Exports: ಆಗಸ್ಟ್ನಲ್ಲಿ ರಫ್ತು ಶೇ.6.86 ಕುಸಿತ
Team Udayavani, Sep 15, 2023, 9:42 PM IST
ನವದೆಹಲಿ: ಭಾರತದ ಜಿಡಿಪಿ ಏರಿಕೆಯಾಗಿದ್ದನ್ನು ಇತ್ತೀಚೆಗೆ ಇಡೀ ದೇಶ ಗಮನಿಸಿತ್ತು. ಉದ್ಯಮವಲಯವೂ ಸಂತೋಷದಲ್ಲಿತ್ತು. ಇದೀಗ ಆಗಸ್ಟ್ ತಿಂಗಳಲ್ಲಿ ರಫ್ತು ಶೇ.6.86ರಷ್ಟು ಕುಸಿದಿದೆ. ಹಣದ ರೂಪದಲ್ಲಿ ಹೇಳುವುದಾದರೆ ರಫ್ತು ಪ್ರಮಾಣ 34.48 ಬಿಲಿಯನ್ ಡಾಲರ್ಗಿಳಿದಿದೆ.
ಇದು ಕಳೆದ ವರ್ಷ ಆಗಸ್ಟ್ನಲ್ಲಿ 37.02 ಬಿಲಿಯನ್ ಡಾಲರ್ಗಳಷ್ಟಿತ್ತು. ಇದೇ ವೇಳೆ ಆಮದು ಪ್ರಮಾಣ ಶೇ.5.23ರಷ್ಟು ಕುಸಿದು, 58.64 ಬಿಲಿಯನ್ ಡಾಲರ್ಗಳಿಗೆ ಮುಟ್ಟಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಆಮದು ಪ್ರಮಾಣ 61.88 ಬಿಲಿಯನ್ ಡಾಲರ್ಗಳಷ್ಟಿತ್ತು. ಒಂದು ರೀತಿಯಲ್ಲಿ ನೋಡಿದರೆ ರಫ್ತು ಕಡಿಮೆಯಾಗಿದ್ದರೂ, ಆಮದೂ ಕಡಿಮೆಯಾಗಿರುವುದರಿಂದ ಬಹಳ ನಷ್ಟವೇನೂ ಸಂಭವಿಸಿಲ್ಲ! ಆಗಸ್ಟ್ನಲ್ಲಿ ದೇಶದಲ್ಲಿ ವಹಿವಾಟಿನ ಅಂತರ (ರಫ್ತು-ಆಮದು ನಡುವಿನ ವ್ಯತ್ಯಾಸ) 24.16 ಬಿಲಿಯನ್ ಡಾಲರ್ಗಳಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.