G-20: ಬಲಾಡ್ಯರ ಮುಖಾಮುಖಿಗೆ ದಿಲ್ಲಿ ವೇದಿಕೆ
Team Udayavani, Sep 8, 2023, 11:49 PM IST
ಇಂದಿನಿಂದ ಆರಂಭವಾಗಲಿರುವ ಜಿ20 ಶೃಂಗಸಭೆಯಲ್ಲಿ ಭಾಗಿಯಾಗುವ 20 ರಾಷ್ಟ್ರಗಳೂ ಒಂದಲ್ಲ ಒಂದು ದೃಷ್ಟಿಯಲ್ಲಿ ಬಲಾಡ್ಯವೇ ಆಗಿವೆ. ಅದರಲ್ಲೂ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಭಾರತ, ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದೆ. ವೆಚ್ಚ ಮಾಡುವ ಲೆಕ್ಕಾಚಾರದಲ್ಲಿ ಭಾರತ 4ನೇ ದೊಡ್ಡ ಆರ್ಥಿಕತೆಯಾಗಿದ್ದರೆ, ಆರೋಗ್ಯ ಕ್ಷೇತ್ರದ ಮೇಲೆ ಕಡಿಮೆ ವೆಚ್ಚ ಮಾಡುವ ದೇಶವಾಗಿದೆ. ಹಾಗಾದರೆ ಈ ಜಿ20 ದೇಶಗಳ ಸ್ಥಿತಿಗತಿ ಹೇಗಿದೆ? ಆರ್ಥಿಕತೆ ಹೇಗಿದೆ? ವೆಚ್ಚದ ಲೆಕ್ಕಾಚಾರವೇನು? ಇಲ್ಲಿದೆ ಮಾಹಿತಿ…
ಶೇ.60 ಜನಸಂಖ್ಯೆ
ಜಿ20 ಸದಸ್ಯ ರಾಷ್ಟ್ರಗಳು 78 ವರ್ಷಗಳ ಸರಾಸರಿ ಜೀವಿತಾವಧಿಯೊಂದಿಗೆ 4.9 ಶತಕೋಟಿ ಜನರಿಗೆ ನೆಲೆಯಾಗಿದೆ ಮತ್ತು ಪ್ರಸ್ತುತ ಸರಾಸರಿ ವಯಸ್ಸು 39, ಜಾಗತಿಕ ಸರಾಸರಿ 30 ಇದೆ. ವಿಶ್ವದಲ್ಲಿ ಈಗಾಗಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿರುವ ಭಾರತ ಶೇ.17.84, ಚೀನ ಶೇ.17.81 ಪಾಲು ಹೊಂದಿವೆ.
ಶಿಕ್ಷಣದ ಮೇಲೆ ಎಷ್ಟು ವೆಚ್ಚ?
ಶಿಕ್ಷಣದ ಮೇಲೆ ಮಾಡುವ ವೆಚ್ಚವನ್ನು ಗಮನಿಸಿದಾಗ, ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಭಾರತದ ಖರ್ಚು ಹೆಚ್ಚಿದೆ. ಅಂದರೆ ಜಪಾನ್ ದೇಶವು ತನ್ನ ಜಿಡಿಪಿಯ ಶೇ.3.4ರಷ್ಟನ್ನು ಶಿಕ್ಷಣ ವಲಯಕ್ಕಾಗಿ ವೆಚ್ಚ ಮಾಡುತ್ತಿದೆ. ಮೊದಲ ಸ್ಥಾನದಲ್ಲಿ ಸೌದಿ ಅರೇಬಿಯಾ ಇದ್ದು ಇಲ್ಲಿ ಶೇ.7.8, ದಕ್ಷಿಣ ಆಫ್ರಿಕಾ ಶೇ.6.6, ಅಮೆರಿಕ ಶೇ.6.1, ಆಸ್ಟ್ರೇಲಿಯ ಶೇ.6.1, ಬ್ರೆಜಿಲ್ ಶೇ.6, ಇಂಗ್ಲೆಂಡ್ ಶೇ.5.5, ಫ್ರಾನ್ಸ್ ಶೇ.5.5., ಕೆನಡಾ ಶೇ.5.2, ಐರೋಪ್ಯ ಒಕ್ಕೂಟ ಶೇ.5.1, ಅರ್ಜೆಂಟೀನಾ ಶೇ.5, ದಕ್ಷಿಣ ಕೊರಿಯಾ ಶೇ.4.7, ಜರ್ಮನಿ ಶೇ.4.7, ಭಾರತ ಶೇ.4.5, ಮೆಕ್ಸಿಕೋ ಶೇ.4.3, ಇಟಲಿ ಶೇ.4.3, ರಷ್ಯಾ ಶೇ.3.7, ಚೀನ ಶೇ.3.6, ಇಂಡೋನೇಷ್ಯಾ ಶೇ.3.5, ಟರ್ಕಿ ಶೇ.3.4ರಷ್ಟು ವೆಚ್ಚ ಮಾಡುತ್ತಿವೆ.
