ODI England; 182 ರನ್ ಸಿಡಿಸಿ ನೂತನ ದಾಖಲೆ ಬರೆದ ಬೆನ್ ಸ್ಟೋಕ್ಸ್
Team Udayavani, Sep 14, 2023, 12:39 AM IST
ಲಂಡನ್: ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಸಿಡಿದು ನಿಂತ ಬೆನ್ ಸ್ಟೋಕ್ಸ್ 182 ರನ್ ಬಾರಿಸಿ ನೂತನ ದಾಖಲೆ ಬರೆದಿದ್ದಾರೆ. ಇದು ಏಕದಿನ ಇತಿಹಾಸದಲ್ಲಿ ಇಂಗ್ಲೆಂಡ್ ಕ್ರಿಕೆಟಿಗನ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. ಇಂಗ್ಲೆಂಡ್ 48.1 ಓವರ್‌ಗಳಲ್ಲಿ 368 ರನ್ ಪೇರಿಸಿ ಸವಾಲೊಡ್ಡಿದೆ.
ಆಸ್ಟ್ರೇಲಿಯ ಎದುರಿನ 2018ರ ಮೆಲ್ಬರ್ನ್ ಪಂದ್ಯದಲ್ಲಿ ಜೇಸನ್ ರಾಯ್ 180 ರನ್ ಬಾರಿಸಿದ್ದು ಇಂಗ್ಲೆಂಡ್ ದಾಖಲೆಯಾಗಿತ್ತು. ನಿವೃತ್ತಿಯಿಂದ ಹೊರಬಂದು ಆಡಲಾ ರಂಭಿಸಿದ ಬಳಿಕ ಬೆನ್ ಸ್ಟೋಕ್ಸ್ ತೋರ್ಪಡಿಸಿದ ಅಸಾಮಾನ್ಯ ಬ್ಯಾಟಿಂಗ್ ಇದಾಗಿದೆ. ಇಂಗ್ಲೆಂಡ್ 13ಕ್ಕೆ 2 ವಿಕೆಟ್ ಕಳೆದುಕೊಂಡಾಗ ಕ್ರೀಸಿಗೆ ಬಂದ ಸ್ಟೋಕ್ಸ್ 124 ಎಸೆತಗಳಿಂದ ತಮ್ಮ ಸ್ಮರಣೀಯ ಇನ್ನಿಂಗ್ಸ್ ಕಟ್ಟಿದರು. ಸಿಡಿಸಿದ್ದು 15 ಬೌಂಡರಿ ಹಾಗೂ 9 ಸಿಕ್ಸರ್.
ಡೇವಿಡ್ ಮಲಾನ್ 96 ರನ್ ಮಾಡಿದರು. ಸ್ಟೋಕ್ಸ್-ಮಲಾನ್ 3ನೇ ವಿಕೆಟಿಗೆ 199 ರನ್ ಪೇರಿಸಿದರು. ಇದು ನ್ಯೂಜಿಲ್ಯಾಂಡ್ ವಿರುದ್ಧ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ಇಂಗ್ಲೆಂಡ್ ನಡೆಸಿದ ದೊಡ್ಡ ಮೊತ್ತದ ಜತೆಯಾಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.