E-toilets ಇನ್ನೂ ದುರಸ್ತಿ ಭಾಗ್ಯ ಕಾಣದ ಇ-ಶೌಚಾಲಯಗಳು
Team Udayavani, Sep 13, 2023, 1:40 PM IST
ಕನಕಪುರ: ಲಕ್ಷಾಂತರ ರೂ. ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಅನುಷ್ಠಾನ ಮಾಡಿದ್ದ ಇ-ಶೌಚಾಲಯ ಗಳು ಕೆಟ್ಟು ನಿಂತು ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿದ್ದರು ನಗರಸಭೆ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗುತ್ತಿದೆ.
ನೂತನ ತಂತ್ರಜ್ಞಾನ ಆಧಾರಿತ ಇ-ಶೌಚಾಲಯದ ಸೌಲಭ್ಯ ತಾಲೂಕಿನ ಜನರಿಗೆ ಸಿಗಲಿ ಎಂಬ ಉದ್ದೇಶದಿಂದ ನಗರದಲ್ಲಿ ಐದು ಈ ಶೌಚಾಲಯ ಗಳನ್ನು ನಿರ್ಮಾಣ ಮಾಡಲಾಗಿತ್ತು ಆದರೆ, ಇ- ಶೌಚಾಲಯಗಳು ಕೆಟ್ಟು ನಿಂತು ವರ್ಷಗಳೇ ಕಳೆದರೂ ಅವುಗಳ ದುರಸ್ತಿಗೆ ಮಾತ್ರ ನಗರಸಭೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದೆ ಶೌಚಾ ಲಯಗಳು ಇದು ಇಲ್ಲದಂತಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಗರಸಭೆ ವತಿಯಿಂದ 2016ರಲ್ಲಿ ಪ್ರತಿ ಇ- ಶೌಚಾಲಯಕ್ಕೆ 5,37 ಲಕ್ಷದಂತೆ 26.85 ಲಕ್ಷ ವೆಚ್ಚದಲ್ಲಿ ನಗರದ ಐದು ಕಡೆಗಳಲ್ಲಿ ಆಧುನಿಕ ಸೆನ್ಸಾರ್ ಆಧಾರಿತ ಇ-ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಸಾರ್ವಜನಿಕರಿಗೆ ಇವುಗಳ ಸೌಲಭ್ಯ ಸಮರ್ಪಕವಾಗಿ ಸಿಕ್ಕಿಲ್ಲ ಇ- ಶೌಚಾಲಯಗಳು ಅನುಷ್ಠಾನವಾದ ಒಂದೆ ರಡು ವರ್ಷ ಸೌಲಭ್ಯ ಸಿಕ್ಕಿದ್ದೆ ಹೆಚ್ಚು. ಜಿಲ್ಲೆಯ ಯವುದೇ ತಾಲೂಕಿನಲ್ಲೂ ಇ- ಶೌಚಾಲಯಗಳಿಲ್ಲ ದೊಡ್ಡ ದೊಡ್ಡ ನಗರದ ಜನರಿಗೆ ಮಾತ್ರ ಸೀಮಿತ ವಾಗಿದ್ದ ಸೌಲಭ್ಯ ತಾಲೂಕಿನ ಜನರಿಗೂ ಸಿಕ್ಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಟ್ಟು ನಿಂತಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.
ಐದು ಕಡೆಗಳಲ್ಲಿ ಇ-ಶೌಚಾಲಯ: ನಗರದ ಅಯ್ಯಪ್ಪ ಸ್ವಾಮಿ ದೇವಾಲಯ, ಬಸ್ ನಿಲ್ದಾಣದ ವೃತ್ತದ ಬಳಿ, ಕೆಎನ್‌ಎಸ್ ವೃತ್ತ, ರೇಷ್ಮೆ ಮಾರುಕಟ್ಟೆ ಹಾಗೂ ತಾಲೂಕು ಕ್ರೀಡಾಂಗಣದ ಬಳಿ ಇರುವ ಪಾರ್ಕ್ ಸೇರಿದಂತೆ ಐದು ಕಡೆಗಳಲ್ಲಿ ಇ-ಶೌಚಾಲಯ ಗಳನ್ನು ಅನುಷ್ಠಾನ ಮಾಡಲಾಗಿತ್ತು ಒಂದು ರೂಪಾಯಿ ಕಾಯಿನ್ ಹಾಕಿ ಇ- ಶೌಚಾಲಯದ ಸೌಲಭ್ಯ ಪಡೆಯಬಹುದಿತ್ತು ತಾಲೂಕಿನ ಮೂಲೆ ಮೂಲೆಗಳಿಂದ ತಾಲೂಕು ಕೇಂದ್ರಕ್ಕೆ ಬರುವ ಸಾರ್ವ ಜನಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಇ-ಶೌಚಾಲಯ ಸೇವೆ ಬಹಳ ಅನುಕೂಲವಾಗಿತ್ತು ಆದರೆ ಅವುಗಳು ಕೆಟ್ಟ ನಿಂತು ಅದರ ಸೌಲಭ್ಯ ಸಾರ್ವಜನಿಕರಿಗೆ ಮರೀಚಿಕೆ ಯಾಗಿದೆ.
