Movie Review; ಒಂದು ಕೊಲೆಯ ಸುತ್ತ… ತತ್ಸಮ ತದ್ಭವ’


Team Udayavani, Sep 16, 2023, 10:45 AM IST

tatsama tadbhava movie review

ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವನ್ನು ಕೇವಲ ರೋಚಕವಾಗಿ ಹೇಳಿದರೆ ಸಾಲದು. ಜೊತೆಗೆ ಪ್ರೇಕ್ಷಕರಲ್ಲಿ ಕುತೂಹಲದ ಜೊತೆಗೆ ಆಗಾಗ ಸಣ್ಣ ಸಣ್ಣ ಗೊಂದಲಗಳು ಮೂಡುತ್ತಾ, ಮುಂದಿನ ಭಾಗದಲ್ಲಿ ಅದಕ್ಕೆ ಉತ್ತರ ಸಿಗಬೇಕು.. ಸದ್ಯ ನಡೆಯುತ್ತಿರೋದು ಈ ಟ್ರೆಂಡ್‌. ಇದನ್ನೇ ಗಮನದಲ್ಲಿಟ್ಟುಕೊಂಡು ಮೂಡಿಬಂದಿರುವ ಚಿತ್ರ “ತತ್ಸಮ ತದ್ಭವ’.

ಮೇಲ್ನೋಟಕ್ಕೆ ಇದೊಂದು ಮರ್ಡರ್‌ ಮಿಸ್ಟರಿ ಚಿತ್ರವಾಗಿ ಕಂಡರೂ ಇದರ ವಿಸ್ತಾರ ಅಷ್ಟಕ್ಕೇ ಸೀಮಿತವಾಗಿಲ್ಲ. ಮರ್ಡರ್‌ ಮಿಸ್ಟರಿ ಜೊತೆಗೆ ಇದೊಂದು ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರವಾಗಿಯೂ ಮೂಡಿಬಂದಿದೆ. ನಿರ್ದೇಶಕ ವಿಶಾಲ್‌ ಅತ್ರೇಯ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಕಟ್ಟಿಕೊಟ್ಟ ಸಿನಿಮಾವಿದು ಎಂಬುದು ಸಿನಿಮಾ ನೋಡುವಾಗ ಅಲ್ಲಲ್ಲಿ ಸಾಬೀತಾಗುತ್ತದೆ.

ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ನಾಯಕಿ ಆರಿಕಾ ಪೊಲೀಸ್‌ ಸ್ಟೇಷನ್‌ಗೆ ದೂರು ನೀಡುವ ಮೂಲಕ ತೆರೆದುಕೊಳ್ಳುವ ಕಥೆ ಮುಂದೆ ಸಾಗುತ್ತಾ ಹಲವು ಮಜಲುಗಳುನ್ನು ತೆರೆದುಕೊಳ್ಳುತ್ತದೆ. ಇಲ್ಲಿ ಅಪರಾಧಿ ಯಾರು, ಈಕೆ ನಿಜಕ್ಕೂ ಮುಗ್ಧೆನಾ ಅಥವಾ ಈಕೆಯೇ ಆಕೆಯ, ಆಕೆಯೇ ಈಕೆಯಾ… ಇಂತಹ ಹಲವು ಪ್ರಶ್ನೆಗಳನ್ನು ಮುಂದಿಡುತ್ತಾ ಸಾಗುವ ಸಿನಿಮಾ, ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸುವಲ್ಲಿ ಸಫ‌ಲವಾಗಿದೆ. ಈ ಸಿನಿಮಾದ ಕಥೆಯನ್ನು ಐದು ವಿಭಾಗಗಳಾಗಿ ವಿಂಗಡಿಸಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ, ನೀವು ಈ ಸಿನಿಮಾದ ಯಾವುದೇ ಒಂದು ಅಂಶವನ್ನು ಮಿಸ್‌ ಮಾಡಿದರೂ ನಿಮಗೆ ಮುಂದಿನ ಭಾಗದ ಸ್ಪಷ್ಟತೆ ಕಡಿಮೆಯಾಗಬಹುದು. ಚಿತ್ರದಲ್ಲಿ ಬರುವ ಸಣ್ಣ ಸಣ್ಣ ಅಂಶಗಳು ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಆ ಮಟ್ಟಿಗೆ “ತತ್ಸಮ ತದ್ಭವ’ ಒಂದು ಹೊಸ ಪ್ರಯೋಗದ ಸಿನಿಮಾ.

ಇಡೀ ಸಿನಿಮಾದ ಹೈಲೈಟ್‌ ಮೇಘನಾ ರಾಜ್‌. ಒಂದು ದೊಡ್ಡ ಗ್ಯಾಪ್‌ನ ನಂತರ ತೆರೆಮೇಲೆ ಕಾಣಿಸಿಕೊಂಡಿರುವ ಮೇಘನಾ ರಾಜ್‌ ಅವರಿಗೆ ಹಲವು ಆಯಾಮಗಳಿರುವ, ತುಂಬಾ ಇಂಟೆನ್ಸ್‌ ಆದ ಪಾತ್ರ ಸಿಕ್ಕಿದೆ. ಆ ಪಾತ್ರವನ್ನು ಅಷ್ಟೇ ಚೆನ್ನಾಗಿ ನಿಭಾಯಿಸುವ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಉಳಿದಂತೆ ಪೊಲೀಸ್‌ ಆμàಸರ್‌ ಆಗಿ ಪ್ರಜ್ವಲ್‌ ದೇವರಾಜ್‌ ಇಷ್ಟವಾಗುತ್ತಾರೆ. ಉಳಿದಂತೆ ಬಾಲಾಜಿ ಮನೋಹರ್‌, ಶ್ರುತಿ, ಅರವಿಂದ್‌ ಅಯ್ಯರ್‌ ನಟಿಸಿದ್ದಾರೆ. ತಣ್ಣನೆ ಕಾಡುವ ಒಂದು ಥ್ರಿಲ್ಲರ್‌ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಬಯಸುವವರಿಗೆ “ತತ್ಸಮ-ತದ್ಭವ’ ಇಷ್ಟವಾಗುತ್ತದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

Gopilola Movie Review

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

Bhairadevi Review; ಅಘೋರಿ ಹಿಂದೆ ಘೋರ ಕಥನ

Bhairadevi Review; ಅಘೋರಿ ಹಿಂದೆ ಘೋರ ಕಥನ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Nite Road Movie Review:

Nite Road Movie Review: ಪಾಪ ಕರ್ಮಗಳ ಲೆಕ್ಕಾಚಾರ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.