ಡಿಜಿಟಲ್ ಇಂಡಿಯಾಕ್ಕೆ ಮುಖಾಮುಖೀಯಾಗಲಿದೆ ಜಿ20
ಭಾರತಕ್ಕೆ ಆಗಮಿಸಿರುವ ಜಿ20 ನಾಯಕರು ದೇಶದ ಡಿಜಿಟಲ್ ಸಾಧನೆಗಳಿಗೆ ಮುಖಾಮುಖೀಯಾಗಲಿದ್ದಾರೆ. “ಡಿಜಿಟಲ್ ಇಂಡಿಯಾ’ ಎಂಬ ಯೋಜನೆಯ ಮೂಲಕ ಜನರ ಬದುಕನ್ನು ಸುಲಭ ಮಾಡಲು ಕೇಂದ್ರ ಸರಕಾರ ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಯುಪಿಐ ಪಾವತಿ, ಇ ಸಂಜೀವಿನಿ, ಭಾಷಿಣಿ, ಆಧಾರ್, ಡಿಜಿಲಾಕರ್, ದೀûಾ ಪೋರ್ಟಲ್‌ಗಳನ್ನು ಪ್ರದರ್ಶಿಸಲು ಹೊಸದಿಲ್ಲಿಯ ಭಾರತ ಮಂಟಪಂನ 4 ಮತ್ತು 14ನೇ ಹಾಲ್‌ಗಳಲ್ಲಿ ವಿಶೇಷ ವಲಯ ಸೃಷ್ಟಿಸಲಾಗಿದೆ.
ಜಿ20ಗೆ ಆಗಮಿಸುವ ಅತಿಥಿಗಳಿಗೆ ನೀಡಲಾಗಿರುವ ಕಚೇರಿಗಳು, ಎಲ್ಲರೂ ಕಲೆಯುವ ಸಾಮಾನ್ಯ ಪ್ರದೇಶಗಳ ವೀಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಡಿಜಿಟಲ್ ಇಂಡಿಯಾ ಬಗ್ಗೆಯೂ ಮಾಹಿತಿಯಿದೆ.
ಏನೇನಿರಲಿದೆ?: ಇ ಸಂಜೀವಿನಿ ಪೋರ್ಟಲ್ ಮೂಲಕ ಭಾರತೀಯರು ದೂರವಾಣಿ ಕರೆಯ ಮೂಲಕವೇ ಚಿಕಿತ್ಸೆಯನ್ನು, ಔಷಧಗಳನ್ನು ಪಡೆಯಬಹುದು. ಜಿ20ಗೆ ಆಗಮಿಸಿದ ಯಾವುದೇ ಅತಿಥಿಗಳು ಏನೇ ಸಮಸ್ಯೆಯಿದ್ದರೂ ಇ ಸಂಜೀವಿನಿಯನ್ನು ಬಳಸಿ ಚಿಕಿತ್ಸೆಯನ್ನು, ಔಷಧವನ್ನು ಡಿಜಿಟಲ್ ರೂಪದಲ್ಲೇ ಪಡೆಯಬಹುದು.
