Horoscope Today: ಈ ರಾಶಿ ಅವರಿಗಿಂದು ವಧು-ವರಾನ್ವೇಷಿಗಳಿಗೆ ಯೋಗ್ಯ ಜೋಡಿ ಲಭಿಸುವ ಸಾಧ್ಯತೆ
Team Udayavani, Sep 13, 2023, 7:34 AM IST
ಮೇಷ: ಆರೋಗ್ಯ ಉತ್ತಮ.ಉದ್ಯೋಗದಲ್ಲಿ ಸ್ಥಿರವಾಗುವ ಯೋಗವಿದೆ. ದೀರ್ಘ ಕಾಲದ ಯೋಜನೆಗಳ ಕುರಿತು ಗುರುಹಿರಿಯರೊಂದಿಗೆ ಸಮಾ ಲೋಚನೆ. ಹಿತೈಷಿಗಳಿಂದ ಅಪೇಕ್ಷಿತ ನೆರವು ಸಕಾಲದಲ್ಲಿ ಕೈಸೇರಿ ಸಮಾಧಾನ.ಹೊಸ ವಾಹನ ಖರೀದಿಗೆ ಸಿದ್ಧತೆ.
ವೃಷಭ: ಕ್ರಮಬದ್ಧ ಯೋಜನೆಗಳ ಫಲವು ಕೈಗೆ ಬರುವ ಸಮಯ.ಹಣಕಾಸು ಪರಿಸ್ಥಿತಿ ಗಣನೀಯ ಸುಧಾರಣೆ. ಉದ್ಯೋಗಸ್ಥರಿಗೆ ಪದೋನ್ನತಿ, ವೇತನ ಏರಿಕೆ ಸಂಭವ. ಹಿತಶತ್ರುಗಳ ವಿಷಯದಲ್ಲಿ ಎಚ್ಚರವಿರಲಿ. ಹಿರಿಯ ಹಿತೈಷಿಯಿಂದ ಉಪಯುಕ್ತ ಸಲಹೆ.
ಮಿಥುನ: ದೇವತಾರಾಧನೆ ಯಲ್ಲಿ ಆಸಕ್ತಿ. ಪ್ರಾಪಂಚಿಕ ಚಿಂತೆಗಳಿಂದ ಮನಸ್ಸನ್ನು ಮುಕ್ತ ಗೊಳಿಸಿಕೊಳ್ಳುವ ಪ್ರಯತ್ನ. ಉದ್ಯೋಗಸ್ಥರಿಗೆ ಹೆಚ್ಚು ಕಾರ್ಯಾವಕಾಶ. ನಿರ್ಮಾಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಆಪ್ತರಿಂದ ಸಕಾಲದಲ್ಲಿ ನೆರವು ಲಭ್ಯ.
ಕರ್ಕಾಟಕ: ಕ್ಷಮಾಗುಣದಿಂದ ಮನಸ್ಸಿಗೆ ಸಮಾಧಾನ. ವಿಘ್ನೇಶ್ವರನ ಉಪಾಸನೆಯಿಂದ ಸಮಸ್ಯೆ ದೂರ. ಉದ್ಯೋಗ ಕ್ಷೇತ್ರದಲ್ಲಿ ನೆಮ್ಮದಿ. ವಸ್ತ್ರೋದ್ಯಮಿಗಳಿಗೆ, ಸಿದ್ಧ ಉಡುಪು ಮಾರಾಟಗಾರರಿಗೆ ಲಾಭ. ದೂರದಲ್ಲಿರುವ ಬಂಧುವರ್ಗದಿಂದ ಶುಭ ಸಮಾಚಾರ.
ಸಿಂಹ: ಉದ್ಯೋಗ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಹೊಸ ಜವಾಬ್ದಾರಿಗಳು ಮತ್ತು ಸವಾಲುಗಳು ಎದುರಾಗಲಿವೆ. ಮನೆಯಲ್ಲಿ ಸಮಾಧಾನದ ವಾತಾವರಣ. ಅಪರೂಪದ ಅತಿಥಿಗಳ ಆಗಮನ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕೂಡಿ ಬರುವ ಸಾಧ್ಯತೆ.
ಕನ್ಯಾ: ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ನೆಮ್ಮದಿ. ಆಭರಣ ತಯಾರಿ ವೃತ್ತಿಯವರಿಗೆ ವಿಶೇಷ ಅವಕಾಶಗಳು ಒದಗಲಿವೆ. ಲೆಕ್ಕ ಪರಿಶೋಧಕರು, ನ್ಯಾಯವಾದಿಗಳು, ವೈದ್ಯರು ಎಂಜಿನಿಯರ್ ಮೊದಲಾದ ವೃತ್ತಿಪರರಿಗೆ ಕಿರಿಕಿರಿ. ಹಿರಿಯರ, ಗೃಹಿಣಿಯರ ಹಣಕಾಸು ಸುಧಾರಣೆ.
