INDvsSL; ಕೊಲಂಬೊದಲ್ಲಿ ಮೋಡ ಕವಿದ ವಾತಾವರಣ; ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಸಾಧ್ಯತೆ
Team Udayavani, Sep 12, 2023, 1:28 PM IST
ಕೊಲಂಬೊ: ಪಾಕಿಸ್ತಾನ ವಿರುದ್ಧ ಸೂಪರ್ ಫೋರ್ ಪಂದ್ಯವನ್ನು ಗೆದ್ದ ಹುರುಪಿನಲ್ಲಿರುವ ಟೀಂ ಇಂಡಿಯಾ ಇಂದು ಆತಿಥೇಯ ಶ್ರೀಲಂಕಾವನ್ನು ಎದುರಿಸಲಿದೆ. ಏಷ್ಯಾ ಕಪ್ ಕೂಟದ ಸೂಪರ್ ಫೋರ್ ಸುತ್ತಿನಲ್ಲಿ ಇದು ಭಾರತದ ಎರಡನೇ ಪಂದ್ಯವಾಗಿದೆ. ಇಂದಿನ ಪಂದ್ಯವನ್ನು ಗೆದ್ದರೆ ಭಾರತ ಬಹುತೇಕ ಫೈನಲ್ ಎಂಟ್ರಿ ಪಡೆಯಲಿದೆ.
ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿಯೇ ಇಂದಿನ ಪಂದ್ಯವೂ ನಡೆಯಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯವು ರವಿವಾರ ಆರಂಭವಾಗಿ ಬಳಿಕ ಮಳೆಯ ಕಾರಣದಿಂದ ಮೀಸಲು ದಿನವಾದ ಸೋಮವಾರ ಪೂರ್ಣಗೊಂಡಿದೆ. ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಆದರೆ ಈ ಪಂದ್ಯಕ್ಕೆ ಯಾವುದೇ ಮೀಸಲು ದಿನ ಇರುವುದಿಲ್ಲ. ಒಂದು ವೇಳೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದಂಕ ನೀಡಲಾಗುತ್ತದೆ.
ಟೀಂ ಇಂಡಿಯಾ ಸತತ ಪಂದ್ಯಗಳನ್ನು ಆಡುತ್ತಿದೆ. ಸೋಮವಾರ ಪಾಕ್ ವಿರುದ್ಧದ ಪಂದ್ಯದ ಬಳಿಕ ಇಂದು ಮತ್ತೆ ಆಡಬೇಕಾದ ಕಾರಣ ಆಟಗಾರರಿಗೆ ಯಾವುದೇ ವಿಶ್ರಾಂತಿ ಸಮಯ ಸಿಕ್ಕಿಲ್ಲ. ಹೀಗಾಗಿ ವರ್ಕ್ ಲೋಡ್ ನಿಭಾಯಿಸಲು ಲಂಕಾ ವಿರುದ್ಧದ ಪಂದ್ಯಕ್ಕೆ ಕೆಲವರಿಗೆ ವಿಶ್ರಾಂತಿ ನೀಡಬಹುದು ಎನ್ನಲಾಗಿದೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿ ಐದು ಓವರ್ ಗಳ ಸ್ಪೆಲ್ ಮಾಡಿದ್ದ ವೇಗಿ ಜಸ್ಪ್ರೀತ್ ಬುಮ್ರಾ ನಂತರ ಬೌಲಿಂಗ್ ಗೆ ಇಳಿಯಲಿಲ್ಲ. ಅಲ್ಲದೆ ಹೆಚ್ಚಿನ ಸಮಯದಲ್ಲಿ ಫೀಲ್ಡಿಂಗ್ ಕೂಡಾ ಮಾಡದೆ ಡಗೌಟ್ ನಲ್ಲೇ ಕುಳಿತಿದ್ದರು. ಹೀಗಾಗಿ ವಿಶ್ವಕಪ್ ಗಮನದಲ್ಲಿರಿಸಿ ಅವರಿಗೆ ಇಂದಿನ ಪಂದ್ಯದಲ್ಲಿ ವಿಶ್ರಾಂತಿ ನೀಡಬಹುದು ಎನ್ನಲಾಗಿದೆ.
ಒಂದು ವೇಳೆ ಜಸ್ಪ್ರಿತ್ ಬುಮ್ರಾ ಲಂಕಾ ವಿರುದ್ದ ಆಡದಿದ್ದರೆ ಅವರಿಗೆ ಮೊಹಮ್ಮದ್ ಶಮಿ ಆಡಲಿದ್ದಾರೆ. ಶಮಿ ಅವರು ನೇಪಾಳ ವಿರುದ್ಧದ ಪಂದ್ಯದಲ್ಲಿ ಆಡಿ ಏಳು ಓವರ್ ಬೌಲಿಂಗ್ ಮಾಡಿದ್ದರು. 29 ರನ್ ನೀಡಿದ್ದ ಅವರು ಒಂದು ವಿಕೆಟ್ ಕಬಳಿಸಿದ್ದರು.
ಪಾಕ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೂಡಾ ಮಾಡಿದ್ದರಿಂದ ಇಶಾನ್ ಕಿಶನ್ ಬದಲಿಗೆ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ಸಿಗಬಹುದು. ಪಾಕ್ ವಿರುದ್ಧದ ಪಂದ್ಯಕ್ಕೆ ಮುನ್ನ ಅಯ್ಯರ್ ಬೆನ್ನು ನೋವಿಗೆ ಒಳಗಾಗಿದ್ದರು. ಒಂದು ವೇಳೆ ಅಯ್ಯರ್ ಚೇತರಿಕೆ ಕಂಡರೆ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು. ಉಳಿದಂತೆ ಪಾಕಿಸ್ತಾನ ವಿರುದ್ಧ ಆಡಿದ ತಂಡವೇ ಲಂಕಾ ವಿರುದ್ಧ ಆಡಲಿದೆ.
ಲಂಕಾ ವಿರುದ್ಧ ಪಂದ್ಯಕ್ಕೆ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿ.ಕೀ), ಶ್ರೇಯಸ್ ಅಯ್ಯರ್ / ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ / ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.