ಸಂಸ್ಕೃತಿ ಪಥ: ಭಾರತ ಮಂಟಪಂನಲ್ಲಿ ಕಲ್ಚರ್ ಕಾರಿಡಾರ್ ಅಥವಾ ಸಂಸ್ಕೃತಿ ಪಥವನ್ನು ನಿರ್ಮಿಸಲಾಗಿದೆ. ಇದು ಡಿಜಿಟಲ್ ಮೂಲಕ ಪ್ರದರ್ಶಿಸಲ್ಪಡುವ ಸಂಗ್ರಹಾಲಯ. ಇದರಲ್ಲಿ “ಪ್ರಜಾಪ್ರಭುತ್ವದ ಮಾತೆ’ ಎಂಬ ಪ್ರದರ್ಶನ ನಡೆಯಲಿದೆ. ಹಾಗೆಯೇ 27 ಅಡಿ ಎತ್ತರದ, ಅಷ್ಟಧಾತುವಿನಿಂದ ನಿರ್ಮಿಸಿದ ನಟರಾಜನ ಮೂರ್ತಿಯಿದೆ.
ಭಾಷಿಣಿ: ಎಐ ತಂತ್ರಜ್ಞಾನ ಆಧಾರಿತ ವೇದಿಕೆ ಭಾಷಿಣಿ ಇನ್ನೊಂದು ಪ್ರಮುಖ ಆಕರ್ಷಣೆ. ಈ ಆ್ಯಪ್ ಅಥವಾ ಚ್ಯಾಟ್‌ಬೋಟ್ ಬಳಸಿ ಜಿ20 ರಾಷ್ಟ್ರಗಳ ಯಾವುದೇ ಭಾಷೆಯಲ್ಲಿ ಮಾಹಿತಿ ಪಡೆಯಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಭಾಷಾ ಅಡೆತಡೆಗಳನ್ನು ನಿವಾರಿಸಬೇಕೆಂದು ಈ ಹಿಂದೆ ಪ್ರಧಾನಿ ಮೋದಿ ಎಸ್‌ಸಿಒ ಸಮ್ಮೇಳನದಲ್ಲಿ ಕರೆ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
“ಆರ್‌ಬಿಐ ಇನ್ನೋವೇಶನ್ ಹಬ್ ಪೆವಿಲಿಯನ್’ ಮೂಲಕ ಭಾರತ ಆರ್ಥಿಕ ತಂತ್ರಜ್ಞಾನದಲ್ಲಿ ಸಾಧಿಸಿದ ಪ್ರಗತಿಯನ್ನು ನೋಡಬಹುದು. ಸಾಲ ಕೊಡುವುದರಲ್ಲಿ, ಡಿಜಿಟಲ್ ರುಪೀ ಬಳಕೆಯಲ್ಲಿನ ಡಿಜಿಟಲ್ ಕ್ರಾಂತಿಯೇ ಗಮನಾರ್ಹ ಸಂಗತಿ.
ಭಾಗಿಯಾಗುತ್ತಿರುವ ಅತಿಥಿ ದೇಶಗಳು
ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲೆಂಡ್ಸ್, ನೈಜೀರಿಯಾ, ಒಮಾನ್, ಸಿಂಗಾಪುರ, ಸ್ಪೇನ್, ಯುಎಇ.
ಖಾಯಂ ಅತಿಥಿ ಸಂಸ್ಥೆಗಳು
ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ, ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟ, ಆರ್ಥಿಕ ಸ್ಥಿರತೆ ಮಂಡಳಿ, ಒಇಸಿಡಿ.
ಆಹ್ವಾನಿತ ಜಾಗತಿಕ ಸಂಸ್ಥೆಗಳು
ಅಂತಾರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ತಡೆ ಮೂಲಸೌಕರ್ಯ ಒಕ್ಕೂಟ, ಏಷ್ಯಾ ಅಭಿವೃದ್ಧಿ ಬ್ಯಾಂಕ್.
ಪ್ರಾದೇಶಿಕ ಸಂಸ್ಥೆಗಳು
ಆಫ್ರಿಕಾ ಒಕ್ಕೂಟ, ಆಫ್ರಿಕಾ ಒಕ್ಕೂಟ ಅಭಿವೃದ್ಧಿ ಮಂಡಳಿ-ಎನ್‌ಇಪಿಎಡಿ, ಸೌತ್ ಈಸ್ಟ್ ಏಷಿಯನ್ ನೇಶನ್ಸ್ ಅಸೋಸಿಯೇಶನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.