Goa: ಗೋವಾ ಎಕ್ಸ್ ಪ್ರೆಸ್ನ ಎಂಟು ಪ್ರಯಾಣಿಕರು ಹಠಾತ್ ಅಸ್ವಸ್ಥ
ಫುಡ್ ಪಾಯ್ಸನ್ ಶಂಕೆ
Team Udayavani, Sep 12, 2023, 5:28 PM IST
ಪಣಜಿ: ಸೋಮವಾರ ರಾತ್ರಿ ಗೋವಾ ಎಕ್ಸ್ ಪ್ರೆಸ್ ನ ಎಂಟು ಪ್ರಯಾಣಿಕರು ಹಠಾತ್ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಫುಡ್ ಪಾಯ್ಸನ್ ಆಗಿರುವ ಶಂಕೆ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆಯಲ್ಲಿರುವ ಪ್ರಯಾಣಿಕರಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ.
ಮೂಲಗಳ ಪ್ರಕಾರ, ವಾಸ್ಕೋ-ಡ-ಗಾಮಾ-ದೆಹಲಿ ಹಜರತ್ ನಿಜಾಮುದ್ದೀನ್ ಗೋವಾ ಎಕ್ಸ್ಪ್ರೆಸ್ ರೈಲಿನ ಎಂಟು ಪ್ರಯಾಣಿಕರು ಆಹಾರ ಸೇವನೆಯಿಂದ ಪ್ರಯಾಣದಲ್ಲಿ ಹಠಾತ್ ತೊಂದರೆ ಉಂಟಾಗಿ ರಾತ್ರಿ ವೇಳೆಯಲ್ಲಿ ಪುರುಷ ಮತ್ತು ಮಹಿಳೆ ಪ್ರಯಾಣಿಕರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲಾ ಪ್ರಯಾಣಿಕರು ಮಧ್ಯಪ್ರದೇಶದ ಖಾಂಡ್ವಾ ನಿವಾಸಿಗಳು. ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಸಹ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಬೆಳಗಾವಿಯಲ್ಲಿ ರೈಲನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.
ರೈಲು ಬೆಳಗಾವಿಗೆ ತಲುಪುತ್ತಿದ್ದಂತೆಯೇ ಈ ವಿಷಯವನ್ನು ಅಲ್ಲಿ ಸ್ಟೇಶನ್ ಮಾಸ್ಟರ್ ಗಮನಕ್ಕೆ ತರಲಾಗಿದೆ. ತಕ್ಷಣವೇ ರೈಲಿನಲ್ಲಿ ಅಸ್ವಸ್ಥಗೊಂಡಿದ್ದ 8 ಜನ ಪ್ರಯಾಣಿಕರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Space Science: ಸ್ಪೇಸ್ಎಕ್ಸ್ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
MUST WATCH
ಹೊಸ ಸೇರ್ಪಡೆ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್ಖಾನ್ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್ಎಕ್ಸ್ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.