Vegetable prices: ತರಕಾರಿ ಬೆಲೆ ಇಳಿಕೆ: ರೈತರು ಕಂಗಾಲು
Team Udayavani, Sep 9, 2023, 11:02 AM IST
ದೇವನಹಳ್ಳಿ: ರಸಗೊಬ್ಬರ ಮತ್ತು ಔಷಧಿಗಳ ಬೆಲೆ ಏರಿಕೆ ಇದ್ದರೆ ಸಹ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಯಾಗಿರುವುದು ರೈತರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ತರಕಾರಿ ಬೆಳೆಗಳಲ್ಲಿ ಸಾಕಷ್ಟು ಏರುಪೇರುಗಳು ಆಗುತ್ತಿದೆ. ಒಂದು ಕಡೆ ಇಳುವರಿ ಹೆಚ್ಚುವರಿಯಾಗಿದ್ದು ಸಮರ್ಪಕವಾಗಿ ತರಕಾರಿಗಳು ಬರುತ್ತಿರುವುದರಿಂದ ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡಿದೆ.
ಹಲವಾರು ತರಕಾರಿಗಳು ಇಂದಿಗೂ ಅದರ ಬೆಲೆ ಇದ್ದೇ ಇರುತ್ತದೆ. ಒಂದು ಕೆ.ಜಿ.ಗೆ 30 -40,50-60 ಗಳಿಗೆ ತರಕಾರಿ ದೊರೆಯುತ್ತಿದೆ. ಔಷಧಿ ಮತ್ತು ರಸಗೊಬ್ಬರ ಬೆಲೆ ಹೆಚ್ಚಿದೆ. ರೈತರಿಂದ ವ್ಯಾಪಾರಿಗಳು ತೋಟಗಳಿಂದ ಎಂಟರಿಂದ 10 ಮತ್ತು 12 ರೂ.ಗೆ ತರಕಾರಿ ಖರೀದಿಸುತ್ತಾರೆ. ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸಾಲ ಸೋಲಾ ಮಾಡಿ ತರಕಾರಿ ಬೆಳೆದರು ಸಹ ಬೆಲೆ ಸಿಗದೇ ಬದುಕು ಅತಂತ್ರವಾಗಿದೆ ಅಂತಾರೆ ರೈತರು.
ಬೆಂಬಲ ಬೆಲೆ ಕಲ್ಪಿಸಿ: ಒಂದು ಕಡೆ ಮಳೆ ಕೈಕೊಟ್ಟಿದೆ. ಮಳೆ ಇಲ್ಲದೆ ಬೋರ್ವೆಲ್‌ಗಳಲ್ಲಿ ಮತ್ತು ಕೆರೆ ಕುಂಟೆಗಳಲ್ಲಿ ನೀರು ಕಡಿಮೆಯಾಗುತ್ತಿವೆ. ಇರುವ ಬೋರ್‌ವೆಲ್‌ನಲ್ಲಿ ಅಲ್ಪಸಲ್ಪದ ನೀರಿನಲ್ಲಿಯೇ ತೋಟ ಗಾರಿಕೆ ಮತ್ತು ಕೃಷಿ ಚಟುವಟಿಕೆ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರ ರೈತರ ಬೆಳೆಯುವ ಬೆಳೆ ಗಳಿಗೆ ಬೆಂಬಲ ಬೆಲೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು. ರೈತರು ಬೆಳೆ ಯುವ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಿದರೆ ಮತ್ತಷ್ಟು ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯಾವ ಯಾವ ಕಾಲಗಳಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದರ ಮಾಹಿತಿ ನೀಡುವಂತಾ ಗಬೇಕು ಎಂದು ರೈತರು ಹೇಳುತ್ತಾರೆ.
ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಶ್ವತವಾದ ನದಿ ಮೂಲಗಳಿಲ್ಲ ಕೇವಲ ಮಳೆ ಆಶ್ರಿತವಾಗಿಯೇ ಕೃಷಿ ಮತ್ತು ತೋಟ ಗಾರಿಕೆ ಬೆಳೆಗಳನ್ನು ರೈತರ ಬೆಳೆಯುತ್ತಿದ್ದಾರೆ. ಬೆಂ.ಗ್ರಾಂ.ಜಿಲ್ಲೆಯಲ್ಲಿ ಈಗಾಗಲೇ ಒಂದು ಕಡೆ ಕೆಐಡಿಬಿ ಹಾಗೂ ಐಟಿಐಆರ್ ಹಾಗೂ ಇತರೆ ಉದ್ದೇಶಗಳಿಗೆ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿದೆ. ಫಲವತ್ತದ ಭೂಮಿಗಳು ಭೂಮಿ ಗಳು ಕೈಗಾರಿಕೆ ಮತ್ತು ಇತರೆ ಉದ್ದೇಶಗಳಿಗೆ ನೀಡುತ್ತಿದ್ದಾರೆ. ಈ ಕೂಡಲೇ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಎಂದು ರೈತರ ಆಗ್ರಹವಾಗಿದೆ.
