Asia Cup; ಪಾಕ್ -ಲಂಕಾ ಸೆಮಿಫೈನಲ್‌: ಭಾರತದ ಫೈನಲ್‌ ಎದುರಾಳಿ ಯಾರು?

Team Udayavani, Sep 14, 2023, 6:45 AM IST

1-asdad

ಕೊಲಂಬೊ: ಸೂಪರ್‌-4 ಹಂತದ ಎರಡೂ ಪಂದ್ಯಗಳನ್ನು ಅಮೋಘ ರೀತಿಯಲ್ಲಿ ಗೆದ್ದು, ಎರಡು ಪಂದ್ಯ ಬಾಕಿ ಇರುವಾಗಲೇ ಫೈನಲ್‌ಗೆ ಲಗ್ಗೆಯಿಟ್ಟಿರುವ ಭಾರತವೀಗ ತನ್ನ ಎದುರಾಳಿಯ ನಿರೀಕ್ಷೆಯಲ್ಲಿದೆ. ರವಿವಾರದ ಪ್ರಶಸ್ತಿ ಸಮರದಲ್ಲಿ ಮತ್ತೆ ಪಾಕಿಸ್ಥಾನ ಎದುರಾಗಬಹುದೋ ಅಥವಾ ಆತಿಥೇಯ ಶ್ರೀಲಂಕಾ ಸಿಗಬಹುದೋ ಎಂಬ ಕುತೂಹಲ ಪರಾಕಾಷ್ಠೆ ತಲುಪಿದೆ. ಇದಕ್ಕೆ ಉತ್ತರ ಗುರುವಾರ ರಾತ್ರಿ ಲಭಿಸಲಿದೆ. ಇಲ್ಲಿ ಪಾಕಿಸ್ಥಾನ-ಶ್ರೀಲಂಕಾ ಮುಖಾಮುಖೀ ಆಗಲಿವೆ. ಗೆದ್ದ ತಂಡ ಫೈನಲ್‌ ಪ್ರವೇಶಿಸುವುದರಿಂದ ಸಹಜವಾಗಿಯೇ ಈ ಪಂದ್ಯಕ್ಕೆ ಸೆಮಿಫೈನಲ್‌ ಮಹತ್ವ ಲಭಿಸಿದೆ.

ಮಂಗಳವಾರದ ಮುಖಾಮುಖಿಯಲ್ಲಿ ಶ್ರೀಲಂಕಾ ವನ್ನು 41 ರನ್ನುಗಳಿಂದ ಮಣಿಸುವ ಮೂಲಕ ಭಾರತ ಅಧಿಕಾರಯುತವಾಗಿ ಫೈನಲ್‌ ಪ್ರವೇಶಿಸಿತು. ಇದರಿಂದ ಬಾಂಗ್ಲಾದೇಶ ಕೂಟ ದಿಂದ ಹೊರಬಿತ್ತು. ಭಾರತದ ಗೆಲುವಿನಿಂದ ಲಾಭವಾದದ್ದು ಪಾಕಿಸ್ಥಾನಕ್ಕೆ. ಇದರಿಂದ ಬಾಬರ್‌ ಪಡೆ ಫೈನಲ್‌ ರೇಸ್‌ನಲ್ಲಿ ಉಳಿಯುವಂತಾಯಿತು. ಅಕಸ್ಮಾತ್‌ ಗುರುವಾರದ ಪಂದ್ಯ ಮಳೆಯಿಂದ ರದ್ದಾದರೆ ಇದರಿಂದ ಲಂಕೆಗೆ ಲಾಭವಾಗಲಿದೆ. ಅದು ರನ್‌ರೇಟ್‌ನಲ್ಲಿ ಪಾಕಿಸ್ಥಾನಕ್ಕಿಂತ ಮುಂದಿದೆ. ಲಂಕಾ -0.200, ಪಾಕ್‌ -1.892 ರನ್‌ರೇಟ್‌ ಹೊಂದಿದೆ.

ಈ ಮುಖಾಮುಖೀ ಬಳಿಕ ಶುಕ್ರವಾರ ಭಾರತ ತನ್ನ ಕೊನೆಯ ಸೂಪರ್‌-4 ಪಂದ್ಯ ದಲ್ಲಿ ಬಾಂಗ್ಲಾ ದೇಶವನ್ನು ಎದುರಿಸುವ ಕಾರ್ಯಕ್ರಮ ವೊಂದಿದೆ. ಇದೊಂದು ಲೆಕ್ಕದ ಭರ್ತಿಯ ಪಂದ್ಯವಾದರೂ ರೋಹಿತ್‌ ಪಡೆಗೆ ಫೈನಲ್‌ ರಿಹರ್ಸಲ್‌ ಆಗುವುದರಲ್ಲಿ ಅನುಮಾನವಿಲ್ಲ.

ಸಮಬಲ ಸಾಧನೆ
ಸೂಪರ್‌-4 ಹಂತದಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳದ್ದು ಸಮಬಲ ಸಾಧನೆ. ಎರಡೂ ತಂಡಗಳು ಬಾಂಗ್ಲಾದೇಶವನ್ನು ಮಣಿ ಸಿವೆ, ಹಾಗೆಯೇ ಭಾರತಕ್ಕೆ ಶರಣಾಗಿವೆ. ಇದರಲ್ಲಿ ಪಾಕಿಸ್ಥಾನದ್ದು ಹೀನಾಯ ಸೋಲಾದರೆ, ಲಂಕೆಯದ್ದು ವೀರೋಚಿತ ಸೋಲು.

