ಇಂದು ಸಂವಿಧಾನ ಓದು- ಭಾರತ ಸಂವಿಧಾನದ ಪೀಠಿಕೆ; ಎಲ್ಲರಿಗೂ ಇರಲಿ ಇದರ ಗ್ರಹಿಕೆ
Team Udayavani, Sep 14, 2023, 11:59 PM IST
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವ ಕುರಿತಾದ ಹೇಳಿಕೆಯನ್ನು ಒಮ್ಮೆ ಸ್ಮರಿಸೋಣ. “ರಕ್ತಪಾತವಿಲ್ಲದೇ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ತರುವಂತಹ ವ್ಯವಸ್ಥೆಯೇ ಪ್ರಜಾಪ್ರಭುತ್ವ’ ಎನ್ನುವ ಮೂಲ ಮಂತ್ರದೊಂದಿಗೆ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನದಂದು ಸಂವಿಧಾನದ ಪೀಠಿಕೆ ಯನ್ನು ಸಾಮೂಹಿಕವಾಗಿ ವಾಚನ ಮಾಡುವ ವಿಶೇಷ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿದೆ. ಇಂಥ ಮಹತ್ವದ ದಿನದ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ, ಭ್ರಾತೃತ್ವ, ಸಾಮರಸ್ಯ ಹಾಗೂ ಸಮಾನತೆಯ ಕುರಿತು ಅರಿತುಕೊಳ್ಳುವುದು ಅತಿ ಮುಖ್ಯ. ಇದನ್ನು ಚಾಚೂತಪ್ಪದೇ ಅನು ಸರಿಸಿದಾಗ ಮಾತ್ರ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರ ಹೊಮ್ಮ ಲಿದೆ. ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವದ ದಿನದಂದು ಸಂವಿಧಾನದ ಆಶಯ ಮತ್ತು ಮೂಲ ತತ್ವಗಳನ್ನು ಅರಿತು ಕೊಳ್ಳುವ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸೋಣ.
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ಭಾರತವು ವೈವಿಧ್ಯತೆ ಯಲ್ಲಿ ಏಕತೆಯನ್ನು ಜಗತ್ತಿಗೆ ಸಾರುವ ಮೂಲಕ ಪ್ರಜಾಪ್ರಭುತ್ವದ ಮೂಲ ಉದ್ದೇಶ ವನ್ನು ಸಾರುತ್ತಿರುವ ಮಾದರಿ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳ ಆಳ್ವಿಕೆ. ಸಂವಿಧಾನ ಎಂದರೆ ಹಕ್ಕುಗಳು, ಕರ್ತವ್ಯಗಳು, ತತ್ವಗಳು ಮತ್ತು ಕಾನೂನಿನ ಮೂಲಕ ಪ್ರಜಾ ಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯುವ ಪವಿತ್ರ ಗ್ರಂಥ. ಈ ಆಶಯದೊಂದಿಗೆ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು “ನಾವು ಭಾರತದ ಜನರು’ ಎಂಬ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ವಾಚನ ಮಾಡುವ ಮೂಲಕ ವಿಶಿಷ್ಠ ದಾಖಲೆ ನಿರ್ಮಿಸುವ ಕರ್ನಾಟಕ ಸರ್ಕಾರದ ಅಭಿಯಾನ ಒಂದು ಮಹತ್ವದ ಹೆಜ್ಜೆಯಾಗಿದೆ.
ಮುನ್ನುಡಿಯ ಪದಗಳೊಂದಿಗೆ ಪ್ರಾರಂಭ ವಾಗುವ ಪೀಠಿಕೆಯ ವಾಕ್ಯವಾದ “ನಾವು, ಭಾರತದ ಜನರು” ಎಂಬುದು ಭಾರತದ ವೈವಿಧ್ಯ ಮಯ ಜನಸಂಖ್ಯೆಯ ಸಾಮೂಹಿಕ ಹೆಗ್ಗುರುತು ಮತ್ತು ಏಕತೆಗೆ ಒತ್ತು ನೀಡುವ ಸಂದೇಶವಾಗಿದೆ. ಈ ಮೂಲಕ ಎಲ್ಲರೂ ಸಮಾನರು ಮತ್ತು ಎಲ್ಲರ ಹಿತಾಸಕ್ತಿಗಳನ್ನು ಕಾಪಾಡುವುದೇ ಮುಖ್ಯ ಧ್ಯೇಯವಾಗಿದೆ.
ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಬಳ ಸುವ ಸಾರ್ವಭೌಮ, ಸಮಾಜವಾದ, ಜಾತ್ಯ ತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವ ಮತ್ತು ಮೂಲ ಆಶಯಗ ಳೊಂದಿಗೆ ಸರ್ವ ಜನಾಂಗದ ಶಾಂತಿಯ ತೋಟ ರೂಪಿಸುವ ಉದ್ದೇಶ ಈ ವಾಕ್ಯಗಳಲ್ಲಿ ಅಡಕವಾಗಿದೆ.
ನಮ್ಮ ಪೀಠಿಕೆಯು ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆಗಳನ್ನು ಒಳಗೊಂಡ ನ್ಯಾಯಯುತ ಸಮಾಜವನ್ನು ಸೃಷ್ಟಿಸುವ ಮತ್ತು ಎಲ್ಲರನ್ನೂ ಒಳಗೊಂಡು ಪ್ರಗತಿ ಸಾಧಿಸಲು ಪ್ರೇರಣೆಯಾಗಿದೆ. ಈ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ಆತನ ಮೂಲಭೂತ ಹಕ್ಕು ಒದಗಿಸಿ ಮತ್ತು ಘನತೆಯನ್ನು ಹೆಚ್ಚಿಸಿ ಆಪ್ತತೆಯ ವಾತಾವರಣ ರೂಪಿಸುತ್ತದೆ. ಜೊತೆಗೆ ವೈಯಕ್ತಿಕ ಸ್ವಾತಂತ್‌ರ್ಯಕ್ಕೂ ಅನುವು ಮಾಡಿಕೊಡುತ್ತಿದೆ.
ಪೀಠಿಕೆಯಲ್ಲಿರುವ ಭ್ರಾತೃತ್ವ – ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಪ್ರಜೆಗಳಲ್ಲಿರಬೇಕಾದ ಈ ಮನೋಭಾವವನ್ನು ಎತ್ತಿಹಿಡಿಯುತ್ತದೆ. ಈ ಆಶಯವನ್ನು ಒಕ್ಕೊರ ಲಿನಿಂದ ಪ್ರಜೆಗಳಾಗಿ ಪಾಲಿಸಿದಾಗ ಮಾತ್ರ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ. ಇದು ನಾಗರಿಕರ ಯೋಗಕ್ಷೇಮದ ಜೊತೆಗೆ ಪ್ರಗತಿಯ ಬದ್ಧತೆಯನ್ನು ಪ್ರತಿಬಿಂಬಿ ಸುತ್ತದೆ.
ನಮ್ಮ ಸಂವಿಧಾನದ ಪೀಠಿಕೆಯು ಪ್ರಜಾ ಪ್ರಭುತ್ವ ವ್ಯವಸ್ಥೆಯ ಆತ್ಮ ಎಂದೇ ಬಿಂಬಿತ ವಾಗಿದೆ. ಇದನ್ನು ಒಪ್ಪಿಕೊಂಡಾಗ ಮಾತ್ರ ನ್ಯಾಯಯುತ, ಶಾಂತಿಯುತ, ಅಭಿವೃದ್ಧಿ ಪೂರಕ ಮಾದರಿ ಸಮಾಜ ನಿರ್ಮಾಣದ ಆಶಯ ಸಾಕಾರಗೊಳ್ಳುತ್ತದೆ.
ಪ್ರಜಾಪ್ರಭುತ್ವದ ಮೌಲ್ಯವನ್ನು ಪ್ರದರ್ಷಿಸುವ ಬದ್ಧತೆಯನ್ನು ಪ್ರಜೆಗಳಾಗಿ ನಾವು ತೋರಿಸಬೇಕಾಗಿ ರುವುದು ನಮ್ಮ ಆದ್ಯ ಕರ್ತವ್ಯ. ನಾಗರಿಕರಾಗಿ ನಾವು ಅಂತರ್ಗತ, ಸಮಾನ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಬೇಕಾಗಿದೆ. ಜಾತಿ, ಸಂಘರ್ಷ ಮತ್ತು ಧರ್ಮಾಧಾರಿತ ರಾಜಕಾರಣ ದೇಶದ ಹಿತಾಸಕ್ತಿಗೆ ಮಾರಕ. ಈ ನಿಟ್ಟಿನಲ್ಲಿ ಪೀಠಿಕೆ ಯನ್ನು ಓದಿ ಅದರ ಮಹತ್ವನ್ನು ಅರಿತುಕೊಳ್ಳು ವುದು ಅತಿ ಮುಖ್ಯ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ಸಂವಿಧಾನದ ಪೀಠಿಕೆ ಓದುವ ಅವಕಾಶ ಒದಗಿ ಬಂದಿರುವುದು ನಮ್ಮ ಸೌಭಾಗ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.