ಹೆಬ್ರಿ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲೆಯಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರಿ ಕಾರ್ಯಾಗಾರ
ಮಕ್ಕಳ ಕೈಯಲ್ಲಿ ಅರಳಿದ ಬಗೆ ಬಗೆ ಬೆನಕ
Team Udayavani, Sep 16, 2023, 6:47 PM IST
ಹೆಬ್ರಿ: ಪರಿಸರಕ್ಕೆ ಪೂರಕವಾದ ಗಣಪತಿ ತಯಾರಿಕೆ ಬಗ್ಗೆ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಉದಯವಾಣಿ ಕಾಳಜಿ ಶ್ಲಾಘನೀಯ. ಉಡುಪಿ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆಯ್ಕೆ ಮಾಡಿರುವವುದರಿಂದ ನಮ್ಮ ವಿದ್ಯಾರ್ಥಿಗಳು ಭಾಗ್ಯವಂತರು ಎಂದು ಹೆಬ್ರಿ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲ ದಿವಾಕರ ಎಸ್ ಮರಕಾಲ ಹೇಳಿದರು.
ಅವರು ಸೆ.16 ರಂದು ಉದಯವಾಣಿ ವತಿಯಿಂದ ಹೆಬ್ರಿ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ನಡೆದ ಬೆಳಗಲಿ ಬೆನಕ ಪರಿಸರ ಸ್ನೇಹಿ ಗಣಪನ ಮೂರ್ತಿ ತಯಾರಿ ಪ್ರಾತ್ಯಕ್ಷಿಕೆ ಮತ್ತು ಪರಿಸರ ಸ್ನೇಹಿ ಆಚರಣೆಯ ಮಾಹಿತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಸರಕ್ಕೆ ಹಾನಿಯಾಗುವ ವಿಜೃಂಭಣೆ ಬೇಡ: ಹಿಂದೆ ಹಬ್ಬ ಹರಿದಿನಗಳು ಪರಿಸರ ಸ್ನೇಹಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಇದೀಗ ಅತಿ ವಿಜೃಂಭಣೆಯಿಂದ ಸಮಸ್ಯೆಯಾಗಿದೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಜೃಂಭಣೆಯಿಂದ ಸಂಭ್ರಮದ ಗಣೇಶೋತ್ಸವಗಳನ್ನು ಆಚರಣೆ ಮಾಡುವಲ್ಲಿ ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಉದಯವಾಣಿ ಸಂಪಾದಕ ಅರವಿಂದ ನಾವಡ ಹೇಳಿದರು.
ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಈ ಕಾರ್ಯಾಗಾರ ಅಭಿನಂದನೀಯ. ಪರಿಸರಕ್ಕೆ ಪೂರಕವಾಗ ಮಣ್ಣಿನ ಗಣಪತಿ ರಚನೆಯ ಬಗ್ಗೆ ಮಕ್ಕಳು ಮನೆಯವರ ಹಾಗೂ ಸುತ್ತಮುತ್ತಲಿನವರ ಗಮನಕ್ಕೆ ತಂದು ಪರಿಸರ ಸ್ನೇಹಿಯಾಗಿ ಆಚರಿಸಿದಾಗ ಈ ಕಾರ್ಯಾಗಾರದಿಂದ ಪರಿವರ್ತನೆ ಆದಂತೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರವೀಣ್ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಚಿತ್ರ ಕಲಾವಿದ ಪ್ರಥಮ ಕಾಮತ್ ಕಟಪಾಡಿ, ಕಲಾವಿದ ನಾಗೇಶ ಕಾಮತ್ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು. ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ವತಿಯಿಂದ ಭಾಗವಹಸಿದ ಎಲ್ಲಾ ಮಕ್ಕಳಿಗೆ ಅವೆ ಮಣ್ಣನ್ನು ನೀಡಿದರು.
ವಿದ್ಯಾರ್ಥಿಗಳಾದ ಸಂಜನಾ ಭಟ್, ಪ್ರತೀಕ್ಷಾ, ಶ್ರಾವ್ಯ ಪ್ರಭು ಗಣಪತಿ ಗೀತೆಗಳನ್ನು ಹಾಡಿದರು. ಉದಯವಾಣಿ ಹೆಬ್ರಿ ವಲಯ ವರದಿಗಾರ ಹೆಬ್ರಿ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಜಗದೀಶ್ ಭಂಡಾರಿ ಕಾಯ೯ಕ್ರಮ ನಿರೂಪಿಸಿ, ಶಿಕ್ಷಕ ಹಿರಿಯಣ್ಣ ಪೂಜಾರಿ ವಂದಿಸಿದರು.
ಯುವ ಕಲಾವಿದ ಪ್ರಥಮ ಕಾಮತ್ ಅತ್ಯಂತ ಸರಳ ರೀತಿಯಲ್ಲಿ ಪರಿಸರ ಪೂರಕ ಬಣ್ಣ ರಹಿತ ಗಣಪತಿ ತಯಾರಿ ಮಾಡುವ ವಿಧಾನವನ್ನು ಮಕ್ಕಳಿಗೆ ಹೇಳಿಕೊಟ್ಟರು.
ಹೆಬ್ರಿ ಸರಕಾರಿ ಪ್ರೌಢಶಾಲೆ, ಎಸ್ .ಆರ್ .ಪಬ್ಲಿಕ್ ಸ್ಕೂಲ್ ಹೆಬ್ರಿ, ಕಾರ್ಕಳ ಭುವನೇಂದ್ರ ರೆಸಿಡೆನ್ಸಿಯಲ್ ಸ್ಕೂಲ್ ನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಮಕ್ಕಳ ಕೈಯಲ್ಲಿ ಅರಳಿದ ಗಣಪತಿ ಕಲಾಕೃತಿ
ಕಾರ್ಯಾಗಾರದಲ್ಲಿ ಒಟ್ಟು 14 ತಂಡಗಳನ್ನಾಗಿ ಮಾಡಲಾಗಿದ್ದು ತಂಡಕ್ಕೆ ಮಣ್ಣುನ್ನು ನೀಡುತ್ತಿದ್ದಂತೆ ಆಸಕ್ತಿಯಿಂದ ಮಣ್ಣನ್ನು ಹದಮಾಡಿ ಗಣಪತಿಯ ವಿವಿಧ ಭಾಗಗಳ ತಯಾರಿಯಲ್ಲಿ ಮುಂದಾದರು. ಹೇಳಿಕೊಟ್ಟದ್ದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಆಸಕ್ತಿ ವಿವಿಧ ಬಗೆಯ ಗಣಪತಿಗಳ ತಯಾರಿಕೆ ಗಮನ ಸೆಳೆಯಿತು. ಗಣಪತಿ ರಚನೆಯ ಜತೆ ಭಾಗವಹಿಸಿದ ಮಕ್ಕಳು ಗಣಪತಿ ಹಾಡು ಹಾಡಿ ಸಂಭ್ರಮಿಸಿದರು. ಗಣಪತಿ ಬಗೆಗಿನ ರಸಪ್ರಶ್ನೆಯಲ್ಲಿ ಭಾಗವಹಿಸಿದರು. ಶಾಲಾ ಶಿಕ್ಷಕ ವೃಂದದ ಪ್ರೋತ್ಸಾಹದಿಂದ ಸುಮಾರು 300 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.