Kota ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದ ಆರೋಪಿ ಪೊಲೀಸ್ ವಶಕ್ಕೆ
Team Udayavani, Sep 9, 2023, 10:47 PM IST
ಕೋಟ: ಕೋಟ ಮೂಕೈì ಸಮೀಪ ಬೆಟ್ಲಕ್ಕಿಯ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಗೂ ತ್ಯಾಜ್ಯ ಎಸೆಯುತ್ತಿದ್ದವರನ್ನು ಸ್ಥಳೀಯರು ರಾತ್ರಿ ಪೂರ್ತಿ ಕಾದು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.
ಈ ಭಾಗದಲ್ಲಿ ನಿರಂತರವಾಗಿ ಕಸವನ್ನು ಎಸೆಯಲಾಗುತ್ತಿದ್ದು ಸ್ವತ್ಛಗೊಳಿಸಿದರೂ ಕೂಡ ಮತ್ತೆ-ಮತ್ತೆ ತ್ಯಾಜ್ಯ ರಾಶಿ ಬೀಳುತಿತ್ತು. ಹೀಗಾಗಿ ಸ್ಥಳೀಯ ಯುವಕರು ಎರಡು-ಮೂರು ದಿನಗಳಿಂದ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚುವ ಸಲುವಾಗಿ ರಾತ್ರಿ ಪೂರ್ತಿ ನಿದ್ದೆಬಿಟ್ಟು ಕಾಯುತ್ತಿದ್ದರು. ಶನಿವಾರ ಬೆಳಗಿನ ಜಾವ 2 ಗಂಟೆಗೆ ಸಾಲಿಗ್ರಾಮ ಬಸ್ ನಿಲ್ದಾಣ ಸಮೀಪ ಹೊಸದಾಗಿ ತೆರೆಯಲಾದ ಫಾಸ್ಟ್‌ಪುಡ್ ಅಂಗಡಿಯೊಂದರಿಂದ ತ್ಯಾಜ್ಯವನ್ನು ತಂದು ಸುರಿಯುವಾಗ ಆರೋಪಿಗಳನ್ನು ಹಾಗೂ ವಾಹನವನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಈ ಬಗ್ಗೆ ಸಾಲಿಗ್ರಾಮ ಪ. ಪಂ. ಕೂಡ ಠಾಣೆಗೆ ದೂರು ನೀಡಿದ್ದು ಆರೋಪಿಗಳಿಗೆ ದಂಡ ವಿಧಿಸುವಂತೆ ತಿಳಿಸಲಾಗಿದೆ. ಸೋಮವಾರ ಮುಖ್ಯಾಧಿಕಾರಿಗಳು ಠಾಣೆಗೆ ತೆರಳಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಥಳೀಯ ವಾರ್ಡ್ ಸದಸ್ಯೆ ಸುಕನ್ಯಾ ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.