Delhi- Goa ವಿಮಾನದೊಳಗೆ ನಾಯಿಯ ಕಿರಿಕ್!; ಮಹಿಳೆಯ ವಿರುದ್ಧ ಕೇಸ್
Team Udayavani, Sep 11, 2023, 4:12 PM IST
ಪಣಜಿ: ದೆಹಲಿಯಿಂದ ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಎಂದಿನಂತೆಯೇ ಶಾಂತತೆಯಿಂದ ಪ್ರಯಾಣಿಕರು ಕುಳಿತಿದ್ದರು. ಕೆಲವು ಪ್ರಯಾಣಿಕರು ಪುಸ್ತಕಗಳನ್ನು ಓದುತ್ತಿದ್ದರು, ಕೆಲವರು ಮೊಬೈಲ್‍ನಲ್ಲಿ ನಿರತರಾಗಿದ್ದರು. ಕೆಲವರು ತಮ್ಮ ಪಕ್ಕದಲ್ಲಿ ಕುಳಿತ ಪ್ರಯಾಣಿಕರೊಂದಿಗೆ ಮಾತನಾಡುತ್ತಿದ್ದರೆ, ಇನ್ನು ಕೆಲವರು ತಮ್ಮ ಮಕ್ಕಳೊಂದಿಗೆ ಮಾತನಾಡುವುದರಲ್ಲಿ ಮಗ್ನರಾಗಿದ್ದರು. ಅದೇ ಸಮಯದಲ್ಲಿ ನಡೆದ ಘಟನೆಯೊಂದು ವಿಮಾನದಲ್ಲಿ ಕೋಲಾಹಲವನ್ನು ಉಂಟುಮಾಡಿತು. ಹಲವು ಪ್ರಯಾಣಿಕರು ಭಯಭೀತರಾದರು.
ಮಹಿಳೆಯೊಬ್ಬರು ನಾಯಿಯೊಂದಿಗೆ ಪ್ರಯಾಣ ಬೆಳೆಸುತ್ತಿದ್ದರು. ಇದ್ದಕ್ಕಿದ್ದಂತೆ ನಾಯಿ ಆಕೆಯ ಹಿಡಿತದಿಂದ ತಪ್ಪಿಸಿಕೊಂಡು ತನಗೆ ಸಿಗುವ ದಿಕ್ಕಿಗೆ ಬೊಗಳುತ್ತಾ ಓಡಿತು. ಇದು ಪ್ರಯಾಣಿಕರಲ್ಲಿ ಭಯವನ್ನುಂಟು ಮಾಡಿತು. ಅನೇಕರು ಪರದಾಡಿದರು. ವಿಮಾನದಲ್ಲಿದ್ದ ಪುಟ್ಟ ಹುಡುಗಿ ಬೆಚ್ಚಿ ಬಿದ್ದು ಬೊಬ್ಬಿಡಲು ಆರಂಭಿಸಿದಳು. ಹೇಗೋ ಪರಿಸ್ಥಿತಿ ಹತೋಟಿಗೆ ಬಂತು. ಆದರೆ, ಈ ಪ್ರಕರಣದಲ್ಲಿ 30 ವರ್ಷದ ಅಲಿಶಾ ಅಧಾನ್ ಎಂಬ ಮಹಿಳೆಯ ಮೇಲೆ ಜನರ ಜೀವಕ್ಕೆ ಅಪಾಯ ತಂದಿರುವ ಆರೋಪ ಹೊರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಮಹಿಳೆ ದೆಹಲಿಯ ನಿವಾಸಿಯಾಗಿದ್ದು, ಗೋವಾಗೆ ಪ್ರಯಾಣಿಸುತ್ತಿದ್ದಳು. ಮಹಿಳೆ ತನ್ನ ಮುದ್ದಿನ ನಾಯಿಯನ್ನು ವಿಮಾನದಲ್ಲಿ ಕರೆತಂದಿದ್ದಳು. ನಾಯಿಯನ್ನು ಪಂಜರದಲ್ಲಿ ಬಂಧಿಸಲಾಗಿತ್ತಾದರೂ ವಿಚಿತ್ರವಾಗಿ ಕಿರುಚಲು ಆರಂಭಿಸಿದ ಕಾರಣ ಹೊರಗೆ ಬಿಡಲಾಗಿದೆ. ನಾಯಿಯನ್ನು ಹೊರ ಬಿಟ್ಟಿರುರುವುದನ್ನು ವಿರೋಧಿಸಿ ಹಲವು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಪರಿಸ್ಥಿತಿಯನ್ನು ವಿಮಾನ ಸಿಬಂದಿ ಹೇಗೋ ನಿಭಾಯಿಸಿದರು.
ಗೋವಾ ಮೋಪಾ ವಿಮಾನ ನಿಲ್ದಾಣ ಪೊಲೀಸರು ಈ ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ವಿಚಾರಣೆಗಾಗಿ ಠಾಣೆಗೆ ಕರೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!
Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು
Tragedy: ದೇವಸ್ಥಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು, CCTVಯಲ್ಲಿ ಸೆರೆಯಾಯ್ತು ದೃಶ್ಯ
Viral Video: ಮದ್ಯ ಸೇವಿಸಿ ನಡುರಸ್ತೆಯಲ್ಲೇ ಮೂತ್ರ ವಿಸರ್ಜಿಸಿದ ಪೊಲೀಸ್ ಪೇದೆ.!
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.