Ranebennur; ಶ್ರೀ ಸದ್ಗುರು ಸಿದ್ದಾರೂಢ ಕಥಾಮೃತ ಪುರಾಣ ಮಂಗಲೋತ್ಸವ
Team Udayavani, Sep 16, 2023, 6:00 PM IST
ರಾಣಿಬೆನ್ನೂರ: 84 ಲಕ್ಷ ಜೀವರಾಶಿಗಳಲ್ಲಿ ಅಂಡಜ, ಪಿಂಡಜ, ಜಲಜ ಜೀವರಾಶಿಗಳಾಗಿ ಜನ್ಮ ತಾಳಿ ಆ ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ಮನುಷ್ಯನಿಗೆ ಮಾತ್ರ ಅರಿವಿದ್ದು, ತನ್ನ ಜೀವಿತಾವಧಿಯಲ್ಲಿ ಪುಣ್ಯ ಕಾರ್ಯಗಳನ್ನು
ಮಾಡುವುದರೊಂದಿಗೆ ಭಗವಂತನ ಕೃಪೆಗೆ ಪಾತ್ರರಾಗಿ ಮೋಕ್ಷಕ್ಕೆ ಅರ್ಹರಾಗಬೇಕೆಂದು ಗುರು ನಾಗರಾಜಾನಂದ ಸ್ವಾಮೀಜಿ ಹೇಳಿದರು.
ಸುಕ್ಷೇತ್ರ ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ನಡೆದ ಶ್ರೀ ಸಿದ್ಧಾರೂಢರ ಕಥಾಮೃತ ಪುರಾಣ ಪ್ರವಚನ ಮಂಗಲೋತ್ಸವದ ಅಂಗವಾಗಿ ಕಥಾಮೃತ ಪಾಲಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅರಿವಿನ ಜನ್ಮ ಪಡೆದಿರುವ ಸಕಲ ಮಾನವರು ಜೀವನದ ಮುಕ್ತಿಗಾಗಿ ಓಂ ನಮಃ ಶಿವಾಯ ಮಂತ್ರ ಪಠಣೆ ಸುಲಭ ಉಪಾಯವಾಗಿದೆ ಎಂದು ನುಡಿದರು.
ಈ ಮಂತ್ರವನ್ನು ಅಂತಪ್ಪ ಸದ್ಗುರುವಿನ ಮುಖಾಂತರ ಪಡೆದುಕೊಂಡು ಉತ್ಛರಿಸಿದರೆ ಮಾತ್ರ ಪಾಪ ಕರ್ಮಗಳು ನಾಶವಾಗಿ ಮುಕ್ತಿ ಪಡೆಯಲು ಸಾಧ್ಯ. ಜೀವನದಲ್ಲಿ ಅರಿತೋ ಮರೆತೋ ಒಂದು ಬಾರಿ ಶಿವನಾಮ ಅಥವಾ ರಾಮನಾಮ ಉಚ್ಛರಿಸಿದರೆ
ಕಾಮಧೇನುವಿನಂತೆ ಸಕಲ ಭೋಗ, ಭಾಗ್ಯಗಳು ಲಭಿಸುತ್ತವೆ ಎಂದರು. ನಾಲ್ಕು ವೇದಗಳ ಸಾರವೇ ಪಂಚಾಕ್ಷರಿ ಮಂತ್ರ. 7
ಕೋಟಿ ಮಂತ್ರಗಳಲ್ಲಿ ಬೀಜ ಮಂತ್ರವಾಗಿದೆ. ಇದನ್ನು ಜಪಿಸಲು ಸರ್ವರೂ ಅರ್ಹರಿದ್ದು, ಗೌಪ್ಯವಾಗಿದ್ದ ಈ ಉಪಾಯವನ್ನು ಶ್ರೀ ಸಿದ್ಧಾರೂಢರು ಕರುಣಿಸಿದ್ದಾರೆ. ಸುಖ ಪುಣ್ಯದ ಫಲವಾದರೆ, ದುಃಖ ಪಾಪದ ಫಲ. ದುಃಖವೆಂಬ ಸಂಸಾರ ಸಾಗರ ದಾಟಲು ಅಂಬಿಗನಂತೆ ಓಂ ನಮಃ ಶಿವಾಯ ಮಂತ್ರ ಸಹಾಯ ಮಾಡುತ್ತದೆ ಎಂದು ಶ್ರೀಗಳು ನುಡಿದರು.
