Daily Horoscope: ದಿಟ್ಟ ನಿರ್ಧಾರ ಕೈಗೊಂಡು ಮುನ್ನಡೆದರೆ ಯಶಸ್ಸು ಖಂಡಿತ
Team Udayavani, Sep 16, 2023, 7:20 AM IST
ಮೇಷ: ಸಾರ್ವಜನಿಕ ರಂಗದಲ್ಲಿ ದುಡಿಯುವ ವ್ಯಕ್ತಿಗಳಿಗೆ ಮಹತ್ವದ ಜವಾಬ್ದಾರಿ. ಏಕಕಾಲದಲ್ಲಿ ಅನೇಕ ಕಾರ್ಯಗಳ ನಿರ್ವಹಣೆ ಸಂಭವ. ವ್ಯವಹಾರ ಕ್ಷೇತ್ರದಲ್ಲಿ ಲಾಭ, ಕೀರ್ತಿ ಎರಡಕ್ಕಾಗಿಯೂ ಮೇಲಾಟ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ.
ವೃಷಭ: ಎಡ- ಬಲ ಗಮನಿಸಿ ಎಚ್ಚರಿಕೆಯಿಂದ ಮುಂದುವರಿದರೆ ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದು. ಉದ್ಯೋಗಸ್ಥರಿಗೆ ಪ್ರಗತಿ ಸ್ಥಿರ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಕೈಸೇರಿ ಸಮಾಧಾನ. ಮನೆಯಲ್ಲಿ ಎಲ್ಲರ ಆರೋಗ್ಯ ಸಮಾಧಾನಕರ.
ಮಿಥುನ: ದಿಟ್ಟ ನಿರ್ಧಾರ ಕೈಗೊಂಡು ಮುನ್ನಡೆದರೆ ಯಶಸ್ಸು ಖಂಡಿತ. ಎಂತಹ ಸನ್ನಿವೇಶವನ್ನೂ ಎದುರಿಸುವ ಮನೋಬಲ ನಿಮಗಿದೆ. ಪ್ರಾಮಾಣಿಕ ಅಧಿಕಾರಿಗಳ ಸತ್ವಪರೀಕ್ಷೆ ನಡೆಯಲಿದೆ. ಪೂರ್ವ ದಿಕ್ಕಿನಿಂದ ಶತ್ರು ಬಾಧೆ. ವಾಹನ ಉದ್ಯಮಿಗಳಿಗೆ ಲಾಭ- ನಷ್ಟ ಯಥಾಸ್ಥಿತಿ.
ಕರ್ಕಾಟಕ: ಭವಿಷ್ಯದ ಕುರಿತು ಅತಿಯಾಗಿ ಚಿಂತಿಸದಿರಿ. ಒಟ್ಟಿನಲ್ಲಿ ಮಿಶ್ರಫಲಗಳ ದಿನ ವಾಗಿ ದ್ದರೂ ಶುಭಫಲಗಳೇ ಅಧಿಕವಾಗಿರುತ್ತವೆ. ಉದ್ಯೋಗಸ್ಥ ರಿಗೆ ಉತ್ತೇಜನದ ವಾತಾವರಣ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.
ಸಿಂಹ: ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸರ್ವರ ಪ್ರಶಂಸೆಗೆ ಪಾತ್ರರಾಗುವ ಯೋಗವಿದೆ. ಸ್ವಂತ ವ್ಯವಹಾರದಲ್ಲಿ ಅಭೂತ ಪೂರ್ವ ಯಶಸ್ಸು. ಆಪ್ತಮಿತ್ರರಿಗೆ ಸಹಾಯ ಮಾಡುವ ಅವಕಾಶ. ನೂತನ ಗೃಹ ನಿರ್ಮಿಸುವವರಿಗೆ ಅನುಕೂಲ.
ಕನ್ಯಾ: ಎಲ್ಲ ವ್ಯವಹಾರಗಳೂ ನಿರೀಕ್ಷೆಯಂತೆ ನಡೆದು ಮನಸ್ಸಿಗೆ ನೆಮ್ಮದಿ. ಹಿರಿಯರ ಆರೋಗ್ಯ ಗಮನಿಸಿ. ಉದ್ಯೋಗ ರಂಗದಲ್ಲಿ ನಿರಾತಂಕದ ಮುನ್ನಡೆ. ಸ್ವಂತ ವ್ಯವಹಾರಸ್ಥರಿಗೆ ನಿರೀಕ್ಷಿತ ವಲಯಗಳಿಂದ ಸಕಾಲಿಕ ನೆರವು. ಲೆಕ್ಕ ಪರಿಶೋಧಕರಿಗೆ ಸಮಯದ ಒತ್ತಡ.
