![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 12, 2023, 11:33 AM IST
ಮುಂಬಯಿ: ಬಾಲಿವುಡ್ ನಲ್ಲಿ ತನ್ನ ಮೊದಲ ಸಿನಿಮಾದ ಮೂಲಕ ಅಟ್ಲಿ ಮೋಡಿ ಮಾಡಿದ್ದಾರೆ. ಶಾರುಖ್ ಜೊತೆಗಿನ ಕಾಂಬಿನೇಷನ್ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡಿದೆ.
ಶಾರುಖ್ ಖಾನ್ ಅವರ ʼಜವಾನ್ʼ ಸಿನಿಮಾ ಯಶಸ್ವಿಯಾಗಿ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 520 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಲವು ದಾಖಲೆಗಳನ್ನು ʼಜವಾನ್ʼ ಉಡೀಸ್ ಮಾಡಿದೆ.
ಈ ನಡುವೆ ನಿರ್ದೇಶಕ ಅಟ್ಲಿ ಕುಮಾರ್ ಮುಂದಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಕೆಲಸ ಮಾಡುವುದರ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಭಾರತೀಯ ಸೇನೆ, ಮುಂಬೈ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸರಿಗಾಗಿ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ.
“ತುಂಬಾ ಸಂತೋಷವಾಗುತ್ತಿದೆ. ಇದು ದೇವರ ಆಶೀರ್ವಾದವಾಗಿದೆ. ದೇವರು ನಮ್ಮ ಮೇಲೆ ಕರುಣೆ ತೋರಿಸಿದ್ದಾನೆ. ಪ್ರೇಕ್ಷಕರನ್ನು ರಂಜಿಸಲು ನಾವು ನಮ್ಮ ಜವಬ್ದಾರಿಯನ್ನು ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ʼಜವಾನ್ʼ ಥಿಯೇಟರ್ ಪರದೆಯ ಮೇಲೆ ಮನರಂಜನೆ ನೀಡಿದೆ ಎಂದು ಎಂದುಕೊಳ್ಳುತ್ತೇನೆ. ಜನರು ಸಿನಿಮಾ ನೋಡಿ ಸಂತೋಷಪಟ್ಟಿದ್ದಾರೆ. ಇದೆಲ್ಲದಕ್ಕೆ ಶಾರುಖ್ ಖಾನ್ ಅವರು ಕಾರಣ. ಶಾರುಖ್ ಸರ್ ಮತ್ತು ರೆಡ್ ಚಿಲ್ಲಿಸ್ ಮತ್ತು ಹಗಲು ರಾತ್ರಿ ಸಿನಿಮಾಕ್ಕಾಗಿ ದುಡಿದ ತಂಡಕ್ಕೆ ಧನ್ಯವಾದಗಳು” ಎಂದು ಅಟ್ಲಿ ಹೇಳಿದ್ದಾರೆ.
“ನಾನು ಈಗಾಗಲೇ ಶಾರುಖ್ ಖಾನ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುವ ಯೋಜನೆಯಲ್ಲಿದ್ದೇನೆ. ಈ ಪ್ರಾಜೆಕ್ಟ್ ದೊಡ್ಡದಾಗಿರಲಿದೆ” ಎಂದು ಅಟ್ಲಿ ಹೇಳಿದ್ದಾರೆ.
“ನೀವು ತೋರಿಸಿದ ಅಪಾರ ಪ್ರೀತಿಯಿಂದ ಮತ್ತೊಮ್ಮೆ ನಾವು ದೊಡ್ಡದಾದ ಪ್ರಾಜೆಕ್ಟ್ ನೊಂದಿಗೆ ಬರುತ್ತೇವೆ. ನಾನು ಎಲ್ಲರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ನಾನು ಸಲ್ಮಾನ್, ಆಮಿರ್ ಹಾಗೂ ಹೃತಿಕ್ ಸರ್ ನೊಂದಿಗೆ ಕೆಲಸ ಮಾಡಲು ಬಯುಸುತ್ತೇನೆ. ಇದು ನನ್ನ ಮೊದಲ ಹಿಂದಿ ಚಿತ್ರ, ಹಾಗಾಗಿ ಪ್ರೀತಿಯನ್ನು ನೋಡಲು ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಚಿತ್ರವನ್ನು ಬೆಂಬಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು” ಎಂದು ಹೇಳಿದ್ದಾರೆ.
ʼಜವಾನ್ʼ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ನಟಿಸಿದ್ದಾರೆ. ಸೆ. 7ರಂದು ಸಿನಿಮಾ ರಿಲೀಸ್ ಆಗಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.