Poltics; ಸಿದ್ದರಾಮಯ್ಯಗೆ ಮೊದಲ ಬಾರಿ ಗೂಟದ ಕಾರು ಸಿಕ್ಕಿದ್ದು ಬಿಜೆಪಿಯಿಂದ: ಈಶ್ವರಪ್ಪ
Team Udayavani, Sep 11, 2023, 3:23 PM IST
ಶಿವಮೊಗ್ಗ: ಕಾಂಗ್ರೆಸ್ ದೇಶ ಲೂಟಿ ಮಾಡಿದ ಸರ್ಕಾರ ಎಂದು ಕರ್ನಾಟಕದಲ್ಲಿ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಅಟಲ್ ಜಿ ಬೇಷರತ್ ಬೆಂಬಲ ನೀಡಿದ್ದರು. ಆಗ ಜನತಾ ಪರಿವಾರದ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದರು. ಅವರ ಅವಧಿಯಲ್ಲಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಮೊದಲ ಬಾರಿ ಗೂಟದ ಕಾರು ಸಿಕ್ಕಿದ್ದು ಬಿಜೆಪಿಯಿಂದ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ಅವರು ಬಿಜೆಪಿಗೆ ರಾಷ್ಟ್ರೀಯವಾದಿ ಪಕ್ಷ ಅಂತಿದ್ದರು. ಯಾಕೆಂದರೆ ಅವರಿಗೆ ಗೂಟದ ಕರು ಸಿಕ್ಕಿತ್ತು. ಆದರೆ ಈಗ ಕೋಮುವಾದಿ ಅಂತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಕಳೆದ ಬರಿ 25 ಸೀಟು ಲೋಕಸಭೆಯಲ್ಲಿ ಬಂದಿತ್ತು. ಕಾಂಗ್ರೆಸ್ ಗೆ ಕೇವಲ ಒಂದು ಸೀಟ್ ಸಿಕ್ಕಿತ್ತು. ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಗೆ 28ಕ್ಕೆ 28 ಸೀಟು ಸಿಗುತ್ತದೆ. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಲಿದೆ. ಹಿಂದೆ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ 17 ಶಾಸಕರನ್ನು ಮತ್ತೆ ಸೇರಿಸಿಕೊಳ್ಳಲ್ಲ ಅಂದಿದ್ದರು. ಈಗ ಕರೆಯುತ್ತಿದ್ದಾರೆ, ಆದರೆ ಯಾರೂ ಕಾಂಗ್ರೆಸ್ ಗೆ ಹೋಗಲ್ಲ ಎಂದರು.
ಉಚಿತ ವಿದ್ಯುತ್ ಕೊಡವುದಿರಲಿ, ಎಷ್ಟೇ ಹಣ ಕೊಡುತ್ತೇವೆ ಎಂದರೂ ವಿದ್ಯುತ್ ಸಿಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸುತ್ತಿಲ್ಲ. ಯಾಕೆಂದರೆ ಸರ್ಕಾರದ ಬಳಿ ಹಣವಿಲ್ಲ. ಕೊನೆಯ ಪಕ್ಷ ಅರ್ಜಿ ಹಾಕಿದವರಿಗೆ ಯಾವಾಗ ಹಣ ಕೊಡುತ್ತಾರೆ ಎನ್ನುವುದನ್ನು ಹೇಳಲಿ. ಯುವ ನಿಧಿ ಆರಂಭವೇ ಆಗಿಲ್ಲ. ಬಸ್ ಫ್ರೀ ಯಿಂದ ಬೆಂಗಳೂರಿನಲ್ಲಿ ಮುಷ್ಕರ ಆರಂಭವಾಗಿದೆ. ಇವರ ಐದೂ ಗ್ಯಾರಂಟಿ ಸಂಪೂರ್ಣ ವಿಫಲವಾಗಿದೆ. ಸಿಎಂ, ಡಿಸಿಎಂ ಅದನ್ನು ಸ್ಪಷ್ಟಪಡಿಸಲಿ ಎಂದು ಈಶ್ವರಪ್ಪ ಟೀಕಿಸಿದರು.
ಇದನ್ನೂ ಓದಿ:UI Movie: ಉಪ್ಪಿ ನಿವಾಸದ ಮುಂದೆ ಜಮಾಯಿಸಿದ ಫ್ಯಾನ್ಸ್; ಕೊನೆಗೂ ಟೀಸರ್ ಡೇಟ್ ಅನೌನ್ಸ್
ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬ ರೈತನನ್ನೂ ಭೇಟಿ ಆಗುತ್ತಿಲ್ಲ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ 150ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಸಚಿವರು ಹೇಳಿರುವುದು ರೈತರಿಗೆ ಮಾಡಿರುವ ಅಪಮಾನ. ರೈತರ ಬೆಳೆ ಪರಿಹಾರ ಸಿಗುತ್ತಿಲ್ಲ. ಬರ ಪೀಡಿತ ತಾಲೂಕು ಘೋಷಣೆ ಮುಂದೂಡಿದ್ದಾರೆ. ಕಂದಾಯ ಇಲಾಖೆ ಸತ್ತು ಹೋಗಿದೆಯೆ? ಸರ್ವೆ ಮಾಡದೆ ಕೇಂದ್ರ ಸಹಕಾರ ಕೊಡುತ್ತಿಲ್ಲ ಎನ್ನುತ್ತಿದ್ದಾರೆ ಎಂದರು.
ಉಸ್ತುವಾರಿ ಸಚಿವ ಮಧು ಡಿಸಿ ಜೊತೆ ಸಭೆ ನಡೆಸಲಿ. ರೈತರ ಆತ್ಮಹತ್ಯೆ, ಬೆಳೆ ಪರಿಹಾರ ಕುರಿತು ಮಾಹಿತಿ ಪಡೆಯಲಿ. ನೀವಾದರೂ ಸಚಿವರು ರಾಜ್ಯದಲ್ಲಿದ್ದಾರೆ ಎನ್ನುವುದನ್ನು ತೋರ್ಪಡಿಸಿ. ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ತಲೆದೋರಿದೆ. ಗ್ಯಾರಂಟಿ ಅಂತ ಜನರನ್ನು ಪರದಾಡುವಂತೆ ಮಾಡಿದ್ದಾರೆ. ರೈತರ ಶಾಪ ನಿಮಗೆ ತಟ್ಟದಿರಲಿ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನ ನಂಬುತ್ತಾರೆ. ಇಲ್ಲದಿದ್ದರೆ ಮೋಸಗಾರ ಸರ್ಕಾರವೆಂದು ಜನ ಬೀದಿಗಿಳಿಯುತ್ತಾರೆ. ಹಾಗಾಗಿ ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟಪಡಿಸಲಿ ಎಂದು ಈಶ್ವರಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.