Amravati ಹಿಂದೂ ಧರ್ಮ ಎಂದಿಗೂ ಅಂತ್ಯಗೊಳಿಸಲು ಸಾಧ್ಯವಾಗಿಲ್ಲ: ಫಡ್ನವೀಸ್
Team Udayavani, Sep 10, 2023, 6:56 PM IST
ಅಮರಾವತಿ: ಈ ದೇಶದ ಮೇಲೆ ಯಾರು ದಾಳಿಗಳನ್ನು ಮಾಡಿದರೋ ಅವರೇ ಅಂತ್ಯಗೊಂಡರೂ ಹೊರತು ಹಿಂದೂ ಧರ್ಮ ಎಂದಿಗೂ ಅಂತ್ಯವಾಗಲು ಸಾಧ್ಯವಾಗಿಲ್ಲ. ಹಿಂದೂ ಧರ್ಮವನ್ನು ನಾಶಮಾಡುವ ತಾಕತ್ತು ಯಾರಿಗಿದೆ? ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಹಿಂದೂ ಧರ್ಮವನ್ನು ಕೊನೆಗಾಣಿಸುವ ಬಗ್ಗೆ ಮಾತನಾಡುತ್ತಿದ್ದರೆ, ಅವರು ತಮ್ಮ ಸ್ಥಾನವನ್ನು ತೋರಿಸಬೇಕಾಗುತ್ತದೆ.
ಹಿಂದೂ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದ ಸ್ಟಾಲಿನ್ ಅವರ ತಂದೆ ಎಂ. ಕೆ. ಸ್ಟಾಲಿನ್ ಪಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪಕ್ಕದಲ್ಲಿ ಕುಳಿತಿದ್ದಾರೆ. ಈಗ ಯಾರ ಜೊತೆ ಇದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಈಗ ಖಂಡಿತ ಅವರನ್ನು ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟೀಕಿಸಿದರು.
ಸಂಸದ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ಅವರ ಯುವ ಸ್ವಾಭಿಮಾನ್ ಪಾರ್ಟಿ ನವಾಥೆ ಚೌಕ್ ಪ್ರದೇಶದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ದೇವೇಂದ್ರ ಫಡ್ನವೀಸ್ ಮಾತನಾಡಿ, ರಾಣಾ ದಂಪತಿಯು ಹನುಮಾನ್ ಚಾಲೀಸಾವನ್ನು ಪಠಿಸಿದರು. ಆದ್ದರಿಂದ ಅವರು ಮಹಾವಿಕಾಸ್ ಅಘಾಡಿ ಸರಕಾರದ ಅವಧಿಯಲ್ಲಿ 12 ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಕೆಲವರ ಆಡಳಿತಾವಧಿಯಲ್ಲಿ ನಮ್ಮ ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಅವಕಾಶವಿರಲಿಲ್ಲ. ಹನುಮಾನ್ ಚಾಲೀಸಾವನ್ನು ಇಲ್ಲಿ ಪಠಿಸಬಾರದು, ಆದರೆ ಪಾಕಿಸ್ತಾನದಲ್ಲಿ ಮಾಡಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಫಡ್ನವೀಸ್, ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ದಿನ ದೂರವಿಲ್ಲ. ನಾವು ಪಾಕಿಸ್ತಾನದಲ್ಲಿಯೂ ಹನುಮಾನ್ ಚಾಲೀಸಾವನ್ನು ಪಠಿಸಬಹುದು.
ಅಮರಾವತಿ ಜಿಲ್ಲೆಗೆ ಕಳೆದ ಎಪ್ಪತ್ತು ವರ್ಷಗಳಲ್ಲಿ ಏಷ್ಟು ನಿಧಿ ದೊರೆಯಬೇಕಿತ್ತೋ ಅಷ್ಟು ಹಣ ಸಿಕ್ಕಿಲ್ಲ, ಆದರೆ ನಮ್ಮ ಆಡಳಿತದಲ್ಲಿ ಸಿಕ್ಕಷ್ಟು ಹಣ ಸಿಕ್ಕಿದೆ ಎಂದು ಫಡ್ನವೀಸ್ ಹೇಳಿಕೊಂಡಿದ್ದಾರೆ.
ಅಮರಾವತಿಯಲ್ಲಿ ಉದ್ದೇಶಿತ ಸರಕಾರಿ ವೈದ್ಯಕೀಯ ಕಾಲೇಜು, ವಿಮಾನ ನಿಲ್ದಾಣ ಅಭಿವೃದ್ಧಿ, ಮೆಗಾ ಟೆಕ್‌ಸ್ಟೈಲ್ ಪಾರ್ಕ್, ಹನುಮಾನ್ ವ್ಯಾಯಂ ಪ್ರಸಾರಕ ಮಂಡಲದಲ್ಲಿ ಕ್ರೀಡಾ ವಿಶ್ವವಿದ್ಯಾಲಯ, ರಿದ್ಧಾಪುರದಲ್ಲಿ ಮರಾಠಿ ಭಾಷಾ ವಿಶ್ವವಿದ್ಯಾಲಯ, ರಸ್ತೆ ಕಾಮಗಾರಿ ರೂ. ಈ ಸಂದರ್ಭದಲ್ಲಿ ಚಿತ್ರನಟಿ ಶಿಲ್ಪಾ ಶೆಟ್ಟಿ, ನಟ ರಾಜಪಾಲ್ ಯಾದವ್, ಸಂಸದ ನವನೀತ್ ರಾಣಾ, ಡಾ|ಅನಿಲ ಬೋಂಡೆ, ಶಾಸಕ ರವಿ ರಾಣಾ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.