Terrorism: ಮಲೆನಾಡಿನಲ್ಲಿ ಟೆರರಿಸ್ಟ್ ಇದ್ದಾರಲ್ಲ ಎಂಬುದು ಬೇಸರದ ಸಂಗತಿ – ಆರಗ ಜ್ಞಾನೇಂದ್ರ

Team Udayavani, Sep 15, 2023, 6:39 PM IST

araga

ತೀರ್ಥಹಳ್ಳಿ : ತೀರ್ಥಹಳ್ಳಿ ಎಂದರೆ ಅನಂತಮೂರ್ತಿ, ಕುವೆಂಪು ಎಂಬ ಖ್ಯಾತಿ‌ ಇತ್ತು. ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಜನರು ತೆಲೆತಗ್ಗಿಸೋ ಕೆಲಸ ನಡೆಯುತ್ತಿದೆ. ಈ ದೇಶಕ್ಕೆ ಧಕ್ಕೆ ತರುವ ಕೆಲಸ ಭಯೋತ್ಪಾದನೆಯಲ್ಲಿ ತೀರ್ಥಹಳ್ಳಿಯ ಎರಡು ಮೂರು ಜನರು ಇದ್ದಾರೆ. ಇದು ತೀರ್ಥಹಳ್ಳಿ ಜನರಿಗೆ ದುಃಖದ ಸಂಗತಿ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಶುಕ್ರವಾರ ತೀರ್ಥಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ತೀರ್ಥಹಳ್ಳಿ ಮೂಲದ ಯುವಕ ಅರಾಫತ್ ಅಲಿ ಯನ್ನ ರಾಷ್ಟ್ರೀಯ ತನಿಖಾ ತಂಡ ಅರೆಸ್ಟ್ ಮಾಡಿದೆ. ಕಳೆದೆರಡು ಮೂರು ವರ್ಷದಿಂದ ನಾಪತ್ತೆಯಾಗಿದ್ದ ಅರಾಫತ್ ಆಲಿ ಸಿಕ್ಕಿದ್ದಾನೆ. ಆತನನ್ನ ಹುಡುಕಿ ಕೊಟ್ಟವರಿಗೆ ಬಹುಮಾನ ನೀಡೋದಾಗಿ NIA ಪ್ರಕಟಣೆ ಹೊರಡಿಸಿತ್ತು. ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಕೀನ್ಯಾದ ನೈರೋಬಿಯಲ್ಲಿ ಅರೆಸ್ಟ್ ಮಾಡಿದ್ದಾರೆ. ಅವರನ್ನ ಅರೆಸ್ಟ್ ಮಾಡಿದ್ದು ಒಳ್ಳೆಯದಾಯ್ತು ಎಂದರು.

ಇನ್ನೊಂದು, ನಮ್ಮ ಮಲೆನಾಡಿನಲ್ಲಿ ಇಂಥವರು ಇದ್ದಾರಲ್ಲ ಎಂಬುದು ಬೇಸರದ ಸಂಗತಿ. ಇಂಥವರನ್ನ ಬೇರು ಮಟ್ಟದಿಂದ ಕೀಳಬೇಕು. ಇಂಥ ಮಾನಸಿಕತೆ ತೊಲಗಬೇಕು. ಇಂಥವರ ಮೂಲವನ್ನ ಹುಡುಕಿ ಕಡಿಯಬೇಕು. ಇನ್ಮುಂದೆ ಇಂಥವರು ಹುಟ್ಟಬಾರದು ಎಂಬ ಮೆಸೇಜ್ ಸಿಗಬೇಕು. ಇಲ್ಲಿ ಮೂಲಭೂತವಾದಿಗಳು ಜಾಸ್ತಿ. ಧರ್ಮ ಎಂದರೆ ಕೊಲೆ ಎಂಬ ಮನಸ್ಥಿತಿ ಇದೆ. ಇಂತಹ ತಪ್ಪುತಿಳುವಳಿಕೆಗೆ ಶಿಕ್ಷೆಯ ಮೂಲಕ ಉತ್ತರ ನೀಡಬೇಕು ಎಂದರು.

ಪ್ರಧಾನಿ ಮೋದಿ ಬಂದ ಮೇಲೆ NIA ಬಲಿಷ್ಟವಾಗಿದೆ. ಇಂಥಹ ಘಟನೆ ಸಿಕ್ಕಾಗ ಬರೀ FIR ಮಾಡಿ ಬಿಡಬಾರದು. ಈ ತರಹದವರು ಎಲ್ಲಿ ಸಿಕ್ಕರೂ ಬಿಡೋದಿಲ್ಲ. ಭಯೋತ್ಪಾದನೆ ಸಾಕಷ್ಟು ಕಡಿಮೆ ಆಗಿದೆ. ಇವರು ಕೊನೇ ಕೊಂಡಿ ಎನಿಸುತ್ತೆ ಎಂದರು.

ಕುಕ್ಕರ್ ಅಡುಗೆ ಮಾಡೋದಕ್ಕೆ ಅಂದುಕೊಂಡಿದ್ವಿ. ಆದರೆ ನಮ್ಮ ತಾಲೂಕಿನ ಯುವಕ ಶಾರಿಕ್ ಬಾಂಬ್ ಸಿಡಿಸುತ್ತಾನೆ ಎಂದು ಅಂದುಕೊಂಡಿರಲಿಲ್ಲ.ಇಸ್ರೋ ಚಂದ್ರಯಾನದಲ್ಲಿ ಸಾಧನೆ ಮಾಡಿದ ಎರಡು ವಿಜ್ಞಾನಿಗಳು ತೀರ್ಥಹಳ್ಳಿಯವರು. ಇವರೆಲ್ಲಾ ದೇಶಕ್ಕೆ ಕೊಡುಗೆ ನೀಡುತ್ತಿದ್ದರೆ ಇಂತಹ ಯುವಕರು ಈ ತರಹ ಬೆಳೆಯುತ್ತಿದ್ದಾರೆ‌. ಇದು ಖಂಡಿತಾ ಮಲೆನಾಡು, ಕರಾವಳಿಗೆ ಅವಮಾನ. ಕೊನೆಗೂ NIA ಅರೆಸ್ಟ್ ಮಾಡಿದಕ್ಕೆ ಖುಷಿ ಇದೆ. ಕಡಿದಾಳು ಮಂಜಪ್ಪ, ಗೋಪಾಲಗೌಡ ಸೇರಿ ಅನೇಕರು ತೀರ್ಥಹಳ್ಳಿ ಘನತೆಯನ್ನು ಎತ್ತರಕ್ಕೆ ಬೆಳೆಯುವ ಹಾಗೆ ಮಾಡಿದ್ದರು ಎಂದು ಹೇಳಿದರು.

ಟಾಪ್ ನ್ಯೂಸ್

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌Fraud Case: ಸಾಫ್ಟ್ ವೇರ್ ಕಂಪನಿಗೆ 56 ಲಕ್ಷ ರೂಪಾಯಿ ವಂಚನೆ: 6 ಬಂಧನ

‌Fraud Case: ಸಾಫ್ಟ್ ವೇರ್ ಕಂಪನಿಗೆ 56 ಲಕ್ಷ ರೂಪಾಯಿ ವಂಚನೆ: 6 ಬಂಧನ

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.