ಶ್ರೀ ಸದ್ಗುರು ಸಿದ್ಧಾರೂಢರ ಕಥಾಮೃತ ಪುರಾಣ ಓದುವುದರಿಂದ ಮತ್ತು ಕೇಳುವುದರಿಂದ ಧರ್ಮ, ಅರ್ಥ, ಕಾಮ, ಮೋಕ್ಷಗಳು ಸಿದ್ಧಿಸುವವು. ಈ ಪುರಾಣ ನಾಲ್ಕು ವೇದಗಳ, 6 ಶಾಸ್ತ್ರ, 18 ಪುರಾಣ, 25 ಆಗಮಗಳನ್ನು ಒಳಗೊಂಡಿರುವ ಪವಿತ್ರ ಚರಿತ್ರೆಯಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಮನೆ ಮಾಡಿಕೊಂಡಿರುವ ದುಷ್ಟ ಗುಣಗಳನ್ನು ಸಂಹರಿಸಿ ಸುಗುಣವಂತರನ್ನಾಗಿಸುವ ಮಾರ್ಗವೇ ಸತ್ಸಂಗ. ಇಂತಹ ಸುಲಭ ಉಪಾಯವನ್ನು ಸಿದ್ಧಾರೂಢರು ಕರುಣಿಸಿದ್ದಾರೆ. ಅವರ ಕಥಾಮೃತವನ್ನು ತಿಂಗಳ ಪರ್ಯಂತ ಶ್ರವಣ ಮಾಡಿದ ನೀವೇ ಪುಣ್ಯವಂತರು ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ ಕಡೂರು, ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪ ಗೌಡ್ರ, ಎಂ.ಬಿ. ಚಿನ್ನಪ್ಪನವರ, ಗೋಪಾಲ ಕೊಡ್ಲೆàರ, ಬಸನಗೌಡ ಗಂಗನಗೌಡ್ರ, ಅರುಣಸ್ವಾಮಿ ಹಿರೇಮಠದ, ಶಿವಪ್ಪ ಬಣಕಾರ, ಗುಡ್ಡೇಶ ಹೆಡಿಯಾಲ, ಚಂದ್ರು ಕನ್ನಾಳ,
ಜಯಪ್ಪ ಚಳಗೇರಿ, ವಿದ್ಯಾಧರ ಹೆಡಿಯಾಲ, ಮಹಿಳೆಯರು ಮತ್ತು ಮಕ್ಕಳು ಮತ್ತಿತರರು ಇದ್ದರು.
ಶ್ರೀ ಸದ್ಗುರು ಸಿದ್ಧಾರೂಢರ ಕಥಾಮೃತ ಪುರಾಣ ಪ್ರವಚನ ಮಂಗಲೋತ್ಸವ ಬ್ರಾಹ್ಮಿ ಮಹೂರ್ತದಲ್ಲಿ ಸಿದ್ಧಾರೂಢರ ಮೂರ್ತಿಗೆ ಅಭಿಷೇಕ, ಶಿವಲಿಂಗುವಿಗೆ ರುದಾಭಿಷೇಕ, ಬಿಲ್ವಾರ್ಚನೆ, ವಿವಿಧ ಹೂವುಗಳಿಂದ ಅಲಂಕಾರ, ವಿಶೇಷ ಪೂಜೆಗಳು ನಡೆದವು. ನಂತರ ಸಿದ್ಧಾರೂಢರ ಮೂರ್ತಿ ಹಾಗೂ ಕಥಾಮೃತದ ಪಾಲಕಿ ಉತ್ಸವ ಬಾಜಾ ಭಜಂತ್ರಿ, ಸಮಾಳ, ಮಂಗಲ ವಾದ್ಯಗಳೊಂದಿಗೆ ಮಠದ ಪ್ರಮುಖ ಅಂಗಳದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು. ತದನಂತರ ಮಹಾಪ್ರಸಾದ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
ಹಾವೇರಿ: ಸಿದ್ದು ಅದೃಷ್ಟದ ಸಿಎಂ, ಬಿಎಸ್‌ವೈ ಹೋರಾಟ ಮಾಡಿ ಅಧಿಕಾರಕ್ಕೆ ಬಂದವರು-ವಿಜಯೇಂದ್ರ
Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ
MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.