Lok Adalat; ಉತ್ತರಕನ್ನಡ ಜಿಲ್ಲೆಯಲ್ಲಿ 27,555 ಪ್ರಕರಣ ಇತ್ಯರ್ಥ
27,01,38,424,ರೂ. ಸಂಬಂಧಿತರಿಗೆ ಪರಿಹಾರ, ಮತ್ತೆ ಒಂದಾದ ಅಂತರ್ಜಾತಿ ವಿವಾಹವಾದ ಜೋಡಿ
Team Udayavani, Sep 9, 2023, 8:36 PM IST
ಕಾರವಾರ: ಜಿಲ್ಲೆಯಲ್ಲಿ ಲೋಕ್ ಅದಾಲತ್ ಯಶಸ್ವಿಯಾಗಿದೆ. ಜಿಲ್ಲೆಯ ಒಟ್ಟು 28 ನ್ಯಾಯಪೀಠಗಳಲ್ಲಿ ರಾಜಿ ಸಂಧಾನದ ಮೂಲಕ 27,555 ಪ್ರಕರಣ ಇತ್ಯರ್ಥವಾದವು. ಇದರಲ್ಲಿ 23,353 ವ್ಯಾಜ್ಯಪೂರ್ವ ಪ್ರಕರಣಗಳು, 22 ಮೋಟಾರವಾಹನ ಅಪಘಾತ ಪ್ರಕರಣಗಳು, ಸೇರಿವೆ ಎಂದು ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಕಾರ್ಯದರ್ಶಿ ರೇಣುಕಾ ರಾಯ್ಕರ್ ತಿಳಿಸಿದ್ದಾರೆ.
ಇತರೆ ಕ್ರಿಮಿನಲ್ ಪ್ರಕರಣಗಳು 25,465 ಸಹ ಒಟ್ಟು ಪ್ರಕರಣಗಳಲ್ಲಿ ಸೇರಿವೆ. ಮೋಟಾರ್ ವಾಹನ ಪ್ರಕರಣಗಳಲ್ಲಿ ಬಾಧಿತರಿಗೆ 1,71,67,900 ರೂ.ಪರಿಹಾರ ನೀಡಲಾಗಿದೆ. ಬ್ಯಾಂಕ್ ಸಾಲ ಮರುಪಾವತಿ, ವಿವಿಧ ಪ್ರಕರಣಗಳಲ್ಲಿ ದಂಡ, ಕೆಲ ಪ್ರಕರಣಗಳಲ್ಲಿ ಪರಿಹಾರ, ಸೇರಿ 27 ಕೋಟಿ ರೂ.ಗಳಿಗೂ ಹೆಚ್ಚಿನ ಪರಿಹಾರ ವಿತರಿಸಲಾಗಿದೆ.
ಅಂತರ್ಜಾತಿ ವಿವಾಹ ಒಂದುಗೂಡಿಕೆ
ಹಳಿಯಾಳ ಸಿನೀಯರ್ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕಾ ಅದಾಲತ್ ನಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಮಹಿಳೆ, ಲಿಂಗಾಯತ ಸಮಾಜದ ಪುರುಷ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಹತೆ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಭಾಗ್ಯಶ್ರೀ ಮತ್ತು ವೆಂಕಟೇಶ್ ಹೊನ್ನಿಕೇರಿಗೆ ಬುದ್ಧಿವಾದ ಹೇಳಿದ ನ್ಯಾಯಾಧೀಶೆ ನಾಗಮ್ಮ ಇಚ್ಚಂಗಿ, ನ್ಯಾಯಾಧೀಶ ದೇಶಭೂಷಣ ಕೌಜಲಗಿ ಜೋಡಿಯನ್ನು ಮತ್ತೆ ಒಂದು ಮಾಡಿದರು. ಇವರ ಪರ ವಕೀಲರಾದ ಅರಶಿಣಗೇರಿ, ರೇಣುಕಾ ಹಾಗೂ ವಕೀಲರಾದ ಜಯಾ ಡಿ. ನಾಯ್ಕ, ಗಡೆಪ್ಪನವರ, ಕವಿತಾ ಗಡೆಪ್ಪನವರ , ವಕೀಲರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.