ತುಲಾ: ಪಂಚಮ ಶನಿಯ ಪ್ರಭಾವ ಆರೋಗ್ಯದ ಮೇಲೆ ಆಗುವುದು ಸ್ವಾಭಾವಿಕವಾಗಿದ್ದರೂ ಅಂಜ ಬೇಕಾಗಿಲ್ಲ. ದೇವತಾರ್ಚನೆ, ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಹತ್ತಿರದ ದೇವತಾ ಸಾನ್ನಿಧ್ಯ ಸಂದರ್ಶನ. ಬಂಧುವರ್ಗದಲ್ಲಿ ವಿವಾಹದ ಸಂಭ್ರಮ.
ವೃಶ್ಚಿಕ: ಅಪೇಕ್ಷಿಸಿದಷ್ಟು ಅಲ್ಲದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಪ್ರಗತಿ. ಉದ್ಯೋಗ ರಂಗದಲ್ಲಿ ಪ್ರತಿಭೆ ತೋರಿಸಲು ಅವಕಾಶ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ. ದೂರದ ಬಂಧುಗಳ ಆಗಮನ. ಪೂರ್ವದಿಕ್ಕಿನಿಂದ ಶುಭವಾರ್ತೆ.
ಧನು: ಉದ್ದೇಶಿತ ಕಾರ್ಯ ನಿರ್ವಿಘ್ನವಾಗಿ ಮುಕ್ತಾಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಹಿರಿಯರ ಮತ್ತು ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಸಾಮರ್ಥ್ಯ ವೃದ್ಧಿಗೆ ಪ್ರಯತ್ನ. ಅಲ್ಪಕಾಲೀನ ಹೂಡಿಕೆಗಳಿಂದ ಲಾಭ. ಮಕ್ಕಳ ವ್ಯಾಸಂಗಾಸಕ್ತಿ ವೃದ್ಧಿಗೆ ಪ್ರಯತ್ನ.
ಮಕರ: ಅನಿರೀಕ್ಷಿತ ಬೆಳವಣಿಗೆಗಳಿಂದ ಆತಂಕಗೊಳ್ಳಬೇಡಿ. ದೇವಾರಾಧನೆಯಲ್ಲಿ ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ. ಮನೆಯಲ್ಲಿ ಹೆಚ್ಚುಕಡಿಮೆ ಎಲ್ಲರ ಆರೋಗ್ಯ ಉತ್ತಮ. ಖಾಸಗಿ ರಂಗದ ಉದ್ಯೋಗಸ್ಥರಿಗೆ ಕೆಲಸದ ಒತ್ತಡ.
ಕುಂಭ: ಒಂದು ಬಗೆಯಲ್ಲಿ ನಿರಾತಂಕದ ದಿನ. ಉದ್ಯೋಗ ರಂಗದಲ್ಲಿ ಅಬಾಧಿತ ಮುನ್ನಡೆ. ವ್ಯವಹಾರ ಕ್ಷೇತ್ರ ತಾನಾಗಿ ವಿಸ್ತರಣೆಗೊಳ್ಳುವ ಸೂಚನೆ. ಸಮಾಜದಲ್ಲಿ ವಿಶೇಷ ಗೌರವ ಪ್ರಾಪ್ತಿ. ಮನೆಯಲ್ಲಿ ಎಲ್ಲರ ಆರೋಗ್ಯವೂ ಸಮಾಧಾನಕರ.
ಮೀನ: ಏಳೂವರೆ ಶನಿಯ ಪ್ರಭಾವವಿದ್ದರೂ ಧರ್ಮನಿಷ್ಠೆಯ ಕಾರಣದಿಂದಾಗಿ ಹೆಚ್ಚು ಶುಭಫಲಗಳೇ ಗೋಚರವಾಗಲಿವೆ. ವಾಹನ ಸಂಬಂಧಿ ವ್ಯವಹಾರಸ್ಥರಿಗೆ ಮಧ್ಯಮವಾದರೂ ಸ್ಥಿರವಾದ ಆದಾಯ. ಸಂಗಾತಿಯಿಂದ ನಿತ್ಯದ ವ್ಯವಹಾರಗಳಿಗೆ ಸಕ್ರಿಯ ಸಹಕಾರ. ತಾಯಿಯ, ಮಾತೃಸಮಾನರ ಆರೋಗ್ಯ ಉತ್ತಮ. ಹತ್ತಿರದ ಕ್ಷೇತ್ರ ದರ್ಶನ ಸಂಭವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.