BJP-JDS ಮೈತ್ರಿ ಕಳ್ಳರು ಕಳ್ಳರು ಸಂತೆ ಮಾಡಿದಂತಿದೆ: ಮುಖ್ಯಮಂತ್ರಿ ಚಂದ್ರು

Team Udayavani, Sep 12, 2023, 6:20 PM IST

BJP-JDS ಮೈತ್ರಿ ಕಳ್ಳರು ಕಳ್ಳರು ಸಂತೆ ಮಾಡಿದಂತಿದೆ: ಮುಖ್ಯಮಂತ್ರಿ ಚಂದ್ರು

ದಾವಣಗೆರೆ: ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ಕಳ್ಳರು ಕಳ್ಳರು ಸೇರಿ ಸಂತೆ ಮಾಡಿದಂತೆ ಆಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನ್ನು ಪರಿವಾರವಾದಿ, ಕುಟುಂಬ ರಾಜಕಾರಣ ಪಕ್ಷ ಎಂದೇ ಪ್ರಧಾನಿ ದೂರುತ್ತಿದ್ದರು. ಈಗ ಅದೇ ಪರಿವಾರವಾದಿ, ಕುಟುಂಬ ರಾಜಕಾರಣ ಪಕ್ಷವನ್ನು ತಬ್ಬಿಕೊಳ್ಳಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.

ಈಗ ಪರಿವಾರವಾದಿ, ಕುಟುಂಬ ರಾಜಕಾರಣ ಮಾಡದ ಪಕ್ಷ ಯಾವುದಿದೆ. ಎಲ್ಲ ಪಕ್ಷಗಳು ಮಾಡುತ್ತಿವೆ. ಬಿಜೆಪಿ ಯಲ್ಲೇ 30ಕ್ಕೂ ಹೆಚ್ಚು ಶಾಸಕರು ಅಪ್ಪ, ಮಗ… ಒಂದಿಲ್ಲ ಒಂದು ಸಂಬಂಧಿಗಳೇ ಇದ್ದಾರೆ. ಈಗ ಕೋಮುವಾದ ಮತ್ತು ಜಾತ್ಯತೀತತೆ ಒಂದಾಗುವ ಕಾಲ ಬಂದಿದೆ. ಇದಕ್ಕೆ ಪ್ರಧಾನಮಂತ್ರಿಗಳು ಏನನ್ನುತ್ತಾರೆ ಎಂದು ಪ್ರಶ್ನಿಸಿದರು.

ಒಂದು ದೇಶ… ಒಂದು ಚುನಾವಣೆ ಮೂಲಕ ಇಡೀ ದೇಶದ ಚುನಾವಣಾ ವ್ಯವಸ್ಥೆಯನ್ನೇ ತಮ್ಮ ಕೈಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆದಿದೆ. ಸರ್ಕಾರ ಸ್ವಾಮ್ಯದ ತನಿಖಾ ಸಂಸ್ಥೆಗಳ ಮೂಲಕ ಜನರನ್ನ ಬೆದರಿಸುವ ಕೆಲಸ ನಡೆಯುತ್ತಿದೆ. ದೆಹಲಿಯಲ್ಲಿ ಎರಡು ಇಲಾಖೆ ಹೊರತುಪಡಿಸಿ ಇತರೆ ಇಲಾಖೆಯಲ್ಲಿ ಜವಾನ ಹುದ್ದೆ ನೇಮಕಕ್ಕೂ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆಯಬೇಕಾದಂತಹ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿ ಅನುಸರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೂರಿದರು.

