Nipah Virus ಕೇರಳದಲ್ಲಿ ನಿಫಾ ಆತಂಕ: ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ಸ್ಕ್ರೀನಿಂಗ್ ಆರಂಭ
Team Udayavani, Sep 16, 2023, 11:35 PM IST
ಮಂಗಳೂರು: ಕೇರಳದಲ್ಲಿ ನಿಫಾ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನಿಗಾ ಇರಿಸಲಾಗಿದೆ. ಕೇರಳದ ವಡಗರ, ಕೋಯಿಕ್ಕೋಡ್‌ನಿಂದ ದ.ಕ. ಪ್ರವೇಶ ಪಡೆಯುವ ವಾಹನಗಳನ್ನು ಜಿಲ್ಲೆಯ 11 ಕಡೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಮಂಗಳೂರಿನ ತಲಪಾಡಿ, ಸುಳ್ಯ ತಾಲೂಕಿನ ಮೂರೂರು ಜಾಲೂÕರು, ಬಡ್ಡಡ್ಕ, ಕನ್ನಡಿತೋಡು, ಪುತ್ತೂರು ತಾಲೂಕಿನ ಸ್ವರ್ಗ, ಮೆನಾಲ, ಸುಳ್ಯಪದವು, ಬಂಟ್ವಾಳ ತಾಲೂಕಿನ ಸಾರಡ್ಕ, ಸಾಲೆತ್ತೂರು, ಕನ್ಯಾನ, ಬೆರಿಪದವಿನಲ್ಲಿ ತಪಾಸಣೆ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ಸಿಬಂದಿ ಕೇರಳ ಭಾಗಗಳಲ್ಲಿ ವಡಕ್ಕರ, ಕಲ್ಲಿಕೋಟೆ ನೋಂದಣಿಯ ವಾಹನಗಳಲ್ಲಿ ಆಗಮಿಸುವವರನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಅವರಲ್ಲಿ ಜ್ವರದ ಲಕ್ಷಣ ಇದೆಯೇ ಎಂದು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸದ್ಯ ಯಾವುದೇ ರೀತಿಯ ಜ್ವರದ ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಐಸೊಲೇಶನ್
ವಾರ್ಡ್ ಸನ್ನದ್ಧ
ಕೇರಳದಲ್ಲಿ ನಿಫಾ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಒಂದು ವೇಳೆ ಜಿಲ್ಲೆಯಲ್ಲಿ ಅಂತಹ ರೋಗ ಲಕ್ಷಣ ಪತ್ತೆಯಾದರೆ ಅವರ ಚಿಕಿತ್ಸೆಗಾಗಿ ವೆನಾÉಕ್ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾ ಕೊಠಡಿ (ಐಸೊಲೇಶನ್ ವಾರ್ಡ್)ಯನ್ನು ಸನ್ನದ್ಧವಾಗಿಡಲಾಗಿದೆ.
ಅರಂತೋಡು: ಸಂಪಾಜೆ ಅರಣ್ಯ ತಪಾಸಣೆ ಚೆಕ್‌ಪೋಸ್ಟ್ ನಲ್ಲಿ ಕೇರಳ ರಾಜ್ಯದಿಂದ ಬರುವ ವಾಹನಗಳು ನಿಲ್ಲಿಸಿ ಪ್ರಯಾಣಿಕರ ತಪಾಸಣೆ ಆರಂಭಿಸಲಾಗಿದೆ.
ಕೇರಳ ರಾಜ್ಯದ ಗಡಿ ಜಿಲ್ಲೆ ಯಾದ ಕೊಡಗು ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಮನೆ ಭೇಟಿ ಮಾಡಿ ನಿಫಾ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಕಾರ್ಯಕರ್ತರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ತಲಪಾಡಿಯಲ್ಲಿ ಚೆಕ್ ಪಾಯಿಂಟ್
ಉಳ್ಳಾಲ: ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸಿ ಪ್ರಮುಖ ಗಡಿಪ್ರದೇಶವಾದ ರಾ.ಹೆ. 66ರ ತಲಪಾಡಿಯಲ್ಲಿ ದ.ಕ. ಜಿಲ್ಲಾ ಸರ್ವೇಕ್ಷಣಾಧಿಕಾರಿ ನೇತೃತ್ವದಲ್ಲಿ (ರ್‍ಯಾಂಡಂ ಫೀವರ್ ಸರ್ವೇ) ತಪಾಸಣೆ ಆರಂಭಿಸಲಾಗಿದೆ. ಶನಿವಾರ ಕೇರಳದ ಕೋಯಿಕ್ಕೋಡ್ ಮತ್ತು ವಡಗರ ಜಿಲ್ಲೆಗಳಿಂದ ಬಂದ ಸುಮಾರು 70 ವಾಹನಗಳ ಪ್ರಯಾಣಿಕರನ್ನು ತಲಪಾಡಿಯಲ್ಲಿರುವ ಕಿಯೋಸ್ಕ್ ನಲ್ಲಿ ತಪಾಸಣೆಗೆ ಒಳಪಡಿಸಿ ಅವರ ದೂರವಾಣಿ ಸಂಖ್ಯೆಯನ್ನು ಪಡೆದು ಪ್ರಯಾಣ ಮುಂದುವರಿಸಲು ಅವಕಾಶ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Ganesh: ಹಿರಿಯ ನಟ ಡೆಲ್ಲಿ ಗಣೇಶ್ ಇನ್ನಿಲ್ಲ
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Toxic: ಯಶ್ ಚಿತ್ರಕ್ಕೆ ಬಂದ ಹಾಲಿವುಡ್ ನ ಜೆ.ಜೆ.ಪೆರ್ರಿ
Final Verdict: ಬುಲ್ಡೋಜರ್ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್ ಅಂತಿಮ ತೀರ್ಪು
BGT: ಭಾರತ ವಿರುದ್ದದ ಮೊದಲ ಟೆಸ್ಟ್ ಗೆ ಆಸೀಸ್ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.