ಬಂಡವಾಳ ಸಹ ಸಿಗ್ತಿಲ್ಲ: ಬೆಲೆ ಏರಿಳಿತ ಸಹಜವಾಗಿದೆ. ರೈತರು ಬೆಂಗಳೂರು ಮಾರುಕಟ್ಟೆ, ಚಿಕ್ಕಬಳ್ಳಾಪುರ, ದೊಡ್ಡಬ ಳ್ಳಾಪುರ, ಕೋಲಾರ, ಮಾರುಕಟ್ಟೆಗಳಿಗೆ ತರಕಾರಿ ಬೆಳೆದು ಹಾಕುತ್ತಾರೆ. ತಾವು ಬೆಳೆದ ತರಕಾರಿ ಸಾಗಾಣಿಕೆ ವಚ್ಚ ಹೆಚ್ಚಿದೆ. ಕೂಲಿ ಸರಿಯಾದ ಸಮಯಕ್ಕೆ ಬರುವುದು ಕಷ್ಟವಾಗುತ್ತದೆ. ಔಷಧಿ ಮತ್ತು ಕೂಲಿಕಾರರು ಸಾರಿಗೆ ಸಂಪರ್ಕ ಎಲ್ಲ ಸೇರಿದರು ಸಹ ರೈತರಿಗೆ ಹಾಕಿದ ಬಂಡವಾಳವೂ ಸಹ ಸಿಗದ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ ಎಂದು ರೈತರು ತಮ್ಮ ತೋಡಿಕೊಳ್ಳುತ್ತದೆ. ಎಲ್ಲ ಸೊಪ್ಪುಗಳ ಬೆಲೆ ಸಹ ಕಡಿಮೆಯಿದೆ. ಕೊತ್ತಂಬರಿಸೊಪ್ಪು, ದಂಟಿನ ಸೊಪ್ಪು, ಪಾಲಕು,ಮೆಂತೆ, ವಿವಿಧ ಸೊಪ್ಪುಗಳು 10 ರಿಂದ 20 ರೂ.ಗಳಿಗೆ ಸಿಗುತ್ತಿದೆ.
ತರಕಾರಿ ಬೆಳೆಗಳು ಅಂಕಿ ಅಂಶ: ಈರುಳ್ಳಿ ರೂ. 20, ಆಲೂಗಡ್ಡೆ 20, ಟೊಮ್ಯಾಟೋ 15, ಕ್ಯಾರೆಟ್ 40, ಹಾಗಲಕಾಯಿ, ಮೂಲಂಗಿ 20, ಬದನೆಕಾಯಿ 15, ಬೆಂಡೆಕಾಯಿ, ಬೀಟ್‌ರೂಟ್ 30, ಹೀರೆಕಾಯಿ 25 ರೂ., ನುಗ್ಗೆಕಾಯಿ 60, ಸೌತೆಕಾಯಿ 10, ಕ್ಯಾಪ್ಸಿಕಂ 30, ಹುರುಳಿಕಾಯಿ 40, ಕುಂಬಳಕಾಯಿ 30, ಹೂಕೋಸು 20, ಎಲೆಕೋಸು 20, ಮೆಣಸಿನಕಾಯಿ 40, ನೌಕೋಲ್ 30 ರೀತಿ ತರಕಾರಿಗಳಲ್ಲಿ ಬೆಲೆಯಿದೆ. ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ರಸಗೊಬ್ಬರ ಮತ್ತು ಔಷಧಿಗಳು ಬೆಲೆ ಏರಿಕೆ ಆಗಿದೆ. ಆದರೂ ಸಹ ತೋಟಗಾರಿಕೆ ಕೃಷಿ ಪದ್ಧತಿಗಳನ್ನು ನಮ್ಮ ತಂದೆ ತಾತ ಮುತ್ತಾತನ ಕಾಲದಿಂದ ಮಾಡಿಕೊಂಡು ಬಂದಿದ್ದೇವೆ.
ಸಾಲ ಸೋಲ ಮಾಡಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ಸಹ ವ್ಯಾಪಾರಸ್ಥರು ತೋಟಗಳಿಗೆ ಬಂದು ಎಂಟ ರಿಂದ ಹತ್ತು ರೂಪಾಯಿ 12 ರೂಪಾಯಿಗೆ ತೆಗೆದುಕೊಂಡು ಹೋಗುತ್ತಾರೆ. ರೈತರಿಗೆ ಬೆಳೆಗಳು ಬೆಳೆದರೂ ಸಹ ಬೆಳೆ ಇಳಿಕೆಯಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದಿವೆ. – ಪುರುಷೋತ್ತಮ್, ರೈತ
ತರಕಾರಿ ಬೆಳೆಯಲ್ಲಿ ಸಾಕಷ್ಟು ಹೇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿದೆ. ಪ್ರತಿ ತರಕಾರಿ ಬೆಲೆಯಲ್ಲೋ ಇಳಿಕೆಯಾಗಿದೆ. ಪೆಟ್ರೋಲ್ ಡೀಸೆಲ್ ಏರಿಕೆಯಿಂದ ಟ್ರಾನ್ಸ್‌ಪೋರ್ಟ್ ಸಹ ಹೆಚ್ಚಾಗಿದೆ. ತರಕಾರಿಗಳನ್ನು ತಂದು ಮಾರಾಟ ಮಾಡುವುದೇ ಕಷ್ಟವಾಗುತ್ತದೆ. – ಸಿದ್ದರಾಜು, ವ್ಯಾಪಾರಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.