VSL-3: ವಿಎಸ್ಎಲ್ – 3 ಪ್ರಯೋಗಾಲಯ
Team Udayavani, Sep 16, 2023, 12:10 AM IST
ಮಣಿಪಾಲ: ದಕ್ಷಿಣ ಏಷ್ಯಾದಲ್ಲೇ ಮೊದಲ ಅತ್ಯಾಧುನಿಕ ವಿಎಸ್ಎಲ್ – 3 ಸಂಚಾರಿ ಪ್ರಯೋಗಾಲಯ ಎಂಬ ಕೀರ್ತಿಗೆ ಭಾಜನವಾಗಿರುವ ಪುಣೆಯ ಎನ್ಐವಿಯ ಮೊಬೈಲ್ ಲ್ಯಾಬೊರೇಟರಿಯನ್ನು ಈಗ ಕೇರಳದ ನಿಫಾ ಬಾಧಿತ ಕೋಯಿಕ್ಕೋಡ್ನಲ್ಲಿ ನೆಲೆಗೊಳಿಸಲಾಗಿದೆ. ಅದರ ಬಗ್ಗೆ ಪುಟ್ಟ ಮಾಹಿತಿ.
ಪ್ರಯೋಗಾಲಯದ ವಿನ್ಯಾಸ ಮತ್ತು ನಿರ್ಮಾಣ: ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯು ಮುಂಬಯಿ ಮೂಲದ ಜೈವಿಕ ಸುರಕ್ಷ ಉಪಕರಣ ತಯಾರಿಕ ಕಂಪೆನಿ ಕ್ಲೆನ್ಝೈಡ್ಸ್ ಸಹಯೋಗದೊಂದಿಗೆ ನಿರ್ಮಾಣ ಮಾಡಿದೆ.
ಉದ್ದೇಶ: ನಿಫಾ, ಕೋವಿಡ್ನಂಥ ಮಾರಕ ಸಾಂಕ್ರಾಮಿಕ ರೋಗಗ್ರಸ್ತ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು.
ನಿರ್ಮಾಣಕ್ಕೆ ಪ್ರೇರಣೆ: ಕೇರಳವನ್ನು ಈ ಹಿಂದೆ ಕಾಡಿದ್ದ ಮಾರಕ ನಿಫಾ ವೈರಸ್ ಸೋಂಕು.
ಪ್ರಯೋಗಾಲಯದಲ್ಲಿ ಏನೇನಿದೆ?: ನಿರ್ಯಾತ ಪ್ರದೇಶ, ಮೈನಸ್ 20 ಡಿಗ್ರಿ ಮತ್ತು ಮೈನಸ್ 80 ಡಿಗ್ರಿಯ ಶೀತಲೀಕರಣ ವ್ಯವಸ್ಥೆ. ಸ್ವಯಂಚಾಲಿತವಾಗಿ ಕಾರ್ಯಾಚರಿಸುವ ವ್ಯವಸ್ಥೆ, ಋಣಾತ್ಮಕ ಗಾಳಿ ಒತ್ತಡ, ಜೈವಿಕ ಸುರಕ್ಷ ಕ್ಯಾಬಿನೆಟ್ಗಳು, ಪಿಸಿಆರ್ ಯಂತ್ರಗಳು.
ಇವುಗಳ ಮೂಲ ನೆಲೆ ಎಲ್ಲಿ?: ಮೊದಲನೆಯದ್ದು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪುಣೆ, ಎರಡನೆಯದ್ದು ಆರ್ಎಂಆರ್ಸಿ ಗೋರಖ್ಪುರದಲ್ಲಿ.
ಇವುಗಳ ಕಾರ್ಯ ವ್ಯಾಪ್ತಿ: ಒಂದು ದಕ್ಷಿಣ ಭಾರತಕ್ಕೆ ಹಾಗೂ ಇನ್ನೊಂದು ಉತ್ತರ ಭಾರತಕ್ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.