ಶಾಸಕರಿದ್ದಾರೆ. ಈಗ ಕಾಂಗ್ರೆಸ್ಸಿಗೆ ಹೋದವರನ್ನು ಮತ್ತೆ ಲಾಸ್ಟ್‌ ಬೆಂಚ್‌ನಲ್ಲಿ ಕುಳ್ಳರಿಸುತ್ತಾರೆ. ಇದನ್ನು ಗೃಹ ಸಚಿವ ಜಿ. ಪರಮೇಶ್ವರ್‌ ಅವರೇ ಹೇಳಿದ್ದಾರೆ. ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್‌ ಕೊಡುತ್ತೇವೆ ಎಂದು ಯಾರೂ ಹೇಳಿಲ್ಲ. ಈ ಕುರಿತು ಸೆ.9ರಂದು ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸುತ್ತೇವೆ. ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದಾಗಲೂ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ ಮತ್ತೆ ರೈತರ ಆತ್ಮಹತ್ಯೆಗಳು ಪ್ರಾರಂಭವಾಗಿದ್ದು, ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ. 5 ಲಕ್ಷ ರೂ. ಪರಿಹಾರ ಕೊಡಲು ಆರಂಭಿಸಿದ ಬಳಿಕ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್‌ ಹೇಳಿಕೆ ಖಂಡನೀಯ. ಜೆಡಿಎಸ್‌-ಬಿಜೆಪಿ ಮೈತ್ರಿ ಸ್ವಾಗತಾರ್ಹ.
 -ಬಿ.ಸಿ.ಪಾಟೀಲ್‌, ಮಾಜಿ ಸಚಿವ

 

ಟಾಪ್ ನ್ಯೂಸ್

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R Ashok (2)

BJP; ವಿಪಕ್ಷ ನಾಯಕ ಆರ್‌. ಅಶೋಕ್‌ ನಡೆಗೆ ಕಾಂಗ್ರೆಸ್‌ ಖಂಡನೆ

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

1-weewqe

Road roller ಅಡಿಯಲ್ಲಿ ಸಿಲುಕಿ ಇಬ್ಬರು ದಾರುಣ ಸಾ*ವು

yatnal

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

subharamaya-Swamiji

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.