ತುಲಾ: ದೂರ ಪ್ರಯಾಣ ಸಂಭವ. ಆರೋಗ್ಯದಲ್ಲಿ ಸುಧಾರಣೆ. ನೆಂಟರಿಷ್ಟರ ಭೇಟಿಯಿಂದ ಮನಸ್ಸು ನಿರಾಳ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ. ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆಯಿಂದ ಜನಗೌರವ ಪ್ರಾಪ್ತಿ. ಪಶುಪಾಲನೆಯಲ್ಲಿ ಆಸಕ್ತಿಯುಳ್ಳವರಿಗೆ ಶುಭಫಲ.
ವೃಶ್ಚಿಕ: ಅನ್ಯರ ಸಾಧನೆಯನ್ನು ನೋಡಿ ಕುರುಬದಿರಿ. ಮನೆ ಮಂದಿಯಿಂದ ಉತ್ತಮ ಸಹಕಾರ. ವ್ಯವಹಾರ ಕ್ಷೇತ್ರದಲ್ಲಿ ಏಳಿಗೆ. ಉದ್ಯೋಗಾ ಕಾಂಕ್ಷಿಗಳ ಮನವಿಗೆ ಆಸಕ್ತ ವಲಯಗಳಿಂದ ಅನುಕೂಲಕರ ಸ್ಪಂದನೆ. ವಧು-ವರಾನ್ವೇಷಿಗಳಿಗೆ ಯೋಗ್ಯ ಜೋಡಿ ಲಭಿಸುವ ಸಾಧ್ಯತೆ.
ಧನು: ಶ್ರೀಗುರುದೇವತಾನುಗ್ರಹ ದಿಂದ ಕಾರ್ಯಸಿದ್ಧಿ. ಬಂಧು ಮಿತ್ರವರ್ಗದವರಿಂದ ಉತ್ತಮ ಸಹಕಾರ. ಉದ್ಯೋಗದಲ್ಲಿ ಪ್ರಗತಿ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ನಿಮ್ಮದಾಗಲಿವೆ. ತೋಟಗಾರಿಕೆಯಲ್ಲಿ ಆಸಕ್ತಿ. ಹೂವು, ಹಣ್ಣು ವ್ಯಾಪಾರಿಗಳಿಗೆ ಮಧ್ಯಮ ಲಾಭ.
ಮಕರ: ಭವಿಷ್ಯದ ಕುರಿತು ಅತಿಯಾದ ಚಿಂತೆಯಿಂದ ಆರೋಗ್ಯಕ್ಕೆ ಹಾನಿ. ಮನೆ ಮಂದಿ ಯೆಲ್ಲರಿಂದ ಉತ್ತಮ ಸಹಕಾರ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಗೆ ಮೆಚ್ಚುಗೆ. ಕಾರ್ಯನಿಮಿತ್ತ ಪಕ್ಕದ ಪ್ರದೇಶಕ್ಕೆ ಭೇಟಿ ಸಂಭವ.
ಕುಂಭ: ನಿರಂತರ ಚಟುವಟಿಕೆಗಳ ದಿನ. ಮನೆಗೆ ದೂರದ ಬಂಧುಗಳ ಆಗಮನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಯಶಸ್ವಿಯಾಗುವಿರಿ. ಅಪರಿ ಚಿತರೊಬ್ಬರ ಭೇಟಿಯಿಂದ ಲಾಭ. ಹೊಸ ವ್ಯವಹಾರ ಕ್ಷೇತ್ರ ಪ್ರವೇಶಕ್ಕೆ ಅವಸರ ಬೇಡ.
ಮೀನ: ಗೊಂದಲಗಳಿಂದ ಮುಕ್ತಿ. ಗುರುಸೇವೆಯಿಂದ ತೃಪ್ತಿ. ಉದ್ಯೋಗಸ್ಥರಿಂದ ಹೊಸ ಸವಾಲುಗಳ ಯಶಸ್ವೀ ನಿರ್ವಹಣೆ. ಹೊಸದೊಂದು ಕಾರ್ಯಕ್ಷೇತ್ರಕ್ಕೆ ಪದಾರ್ಪಣೆ. ಹಿರಿಯರ ಆರೋಗ್ಯ ಸುಧಾರಣೆ. ವ್ಯವಹಾರ ಕ್ಷೇತ್ರದಲ್ಲಿ ಸಂಗಾತಿಯಿಂದ ಉತ್ತಮ ಸಹಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.