ಭಾರತದ ವಿರುದ್ಧ ಹೀನಾಯವಾಗಿ ಸೋಲು ವುದ ಕ್ಕಿಂತ ಮೊದಲು ಪಾಕಿಸ್ಥಾನ ಬಲಿಷ್ಠ ತಂಡ ವಾಗಿ ಗೋಚರಿಸಿದ್ದು ಸುಳ್ಳಲ್ಲ. ಆದರೆ 228 ರನ್ನುಗಳ ದಾಖಲೆ ಅಂತರದ ಸೋಲು ಪಾಕ್‌ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಸಾಲದ್ದಕ್ಕೆ ಗಾಯಾಳುಗಳ ಸಮಸ್ಯೆಯೂ ತಂಡವನ್ನು ಕಾಡಿದೆ. ಹ್ಯಾರಿಸ್‌ ರವೂಫ್ ಮತ್ತು ನಸೀಮ್‌ ಶಾ ಅನುಪಸ್ಥಿತಿಯಿಂದ ಪಾಕ್‌ಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಇವರಲ್ಲಿ ನಸೀಮ್‌ ಶಾ ಏಷ್ಯಾ ಕಪ್‌ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ಇವರ ಬದಲು ಶಹನವಾಜ್‌ ದಹಾನಿ ಮತ್ತು 150 ಕಿ.ಮೀ. ವೇಗದಲ್ಲಿ ಬೌಲಿಂಗ್‌ ನಡೆಸಬಲ್ಲ 22 ವರ್ಷದ ಜಮಾನ್‌ ಖಾನ್‌ ಬಂದಿದ್ದಾರೆ.

ಲಂಕಾ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಪಾಕಿಸ್ಥಾನದ ಟಾಪ್‌ ಆರ್ಡರ್‌ ಕ್ಲಿಕ್‌ ಆಗ ಬೇಕಾ ದುದು ಮುಖ್ಯ. ಆರಂಭಿಕರಾದ ಫ‌ಖಾರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ನಾಯಕ ಬಾಬರ್‌ ಆಜಂ ದೊಡ್ಡ ಮೊತ್ತ ಗಳಿಸಬೇಕಿದೆ. ರಿಜ್ವಾನ್‌, ಸಲ್ಮಾನ್‌ ಆಘಾ, ಇಫ್ತಿ ಖಾರ್‌ ಅಹ್ಮದ್‌ ಕೂಡ ಕ್ಲಿಕ್‌ ಆಗಬೇಕಾದುದು ಮುಖ್ಯ.

ಅಪಾಯಕಾರಿ ಸ್ಪಿನ್ನರ್
ಶ್ರೀಲಂಕಾ ಕೂಡ ಗಾಯದ ಸುಳಿಯಲ್ಲಿ ಸಿಲುಕಿದ ತಂಡ. ಮೊದಲ ಆಯ್ಕೆಯ ಆಟಗಾರ ರಾದ ಹಸರಂಗ, ಚಮೀರ ಮತ್ತು ಲಹಿರು ಕುಮಾರ ಗೈರಲ್ಲಿ ಲಂಕಾ ಹೋರಾಟ ನಡೆಸುತ್ತಿದೆ. ಆದರೆ ದುನಿತ್‌ ವೆಲ್ಲಲಗೆ, ಮತೀಶ ಪತಿರಣ, ಮಹೀಶ ತೀಕ್ಷಣ ಪರಿಣಾಮಕಾರಿ ಪ್ರದರ್ಶನ ಕಾಯ್ದು ಕೊಂಡು ಬಂದಿದ್ದಾರೆ. ಭಾರತದ ಹತ್ತೂ ವಿಕೆಟ್‌ಗಳನ್ನು ಕೆಡವಿದ ಸ್ಪಿನ್ನರ್ ಲಂಕೆಯ ಅಪಾಯಕಾರಿ ಅಸ್ತ್ರವಾಗಿದ್ದಾರೆ. ಆದರೆ ನಾಯಕ ದಸುನ್‌ ಶಣಕ ಮತ್ತು ಪೇಸರ್‌ ಕಸುನ್‌ ರಜಿತ ಅವರ ಸತತ ವೈಫ‌ಲ್ಯ ಚಿಂತೆಗೀಡು ಮಾಡಿದೆ.

ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಮೇಲೆ ಲಂಕಾ ಯಶಸ್ಸು ಅಡಗಿದೆ. ನಿಸ್ಸಂಕ, ಕರುಣಾರತ್ನೆ, ಮೆಂಡಿಸ್‌, ಸಮರವಿಕ್ರಮ ಮೊದಲಾದವರೆಲ್ಲ ಅಫ್ರಿದಿ ಆ್ಯಂಡ್‌ ಕಂಪೆನಿಯ ಬೌಲಿಂಗ್‌ ದಾಳಿ ಯನ್ನು ಎದುರಿಸಿ ನಿಲ್ಲುವುದು ಅತ್ಯಗತ್ಯ. ಅಂದಹಾಗೆ ಇದು ಈ ಕೂಟದಲ್ಲಿ ಶ್ರೀಲಂಕಾ-ಪಾಕಿಸ್ಥಾನ ನಡುವಿನ ಮೊದಲ ಮುಖಾಮುಖಿ ಆಗಿದೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.