ಇದನ್ನೂ ಓದಿ:Mirzapur; ಕ್ಯಾಶ್ ವ್ಯಾನ್‌’ನಿಂದ ₹ 39 ಲಕ್ಷ ದೋಚಿದ ದರೋಡೆಕೋರರು; ವಿಡಿಯೋ ನೋಡಿ

ಆಮ್ ಆದ್ಮಿ ಪಾರ್ಟಿಯನ್ನು ರಾಜ್ಯದಲ್ಲಿ ಸಂಘಟಿಸುವ ಉದ್ದೇಶದಿಂದ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತಲಾ ಐದು ದಿನ ಪ್ರವಾಸ ಮಾಡಲಾಗುವುದು. ಎಲ್ಲಾ ಸೇರೋಣ… ಬನ್ನಿ ಮಾತನಾಡೋಣ ಎಂಬ ಘೋಷವಾಕ್ಯದೊಂದಿಗೆ ಜನರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲಾಗುವುದು. ಉಚಿತವಾಗಿ ಪಕ್ಷದ ಸದಸ್ಯತ್ವ ಆಂದೋಲನ ನಡೆಸಲಾಗುವುದು. ಮುಂದಿನ ಜಿಲ್ಲಾ, ತಾಲೂಕು, ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗುವುದು ಎಂದು ತಿಳಿಸಿದರು.

ದೇಶದಲ್ಲಿನ ಭ್ರಷ್ಟಾಚಾರ, ಲೂಟಿ, ಕೋಮುವಾದದ ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಆಪ್ ಇಂಡಿಯಾ…ಜೊತೆ ಗುರುತಿಸಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಪಂಜಾಬ್, ದೆಹಲಿ ಮಾದರಿಯಂತೆ ಕರ್ನಾಟಕದಲ್ಲೂ ಕೆಲವಾರು ಸ್ಥಾನಗಳಲ್ಲಿ ಸ್ಪರ್ಧೆಗೆ ಅವಕಾಶಕ್ಕೆ ಕೋರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟಾಪ್ ನ್ಯೂಸ್

Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು

Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು

ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್

Chikmagalur; ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್

Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್‌ಗಳ ಅಪಹರಣ

Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್‌ಗಳ ಅಪಹರಣ

belagavi

Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

6-kalburgi

Kalaburagi: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

Hit & run: ದಂಪತಿಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಪತ್ನಿ ಸಾವು, ಪತಿಗೆ ಗಾಯ

Hit & run: ದಂಪತಿಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಪತ್ನಿ ಸಾವು, ಪತಿಗೆ ಗಾಯ

Gadag; ಜಿಲ್ಲೆಯಲ್ಲಿ ಡೇಂಜರ್ ಡೆಂಘೀಗೆ ಮೊದಲ ಬಲಿ

Gadag; ಜಿಲ್ಲೆಯಲ್ಲಿ ಡೇಂಜರ್ ಡೆಂಘೀಗೆ ಮೊದಲ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Police

Karnataka Police: ಡ್ರಗ್ಸ್‌, ಜೂಜು ಮಟ್ಟಹಾಕಿ: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

Zeeka-Virus

Suspect Zika Virus: ಶಿವಮೊಗ್ಗದಲ್ಲಿ ವೃದ್ಧ ಸಾವು

HD-Kumaraswamy

MUDA Scam: ಹೆಲಿಕಾಪ್ಟರ್‌ನಲ್ಲಿ ಮುಡಾ ಕಡತ ರವಾನೆ: ಎಚ್‌ಡಿಕೆ

Ramalinga-reddy

Transport: ತತ್‌ಕ್ಷಣಕ್ಕೆ ಬಸ್‌ ಯಾನ ದರ ಹೆಚ್ಚಳವಿಲ್ಲ: ಸಚಿವ ರಾಮಲಿಂಗಾರೆಡ್ಡಿ

CN-Manjunath

Dengue ತುರ್ತುಸ್ಥಿತಿ: ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಸಲಹೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು

Surat; ಐದಂತಸ್ತಿನ ಕಟ್ಟಡ ಕುಸಿತ ಪ್ರಕರಣ; 7ಮಂದಿ ಸಾವು, ಇನ್ನೂ ಸಿಕ್ಕಿಬಿದ್ದಿದ್ದಾರೆ ಹಲವರು

ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್

Chikmagalur; ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್

Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್‌ಗಳ ಅಪಹರಣ

Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್‌ಗಳ ಅಪಹರಣ

7-yellapura

Yellapura: ನಿಯಂತ್ರಣ ತಪ್ಪಿದ ಕಂಟೈನರ್‌ ಲಾರಿ; ತಪ್ಪಿದ ಅನಾಹುತ

belagavi

Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.