Tales of Mahanagara Movie Review; ಅಚ್ಚರಿಗಳ ನಡುವೆ ಮಹಾನಗರದ ಚಿತ್ರಣ


Team Udayavani, Sep 16, 2023, 2:56 PM IST

tales of mahanagara movie review

ಪ್ರಪಂಚದ ಎಲ್ಲ ಮಹಾನಗರಗಳು ಕೂಡ ತಮ್ಮೊಳಗೆ ನೂರಾರು ನಿಗೂಢಗಳನ್ನು ಹುದುಗಿಸಿ ಇಟ್ಟುಕೊಂಡಿರುತ್ತವೆ. ಮೇಲ್ನೋಟಕ್ಕೆ ಸುಂದರ, ಪ್ರಶಾಂತ ಎನಿಸುವ ಮಹಾನಗರಗಳ ಅಂತರಾಳ ಕೆದಕುವ ಕೆಲಸಕ್ಕೆ ಕೈ ಹಾಕಿದರೆ ಅಚ್ಚರಿ, ವಿಸ್ಮಯ, ಆಘಾತ ಎಲ್ಲವೂ ಒಟ್ಟಿಗೇ ಎದುರಾಗಬಹುದು. ಇಂಥದ್ದೇ ಒಂದು ಮಹಾನಗರದ ಚಿತ್ರಣ ಈ ವಾರ ತೆರೆಗೆ ಬಂದಿರುವ “ಟೇಲ್ಸ್‌ ಆಫ್ ಮಹಾನಗರ’ ಸಿನಿಮಾದಲ್ಲೂ ಇದೆ.

ಸಿನಿಮಾದ ಹೆಸರೇ ಹೇಳುವಂತೆ, “ಮಹಾನಗರ’ದಲ್ಲಿ ಜನಸಾಮಾನ್ಯರ ಅರಿವಿಗೆ ಬಾರದ ಒಂದಷ್ಟು “ಟೇಲ್ಸ್‌’ ಗಳನ್ನು ಪೋಣಿಸಿ ಅದಕ್ಕೊಂದು ದೃಶ್ಯರೂಪ ಕೊಟು ಟೇಲ್ಸ್‌ ಆಫ್ ಮಹಾನಗರ’ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ತರಲಾಗಿದೆ.

ಅಮಾಯಕರ ಮೇಲೆ ವೈದ್ಯ ಕೀಯ ವಿಜ್ಞಾನದ ಪ್ರಯೋಗ, ಮಾನಸಿಕ ಪ್ರಕ್ಷೋಭೆ, ಪ್ರೀತಿಯ ಹುಡುಕಾಟ, ಬದುಕಿಗಾಗಿ ಹೋರಾಟ, ಹೀಗೆ “ಮಹಾ ನಗರ’ದ ಜನಜೀವನದ ಹಲವು ಎಳೆಗಳನ್ನು ಒಂದೆಡೆ ಸೇರಿಸಿ ಅದನ್ನು ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ಎಲ್ಲೂ ಬೋರ್‌ ಆಗದಂತೆ ನಿರೂಪಿಸಿರುವುದು ಸಿನಿಮಾದ ಹೆಗ್ಗಳಿಕೆ.

ಸಿನಿಮಾದ ಮೊದಲರ್ಧ ಬೇರೆ ಬೇರೆ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕಥೆ ಮತ್ತು ಪಾತ್ರಗಳು ಮಧ್ಯಂತರದ ನಂತರ ಒಂದೆಡೆ ಸೇರಿ ಹೊಸ ದಿಕ್ಕಿನ ಕಡೆಗೆ ಸಾಗುತ್ತವೆ. ಅಂತಿಮವಾಗಿ ಇದೆಲ್ಲದಕ್ಕೂ ಕ್ಲೈಮ್ಯಾಕ್ಸ್‌ನಲ್ಲಿ ತಾರ್ಕಿಕ ಅಂತ್ಯವನ್ನು ನಿರೀಕ್ಷಿಸಬಹುದು. ಕನ್ನಡದ ಮಟ್ಟಿಗೆ ಹೇಳುವು ದಾದರೆ, “ಟೇಲ್ಸ್‌ ಆಫ್ ಮಹಾನಗರ’ ಬೆನ್ನುತಟ್ಟ ಬಹುದಾದ ಹೊಸ ಪ್ರತಿಭೆಗಳ ಪ್ರಯತ್ನ ಎನ್ನಬಹುದು.

ಮೊದಲರ್ಧ ಕೊಂಚ ಮಂದವೆನಿಸುವ ಚಿತ್ರಕಥೆ ಮತ್ತು ನಿರೂಪಣೆ ಮಧ್ಯಂತರದ ನಂತರ ಪಾದರಸದಂತೆ ಓಡುತ್ತದೆ. ಉಳಿದಂತೆ ಯುವ ನಟ ಅಥರ್ವ್‌, ಸಂಪತ್‌ ಮೈತ್ರೇಯ, ಆರ್‌. ಜೆ. ಅನೂಪ, ಆಶಿಶ್‌ ಅತಾವ್ಡೆ, ರೂಪಾ ರಾಯಪ್ಪ, ವೆಂಕಟೇಶ್‌, ನಾಗರಾಜ್‌, ಮಧು ಹೆಗ್ಡೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಸಂಕಲನ ಮತ್ತು ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.

“ಟೇಲ್ಸ್‌ ಆಫ್ ಮಹಾನಗರ’ ಮಾಮೂಲಿ ಸಿದ್ಧಸೂತ್ರಗಳನ್ನು ಇಟ್ಟುಕೊಂಡು ಬರುವ ಕಮರ್ಶಿಯಲ್‌ ಸಿನಿಮಾಗಳಿಗಿಂತ ಹೊರತಾದ ಸಿನಿಮಾ

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

Gopilola Movie Review

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

Bhairadevi Review; ಅಘೋರಿ ಹಿಂದೆ ಘೋರ ಕಥನ

Bhairadevi Review; ಅಘೋರಿ ಹಿಂದೆ ಘೋರ ಕಥನ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Nite Road Movie Review:

Nite Road Movie Review: ಪಾಪ ಕರ್ಮಗಳ ಲೆಕ್ಕಾಚಾರ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

jameer

Waqf Boardನಿಂದ ಪ್ರತಿ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜು: ಸಚಿವ ಜಮೀರ್‌

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.