BJP-JDS ಮೈತ್ರಿ; ನನಗೆ ಸಂಪೂರ್ಣ ಮಾಹಿತಿ ಇಲ್ಲ: ಪ್ರಹ್ಲಾದ್ ಜೋಶಿ

ದೇಶಕ್ಕೆ ಒಳ್ಳೆಯದಾದರೆ ಸಹಿಸೋಕೆ ಆಗದ ಸ್ಥಿತಿಗೆ ಕಾಂಗ್ರೆಸ್ ಬಂದಿದೆ

Team Udayavani, Sep 11, 2023, 5:56 PM IST

prahlad-joshi

ಹುಬ್ಬಳ್ಳಿ: ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಇನ್ನು ಅಂತಿಮವಾಗಿಲ್ಲ. ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಸೋಮವಾರ ಹೇಳಿಕೆ ನೀಡಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಸಮರ್ಥನೆ ಮಾಡಿಕೊಂಡಿರುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಅನಿವಾರ್ಯ ಅಂತ ಬೊಮ್ಮಾಯಿ ಅವರು ಸ್ಥಳೀಯವಾಗಿ ಹೇಳಿರಬಹುದು. ನಾನು ಕೇಂದ್ರದಲ್ಲಿ ಮಂತ್ರಿಯಾಗಿ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯದಲ್ಲ ಎಂದರು.

ಖಾಸಗಿ ಬಸ್ ಮಾಲಕರು ಅನುಭವಿಸುವ ತೊಂದರೆ ಕುರಿತಂತೆ ಪ್ರತಿಕ್ರಿಯೆ ನೀಡಿ, ಅವರ ಸಮಸ್ಯೆ ನಿವಾರಿಸುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ಶಕ್ತಿ ಯೋಜನೆಯಿಂದ ಇದರ ಪರಿಣಾಮವಾಗಿ ಅವರಿಗೆ ತೊಂದರೆಯಾಗಿರುವುದು ನಿಜ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದು, ಸರ್ಕಾರ ದುಡ್ಡು ಕೊಡುತ್ತಿಲ್ಲ. ಆದ್ದರಿಂದ ಈ ಬಗ್ಗೆಯೂ ಸರ್ಕಾರ ಗಮನಹರಿಸಬೇಕು. ಉಚಿತ ಗ್ಯಾರಂಟಿಗಳನ್ನು ಕೊಡುತ್ತಾ ಇದ್ದು, ಮನಬಂದಂತೆ ನಡೆದುಕೊಳುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಜಿ-20 ಭಾರತದ 75 ವರ್ಷದ ಇತಿಹಾಸದಲ್ಲಿ ಬಾರಿ ದೊಡ್ಡ ಮೈಲಿಗಲ್ಲಾಗಿದ್ದು, ಮುಖ್ಯವಾಗಿ ಭಿನ್ನಾಭಿಪ್ರಾಯ ಬರದಂತೆ ತೀರ್ಮಾನ ಮಾಡಿದ್ದೆ ಬಹು ದೊಡ್ಡ ಸಾಧನೆಯಾಗಿದೆ. ಭಾರತದ ನೇತೃತ್ವವನ್ನು ವಿದೇಶಗಳು ಒಪ್ಪುತ್ತಿವೆ. ಇದು ಸ್ಪಷ್ಟ ಸಂಕೇತವಾಗಿದೆ ಎಂದರು.

ಆಫ್ರಿಕನ್ ಒಕ್ಕೂಟ ಒಗ್ಗೂಡಿಸಲು ಭಾರತದ ಪ್ರಸ್ತಾವನೆ ಬಂದಾಗ ಇದನ್ನು ಸ್ವೀಕಾರ ಮಾಡಿದ್ದಾರೆ. ಮಧ್ಯ ಪ್ರಾಚ್ಯ ಹೊಸ ಕಾರಿಡಾರ್ ನಿರ್ಮಾಣಕ್ಕೆ ಸೂಚಿಸಿವೆ. ಭಾರತ ಎಲ್ಲಾ ಸಲಹೆಗಳನ್ನು ಮಾನ್ಯ ಮಾಡಿದ್ದಾರೆ. ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಆ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಜೈರಾಮ ರಮೇಶ ಅವರಿಗೆ ಎಂತಹ ದರಿದ್ರತೆ ಬಂದಿದೆ ಎಂದರೆ, ಮಳೆ ನೀರು ನಿಂತಿರುವುದನ್ನು ಟ್ವೀಟ್ ಮಾಡುತ್ತಾರೆ. ಇಡೀ ಜಗತ್ತು ಭಾರತ ಹೊಗಳುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ತೆಗಳುತ್ತಿದೆ. ಇದು ಮಾನಸಿಕ ರೋಗ. ದೇಶಕ್ಕೆ ಒಳ್ಳೆಯದಾದರೆ ಅದನ್ನು ಸಹಿಸೋಕೆ ಆಗದ ಸ್ಥಿತಿಗೆ ಕಾಂಗ್ರೆಸ್ ನವರು ಬಂದು ತಲುಪಿದ್ದಾರೆ. ಪ್ರಧಾನಿ ಮೋದಿಯವರನ್ನು ವಿರೋಧ ಮಾಡುವ ಭರದಲ್ಲಿ ದೇಶವನ್ನೇ ವಿರೋಧ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೋಶಿ ಹರಿಹಾಯ್ದರು.

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

PG NEET-2024: ನೋಂದಣಿ ವಿಸ್ತರಣೆ

KSRTC VOLVO

Dasara: ಎರಡು ಸಾವಿರ ಹೆಚ್ಚುವರಿ ಬಸ್‌

school

ರಾಜ್ಯ ಪಠ್ಯಕ್ರಮ ಬೋಧನೆ ಕಡ್ಡಾಯ : ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

4

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Exam

PG NEET-2024: ನೋಂದಣಿ ವಿಸ್ತರಣೆ

KSRTC VOLVO

Dasara: ಎರಡು ಸಾವಿರ ಹೆಚ್ಚುವರಿ ಬಸ್‌

school

ರಾಜ್ಯ ಪಠ್ಯಕ್ರಮ ಬೋಧನೆ ಕಡ್ಡಾಯ : ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.