ನಿರ್ವಹಣೆ ಇಲ್ಲದೆ ಸೊರಗಿರುವ ಶೌಚಾಲಯ: ಇ-ಶೌಚಾಲಯಗಳನ್ನು ಅನುಷ್ಠಾನ ಮಾಡಿದ ಸಂಸ್ಥೆಯೇ ಒಂದು ವರ್ಷ ನಿರ್ವಹಣೆ ಹೊಣೆಯನ್ನು ಹೊತ್ತಿತ್ತು. ಆಗಾಗ ಕೆಟ್ಟು ನಿಲುತ್ತಿದ್ದ ಶೌಚಾಲಯಗಳನ್ನು ಸಂಸ್ಥೆ ವತಿಯಿಂದ ದುರಸ್ತಿ ಮಾಡಲಾಗುತ್ತಿತ್ತು. ಒಂದು ವರ್ಷದ ಅವಧಿ ಮುಗಿದ ನಂತರ ಇ-ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿ ಇಲ್ಲದೆ ಒಂದೊಂದೇ ಶೌಚಾಲಯಗಳು ಕೆಟ್ಟು ನಿಂತು ನಗರದ ಐದು ಇ-ಶೌಚಾಲಯಗಳು ಸಂಪೂರ್ಣ ವಾಗಿ ಕಾರ್ಯ ಸ್ಥಗಿತಗೊಳಿಸಿವೆ.
ನಾಯಿಗಳಿಗೆ ಆಶ್ರಯ ತಾಣಗಳಾದ ಶೌಚಾಲಯ: ಇ-ಶೌಚಾಲಯಗಳು ಕೆಟ್ಟು ನಿಂತು ನಾಲ್ಕೈದು ವರ್ಷಗಳೇ ಕಳೆದಿದೆ. ನಿರ್ವಹಣೆ ಇಲ್ಲದೆ ಯಂತ್ರೋಪಕರಣಗಳು ಮಳೆ ಬಿಸಿಲಿನಲ್ಲಿ ಒಣಗಿ ತುಕ್ಕು ಹಿಡಿಯುತ್ತಿವೆ. ಕೆಲವು ಈ ಶೌಚಾಲಯ ಬೀದಿ ಬದಿ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಇಟ್ಟುಕೊಳ್ಳುವ ಗೋಡೋನ್ ಆಗಿ ಪರಿ ವರ್ತನೆಯಾಗಿವೆ. ಇನ್ನು ಕೆಲವು ಶೌಚಾಲಯಗಳು ಬೀದಿ ನಾಯಿಗಳಿಗೆ ಆಶ್ರಯ ತಾಣಗಳಾಗಿ ಬದಲಾಗಿದೆ. ಹೇಳುವವರು ಕೇಳುವವರು ಇಲ್ಲದಂತಾಗಿ ಶೌಚಾಲಯದ ಲಾಕ್‌ಗಳು ಹಾಳಾಗಿ ಬಿಡಿ ಭಾಗಗಳು ಕಳ್ಳರ ಪಾಲಾಗುತ್ತಿವೆ. ನಾಲ್ಕೈದು ವರ್ಷಗಳಿಂದ ನಿರ್ವಹಣೆ ಇಲ್ಲದೆ ಸೊರಗಿ ರುವ ಶೌಚಾಲಯಗಳ ದುರಸ್ತಿ ವೆಚ್ಚವು ದುಬಾರಿಯಾಗಲಿದೆ. ಏನೇ ಆದರೂ ಲಕ್ಷಾಂತರ ರೂ ಖರ್ಚು ಮಾಡಿ ಅನುಷ್ಠಾನ ಮಾಡಿರುವ ಶೌಚಾಲಯಗಳು ಪ್ರಯೋಜನಕ್ಕೆ ಬಾರದಂತೆ ಆಗಿವೆ ಅವುಗಳನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಇ- ಶೌಚಾಲಯಗಳನ್ನು ಅನುಷ್ಠಾನ ಮಾಡಿದ ಸಂಸ್ಥೆ ಸದ್ಯ ಸ್ಥಗಿತಗೊಂಡಿದೆ ಹಾಗಾಗಿ ಇ-ಶೌಚಾಲಯ ದುರಸ್ತಿ ಮಾಡುವ ನುರಿತರಿಲ್ಲದೆ ಇರುವುದರಿಂದ ದುರಸ್ತಿ ವಿಳಂಬವಾಗಿದೆ.
ಕಳೆದ ವರ್ಷ 2022 -23ರ ಸಾಲಿನಲ್ಲಿ ಇ- ಶೌಚಾಲಯಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಯಾವುದೇ ಸಂಸ್ಥೆಯು ಮುಂದೆ ಬಂದಿಲ್ಲ ಅನುಷ್ಠಾನ ಮಾಡಿದ ಸಂಸ್ಥೆಯನ್ನು ಸಂಪರ್ಕ ಮಾಡಿ ಆದಷ್ಟು ಬೇಗ ಇ- ಶೌಚಾಲಯಗಳನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ● ವಿಜಯ್ ಕುಮಾರ್, ನಗರಸಭೆ ಇಂಜಿನಿಯರ್
-ಬಿ.ಟಿ.ಉಮೇಶ್ ಬಾಣಗಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.