World Cup ಸಮೀಪಿಸುತ್ತಿರುವ ಹೊತ್ತಿನಲ್ಲೇ ಪ್ರಭುತ್ವ ಸ್ಥಾಪಿಸಲು ಹೊರಟ ಆಸ್ಟ್ರೇಲಿಯ
Team Udayavani, Sep 10, 2023, 11:37 PM IST
ಬ್ಲೋಮ್‌ಫಾಂಟೀನ್: ಮತ್ತೊಂದು ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆಸ್ಟ್ರೇಲಿಯ ತನ್ನ ಪ್ರಭುತ್ವ ಸ್ಥಾಪಿಸಲು ಹೊರಟ ಸೂಚನೆಯೊಂದು ಕಂಡುಬರುತ್ತಿದೆ. ದಕ್ಷಿಣ ಆಫ್ರಿಕಾ ಮೇಲೆ ಅವರದೇ ಅಂಗಳದಲ್ಲಿ ಸವಾರಿ ಮಾಡಲಾರಂಭಿಸಿದೆ. ದ್ವಿತೀಯ ಏಕದಿನ ಪಂದ್ಯವನ್ನು 123 ರನ್ನುಗಳ ಭಾರೀ ಅಂತರದಿಂದ ಜಯಿಸಿ, 2-0 ಮುನ್ನಡೆ ಸಾಧಿಸುವ ಮೂಲಕ ಕಾಂಗರೂ ಪಡೆ ತನ್ನ ಪರಾಕ್ರಮ ಮೆರೆದಿದೆ.
ಬ್ಲೋಮ್‌ಫಾಂಟೀನ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 8 ವಿಕೆಟಿಗೆ 392 ರನ್ ರಾಶಿ ಹಾಕಿತು. ಇದು ಕಾಂಗರೂ ತಂಡದ 3ನೇ ಗರಿಷ್ಠ ಮೊತ್ತ. ಜವಾಬಿತ್ತ ದಕ್ಷಿಣ ಆಫ್ರಿಕಾ 8.1 ಓವರ್ ಉಳಿದಿರುವಾಗಲೇ 269ಕ್ಕೆ ಆಲೌಟ್ ಆಯಿತು.
ಇದು 5 ಪಂದ್ಯಗಳ ಸರಣಿಯಾಗಿದೆ. ಮೊದಲ ಪಂದ್ಯವನ್ನು ಆಸ್ಟ್ರೇಲಿಯ 3 ವಿಕೆಟ್‌ಗಳಿಂದ ಗೆದ್ದಿತ್ತು. ಇದಕ್ಕೂ ಹಿಂದಿನ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿತ್ತು.
ವಾರ್ನರ್ ಮತ್ತು ಮಾರ್ನಸ್ ಲಬುಶೇನ್ ಅವರ ಶತಕ ಆಸ್ಟ್ರೇಲಿಯದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ವಾರ್ನರ್ 93 ಎಸೆತಗಳಿಂದ 106 ರನ್ ಬಾರಿಸಿದರೆ (12 ಬೌಂಡರಿ, 3 ಸಿಕ್ಸರ್), ಲಬುಶೇನ್ 99 ಎಸೆತ ಎದುರಿಸಿ 124 ರನ್ ಹೊಡೆದರು (19 ಬೌಂಡರಿ, 1 ಸಿಕ್ಸರ್). ಆಸ್ಟ್ರೇಲಿಯದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ಲಬುಶೇನ್ ಈ ಎರಡೂ ಪಂದ್ಯಗಳ ಗೆಲುವಿನ ರೂವಾರಿ ಎಂಬುದನ್ನು ಮರೆಯುವಂತಿಲ್ಲ. ಮೊದಲ ಮುಖಾಮುಖೀಯ ವೇಳೆ ಬದಲಿ ಆಟಗಾರನಾಗಿ, 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಬುಶೇನ್ ಅಜೇಯ 80 ರನ್ ಬಾರಿಸಿ ಆಸ್ಟ್ರೇಲಿಯವನ್ನು ಯಶಸ್ವಿಯಾಗಿ ದಡ ಸೇರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.